• Fri. May 3rd, 2024

ಇನ್ನೂ 5 ವರ್ಷಗಳಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ, ಬಿಡುಗಡೆಗಾಗಿ ಹೋರಾಡಿದ ಸುವರ್ಣ ಪೀಳಿಗೆಯ ಒಬ್ಬೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಜೀವಂತವಾಗಿ ಉಳಿದಿರುವುದಿಲ್ಲ-ಡಾ.ಪಿ.ಸಾಯಿನಾಥ್

PLACE YOUR AD HERE AT LOWEST PRICE

ಇದೇ ಜುಲೈ ೪ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ಘಟಿಕೋತ್ಸವದ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪರಿಸರವಾದಿ ಹಾಗೂ ಅಭಿವೃದ್ಧಿ ಪತ್ರಕರ್ತರು ಆದ ಡಾ.ಪಿ.ಸಾಯಿನಾಥ್ ರವರ ಆಂಗ್ಲ ಭಾಷಣವನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ ಅನುವಾದಿಸಿ ಓದುಗರಿಗಾಗಿ ನೀಡುತ್ತಿದ್ದೇವೆ:

ಡಾ.ಪಿ.ಸಾಯಿನಾಥ್ ರವರ ಭಾಷಣ:

ಗೌರವಾನ್ವಿತ ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರೇ, ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರೇ, ವಿಶ್ವವಿದ್ಯಾಲಯ ಉಪಕುಲಪತಿಗಳೇ, ಗೌರವ ಡಾಕ್ಟರೇಟ್ ಪುರಸ್ಕೃತರೇ, ಪದಕ ವಿಜೇತ ಪದವೀದರ ವಿದ್ಯಾರ್ಥಿಗಳೇ ಹಾಗೂ ನೆರೆದಿರುವಂತಹ ಗೆಳೆಯರೇ,

ನೀವು ನನ್ನನ್ನು ಮುಖ್ಯ ಅತಿಥಿಯಾಗಿ ಕರೆದಿರುವುದನ್ನು ಗೌರವಸುತ್ತೇನೆ. ಆದರೆ ನಿಮ್ಮನ್ನು ಮೆಚ್ಚಿಸಲು ಅರ್ಥವಿಲ್ಲದ ಮಾತಾಡಿ ಪ್ರೇಕ್ಷಕರನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಭಾವಿಸುತ್ತೇನೆ. ಒಂದು ಸಣ್ಣ ತಿದ್ದುಪಡಿ ಏನೆಂದರೆ ನಾನು ಪದ್ಮಶ್ರೀ ಪುರಸ್ಕೃತನಲ್ಲ, ಆದರೆ ನನಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿದ್ದು ನಿಜ, ಅದನ್ನು ನಾನು ನಿರಾಕರಿಸಿದ್ದೇನೆ. ಮನಮೋಹನ್ ಸಿಂಗ್ ಅವರು ನನಗೆ ವಿಶೇಷವಾಗಿ ತಿಳಿದಿದ್ದರೂ ಸಹ ನಾನು ಅದನ್ನು ನಿರಾಕರಿಸಿದೆ. ಹಾಗಂತ ನಾನು ಅಗೌರವ ತೋರಿದ್ದೇನಂತಲ್ಲಾ. ನನ್ನ ಪ್ರಕಾರ ಪತ್ರಕರ್ತರು ಸರ್ಕಾರದಿಂದ ಪ್ರಶಸ್ತಿಗಳನ್ನು ಸ್ವೀಕರಿಸಬಾರದು ಎಂದು ನಾನು ನಂಬುತ್ತೇನೆ. ಅದು ನನ್ನ ವೈಯಕ್ತಿಕ ದೃಷ್ಟಿಕೋನವೂ ಆಗಿದೆ.

ಈಗ ನಾವು ಇನ್ನೂ ೧೫ ನಿಮಿಷಗಳನ್ನು ಹೊಂದಿದ್ದೇವೆ. ಬಹಳ ಮುಖ್ಯವಾದ ವಿಷಯದ ಕುರಿತು ಹೇಳಬೇಕಿದೆ. ಅದು ಯುವಕರಿಗೆ ಮತ್ತು ನನ್ನ ಕೆಲಸಕ್ಕೆ ಅಗತ್ಯವಾದ ವಿಷಯಗಳಾಗಿವೆ ಎಂಬುದು ನಿಮಗೆ ತಿಳಿದಿರಲಿ. ಸ್ವಾತಂತ್ರ‍್ಯದ ೭೫ನೇ ಅಮೃತ ಮಹೋತ್ಸವ ಆಚರಿಸುವ ಹಾಗೂ ಪ್ರತಿಫಲಿಸುವ ಇಂದಿನ ಸಂದರ್ಭದಲ್ಲಿ, ಒಂದು ಕ್ಷಣ ನೀವು ಯೋಚಿಸಿ ನೋಡಿ, ಇನ್ನೂ ಐದು ವರ್ಷಗಳಲ್ಲಿ ನಿಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ಹಾಗೂ ನಿಮ್ಮ ಬಿಡುಗಡೆಗಾಗಿ ಹೋರಾಡಿದ ಸುವರ್ಣ ಪೀಳಿಗೆಯ ಒಬ್ಬೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಸಹ ಮುಂದಿನ ಯುವ ವಿದ್ಯಾರ್ಥಿ ಪೀಳಿಗೆಗೆ ಸ್ಪೂರ್ತಿಯಾಗಲು ಜೀವಂತವಾಗಿ ಉಳಿದಿರುವುದಿಲ್ಲ. ಇದು ನನಗೆ ಹೃದಯ ಒಡೆಯುವಂತ ಸಂಗತಿಯಾಗಿದೆ.

ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯವನ್ನು ಧಕ್ಕಿಸಿಕೊಟ್ಟು ಉಳಿದುಕೊಂಡಿರುವ ಕೆಲವೇ ಸ್ವಾತಂತ್ರ್ಯ ಹೋರಾಟಗಾರರು ಮುಂದಿನ ಐದು ವರ್ಷಗಳ ನಂತರದಲ್ಲಿ ನಮಗೆ ಮಾತನಾಡಿಲಿಕ್ಕಾಗಲೀ, ಚರ್ಚೆಗಾಗಲೀ, ನೋಡುವುದಕ್ಕಾಗಲೀ, ಕನಿಷ್ಟ ಸ್ಪರ್ಶಿಸುವುದಕ್ಕೂ ಸಿಗಲಾರದ ದಿನಗಳು ಸಮೀಪಿಸುತ್ತಿದೆ. ನಮ್ಮ ಮುಂದಿನ ಪೀಳಿಗೆಯು ಐದು ವರ್ಷಗಳ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾತುಗಳನ್ನು ಆಲಿಸಲು ಸಾಧ್ಯವಿಲ್ಲ, ಅವರನ್ನು ಸ್ಪರ್ಶಿಸಲು ಸಾಧ್ಯವಿಲ್ಲ, ನೋಡಲೂ ಸಾಧ್ಯವಿಲ್ಲ. ಹಾಗಾಗಿ ಇಲ್ಲಿಗೆ ಬಂದಿರುವ ಯುವ ವಿದ್ಯಾರ್ಥಿಗಳಿಂದ ನಾನು ಬಯಸುವುದೇನೆಂದರೆ, ಇಲ್ಲಿಂದ ನಿಮ್ಮ ಮನೆಗಳಿಗೆ ಹೋದ ಮೇಲೆ ನಿಮ್ಮ ನಿಮ್ಮ ಮನೆಗಳಲ್ಲಿರುವ ಅಜ್ಜ, ಅಜ್ಜಿಯಂದಿರ ಜೊತೆ ಮಾತನಾಡಿ, ನಿಮ್ಮ ಅಕ್ಕಪಕ್ಕದ ಗಲ್ಲಿಗಳಲ್ಲಿ ಇರುವ ವಯಸ್ಸಾದ ಹಿರಿಯರನ್ನು ಬೇಟಿ ಮಾಡಿ, ಪ್ರತಿ ಮನೆಯಲ್ಲೂ ಒಂದು ಸ್ವಾತಂತ್ರ್ಯ ಹೋರಾಟದ ಕಥೆ ಸಿಗುತ್ತವೆ. ನಿಮ್ಮ ಅಮೂಲ್ಯ ಸಮಯವನ್ನು ಅವರೊಂದಿಗೆ ಕಳೆಯಿರಿ. ಅವರಿಂದ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಕೇಳಿ ತಿಳಿಯಿರಿ .

ಕರ್ನಾಟಕದ ಈ ಹಿಂದಿನ ಮೈಸೂರು ರಾಜ್ಯದಲ್ಲೂ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರಲ್ಲಿ ಒಬ್ಬರ ಕುರಿತು ಒಂದು ಅದ್ಯಾಯವಾಗಿ ನನ್ನ ಹೊಸ ಪುಸಕ್ತದಲ್ಲಿ ಸೇರಿಸಿದ್ದೇನೆ. ಜೀವಂತ ಉಳಿದಿದ್ದ ೧೫ ಜನ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ೮ ಜನರನ್ನು ನಾನು ಆ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಅವರಲ್ಲಿ ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಹೆಚ್.ಎಸ್.ದೊರೆಸ್ವಾಮಿಯವರು ಒಬ್ಬರು. ಅವರಿಗಿದ್ದ ಬದ್ದತೆ ಹೋರಾಟಗಾರರ ಪಾತ್ರವನ್ನು ಭಿನ್ನವಾಗಿ ಪ್ರತಿಬಿಂಸುತ್ತದೆ. ದೊರೆಸ್ವಾಮಿಯವರು ಸಹ ಪತ್ರಕರ್ತರಾಗಿ ಒಟ್ಟು ಆರು ಟೈಟಲ್‌ಗಳನ್ನು ಪಡೆದುಕೊಂಡಿದ್ದರು, ಪ್ರತಿಸಾರಿ ಬಿಟ್ರೀಶರು ಒಂದು ಪತ್ರ‍್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಾಗ ಅದೇ ಮಾದರಿ ಮತ್ತೊಂದು ಶೀರ್ಷಿಕೆಯ ಪತ್ರಿಕೆಯನ್ನು ಹೊರತರುತ್ತಿದ್ದರು.

ಈ ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಆತ್ಮ ಮತ್ತು ಪಾತ್ರವನ್ನು ನೋಡಿ, ನಾನು ಕೂಡ ನೋಡಿಕೊಂಡು ಬೆಳೆದ ಪೀಳಿಗೆ ಇದು ದೊರೈಸ್ವಾಮಿ ಆಧುನಿಕ ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ವೀರನಾಯಕ. ನಾನು ೩೭ ವರ್ಷಗಳು ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ನಾವು ಪ್ರತಿ ವರ್ಷ ಇತಿಹಾಸ ಭೋದನೆಯಲ್ಲಿ ಯುವಕರನ್ನು ಬೆಚ್ಚಿಬೀಳಿಸಿದ್ದೇವೆ. ಬ್ರಿಟಿಷ್ ವಸಾಹತುಶಾಹಿಯ ಮೂಲ ಮಾದ್ಯಮವೇನು?, ಯಾಕಾಗಿ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಯಿತು?. ವಿನಾಶಕ್ಕೆ ಒಳಗಾದ ಜನರ ಮೇಲೆ ವಸಾಹತುಶಾಹಿ ಯಾವ ರೀತಿಯ ಅಪರಾಧಗಳನ್ನು ಉಂಟು ಮಾಡಿತು? ಎಂಬುದರ ಬಗ್ಗೆ ಇಂಚಿಂಚು ತಿಳಿಸಿದ್ದೇವೆ.

ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚುವರಿಯಾಗಿ ಎಷ್ಟು ಜನರು ಮರಣಹೊಂದಿದರು ಎಂದು ನಿಮಗೆ ಗೊತ್ತೆ, ಸರ್ಕಾರದ ಅಂಕಿಅಂಶಗಳ ಪ್ರಕಾರ ಸುಮಾರು ೪ ಲಕ್ಷಕ್ಕೂ ಹೆಚ್ಚು ಜನರು ಹೆಚ್ಚುವರಿಯಾಗಿ ನಿಧನ ಹೊಂದಿದರು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತಿತರೆ ಸಂಸ್ಥೆಗಳ ಪ್ರಕಾರ ಸುಮಾರು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಮರಣಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತವನ್ನು ಆಳಿದ ಬ್ರಿಟೀಷ್ ಆಡಳಿತದಲ್ಲಿ ಎಷ್ಟು ಜನ ಹೆಚ್ಚುವರಿಯಾಗಿ ಮರಣಹೊಂದಿದರೆಂದು ನಿಮಗೆ ಗೊತ್ತೆ? ಬ್ರಿಟನ್ ದೇಶದ ಆರ್ಥಿಕ ಜನ ಸಂಖ್ಯಾಶಾಸ್ತ್ರದ ಇತ್ತೀಚಿನ ಸಂಶೋಧನೆ ಪ್ರಕಾರ ಭಾರತದಲ್ಲಿ ಬ್ರಿಟೀಷ್ ಆಳ್ವಿಕೆಯಲ್ಲಿ ಹೆಚ್ಚುವರಿಯಾಗಿ ಮರಣಹೊಂದಿದವರ ಸಂಖ್ಯೆ ೧೬೮ ಮಿಲಿಯನ್ ಜನರು ಎಂದು ಹೇಳಲಾಗಿದೆ. ೧೮೮೧ ರಿಂದ ೧೯೨೧ರ ಕಾಲಘಟ್ಟದಲ್ಲಿ ಸುಮಾರು ೫೦ ಮಿಲಿಯನ್ ಭಾರತೀಯರು ಹೆಚ್ಚುವರಿಯಾಗಿ ಮರಣಹೊಂದಿದ್ದಾರೆ.

ಇದು ಸಾಮಾನ್ಯಕ್ಕಿಂತ ಹೆಚ್ಚುವರಿ ಸಾವುಗಳಾಗಿದ್ದವು. ಆಗ ಭಾರತದಲ್ಲಿ ಪಾಕಿಸ್ಥಾನ, ಬಾಂಗ್ಲಾದೇಶ, ಬರ್ಮಾ ದೇಶಗಳನ್ನು ಒಳಗೊಂಡಿತ್ತು. ಒಂದು ವೇಳೆ ಇದರ ಶೇ.೧ರಷ್ಟು ಜನ ಯೂರೋಪ್ ರಾಷ್ಟ್ರಗಳಲ್ಲಿ ಮರಣಹೊಂದಿದ್ದರೆ ಅದನ್ನು ನರಮೇದ ಎಂದು ಬಿಂಬಿಸಲಾಗುತ್ತಿತ್ತು. ಭಾರತದ ಬ್ರಿಟೀಷ್ ಆಳ್ವಿಕೆಯಲ್ಲಿ ೧೬೮ ಮಿಲಿಯನ್ ಜನರು ಅಸ್ವಾಭಾವಿಕವಾಗಿ ಮರಣಹೊಂದಿದ್ದರೂ ಅವರಿಗೆ ಗೌರವವನ್ನೂ ಸಲ್ಲಿಸುತ್ತಿಲ್ಲ. ಆದರೆ, ಕಳೆದ ವರ್ಷ ರಾಜಪ್ರಭುತ್ವ ಮತ್ತು ವಸಾಹತುಶಾಹಿಯ ಸಂಕೇತವಾಗಿ ಬ್ರಿಟನ್ ದೇಶದ ಎಲಿಜಿಬಾತ್ ರಾಣಿಯ ಸಾವಿಗೆ ಸಂತಾಪ ಸೂಚಿಸಲು ನಾವು ಭಾರತೀಯ ಧ್ವಜವನ್ನು ಕೆಳಗಿಳಿಸಿದೆವು! ಇದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಪ್ರಶ್ನಿಸಿದರು. ಇದು ಘನತೆಯೇ, ಇದಕ್ಕಾಗಿ ನಾವು ತ್ಯಾಗ ಮಾಡಿದೆವಾ ಎಂದರು, ಆಗ ನಾನು ಹೇಳಿದೆ, ಒಂದು ರಾಷ್ಟ್ರದ ವಸಾಹತು ಶಾಹಿಯ ಸ್ಮರಣೆಯನ್ನು ಅಳಿಸಿ ಹಾಕಿದಾಗ ಇದು ಸಂಭವಿಸುತ್ತದೆ.

ಇತಿಹಾಸವು ಯಾವಾಗಲೂ ವಿಜಯಶಾಲಿಯಿಂದ ಬರೆಯಲ್ಪಟ್ಟಿದೆ. ಸುಂದರವಾದ ಆಫ್ರಿಕನ್ ನಾಣ್ಣುಡಿ ಇದೆ ಸಿಂಹಗಳು “ಇತಿಹಾಸಕಾರರಾಗಿದ್ದರೆ ಕಾಡಿನ ಕಥೆಗಳು ಬೇಟೆಗಾರನ ಪರವಾಗಿರುವುದಿಲ್ಲ”, ನನಗೆ “ನಮ್ಮ ಕೊನೆಯ ಸ್ವಾತಂತ್ರ‍್ಯ ಹೋರಾಟಗಾರರು ಸಿಂಹಗಳೇ” ನಾವು ಅವರನ್ನು ಪಾಲಿಸಬೇಕು ಅವರು ಮಾಡಿದ ಕೆಲಸಗಳನ್ನು ನೀವು ನಂಬಬಹುದು ಮತ್ತು ಪ್ರಾಸಂಗಿಕವಾಗಿ ನಿಮ್ಮ ಸ್ವಾತಂತ್ರ‍್ಯವು ಆಕ್ಸ್ಫರ್ಡ್, ಕೇಂಬ್ರಿಡ್ಜ್ಗಳಿಂದ ಬಂದಿರುವುದಲ್ಲ. ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರು ಯಾರು ಎಂದು, ಭಗತ್‌ಸಿಂಗ್ ನಾಲ್ಕು ಬಾರಿ ಬರೆದಿದ್ದಾರೆ. ಸ್ವತಃ ಮಹಾತ್ಮಾ ಗಾಂಧಿಯವರು ಪದೇ ಪದೇ ಹೇಳಿದ್ದಾರೆ. ಮುಂದುವರೆದು ಗಾಂಧಿ ಒಂದು ಸುಂದರ ವಾಕ್ಯವನ್ನು ಹೇಳಿದ್ದಾರೆ “ಮಹಾಪುರುಷರು ಕ್ರಾಂತಿಗೆ ಕಾರಣರಾಗುತ್ತಾರೆ”. ಆದರೆ ನಿಜವಾಗಿ ಹೇಳುವುದಾದರೆ ಜನರೇ ಕಾರಣ. ಅದೂ ಸಾಮಾನ್ಯ ಜನರು. ಭಗತ್ ಸಿಂಗ್ ಅವರು ಜೈಲಿನಿಂದ ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ಕ್ರಾಂತಿಕಾರಿಗಳು ನಾವು ಎಲ್ಲಾ ಕೀರ್ತಿ ಮತ್ತು ಕೀರ್ತಿಯನ್ನು ಪಡೆಯುತ್ತೇವೆ ನಾವು ಸ್ವಾತಂತ್ರ್ಯದ ಮಹಾನ್ ಆವೃತ್ತಿಗಳಲ್ಲಿ ವಜ್ರಗಳು ಮತ್ತು ರತ್ನಗಳು ಆದರೆ ನಾವು ಅಡಿಪಾಯವಲ್ಲ ಕೇವಲ ಸಾಮಾನ್ಯ ಜನರು.

೧೭೬೦ ರಿಂದ ಪೂರ್ವದ ಜಂಗಲ್ ಮಹಲ್‌ನ ಜನರು ಈಗಾಗಲೇ ಈಸ್ಟ್ ಇಂಡಿಯಾ ಕಂಪನಿಯನ್ನು ವಿರೋಧಿಸುತ್ತಿದ್ದರು. ದಕ್ಷಿಣದಲ್ಲಿ ನಮಗೆ ಟಿಪ್ಪು ಸುಲ್ತಾನ್, ವೀರಪಾಂಡಿಯ ಕಟ್ಟಬೊಮ್ಮನ್ ಅವರ ಹಿಂದೆ ಸಾವಿರಾರು ಜನ ಸಾಮಾನ್ಯರು ತುಂಬಾ ಸಾಮಾನ್ಯ ಜನರು ಇದ್ದರು . ಪೂರ್ವದಲ್ಲಿ ಆದಿವಾಸಿಗಳು ಸ್ವಾತಂತ್ರ್ಯಕ್ಕಾಗಿ ಮೊದಲು ಸತ್ತವರು, ಅದರ ಲಾಭವನ್ನು ಕೊನೆಯವರು. ಆದಿವಾಸಿಗಳು ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಗುಂಪುಗಳನ್ನು ಬಿಲ್ಲು ಮತ್ತು ಬಾಣಗಳೊಂದಿಗೆ  ತೆಗೆದುಕೊಂಡರು. ಇಂದು ಅವರ ಸಹೋದರ ಸಿದ್ದು ಖಾನೋ ವಿಶ್ವವಿದ್ಯಾಲಯದ ಹೆಸರಿದೆ. ಆದರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿದ್ದು ಯಾರೆಂದು ತಿಳಿದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ನಾವು ತಿಳಿದುಕೊಳ್ಳಬೇಕು.

ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರಾದ ರಾಮಚಂದ್ರ ಶ್ರೀಪತಿ ಲಾಡ್ ಎಂಬುವವರು ತಮ್ಮ ಹೋರಾಟದ ದಿನಗಳಲ್ಲಿ ಭೂಗತರಾಗಿದ್ದಾಗ ಕ್ಯಾಪ್ಟನ್ ಭಾವ್ ಎಂದೇ ಖ್ಯಾತಿ ಪಡೆದವರು, ಅಂದ್ರೆ ಹಿರಿಯಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಇವರು ತೂಫಾನ್ ಸೇನಾ ಎಂಬ ಪ್ರತ್ಯೇಕ ಸಶಸ್ತ್ರ ಪಡೆಯನ್ನು ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ತಾತ್ಕಾಲಿಕ ಸರ್ಕಾರವನ್ನೇ ನಡೆಸಿದರು. ಸತಾರಾ ಪ್ರದೇಶವನ್ನು ೧೯೮೩ರಲ್ಲೇ ಸ್ವತಂತ್ರವೆಂದು ಘೋಷಿಸಿಕೊಂಡಿದ್ದರು. ಸುಮಾರು ೬೦೦ ಹಳ್ಳಿಗಳನ್ನು ಮೂರು ವರ್ಷಗಳ ಕಾಲ ತಮ್ಮ ಅಧೀನದಲ್ಲಿಟ್ಟುಕೊಂಡು ಬ್ರಟೀಷರನ್ನು ಒಳಗೂ ಬಿಟ್ಟುಕೊಂಡಿರಲಿಲ್ಲ. ಈ ರೀತಿಯಲ್ಲಿ ಅವರ ಹೋರಾಟವಿತ್ತು. ಈ ಹೋರಾಟದ ನೇತೃತ್ವದಲ್ಲಿದ್ದ ಕ್ಯಾಪ್ಟನ್ ಭಾವ್ ತಮ್ಮ ೯೫ರ ವಯಸ್ಸಿನಲ್ಲೂ ಹೋರಾಟದ ಕಿಚ್ಚು ಕಳೆದುಕೊಂಡಿಲ್ಲ, ಇತ್ತೀಚಿನ ಸಾಂಗ್ಲಿ ಪಾದಯಾತ್ರೆಯಲ್ಲಿ ೪೦ ಡಿಗ್ರಿ ಉಷ್ಣಾಂಶದಲ್ಲೂ ನನಗಿಂತಲೂ ಜೋರಾಗಿ ಯುವಕನಂತೆ ನಡೆಯುತ್ತಿದ್ದರು. ಈ ಬಗ್ಗೆ ನಾನು ಕೇಳಿದಾಗ ಅವರು ಹೇಳಿದ್ದೇನೆಂದರೆ ಆಗಲೂ ನಾವು ಕಾರ್ಮಿಕರು ಮತ್ತು ರೈತರಿಗಾಗಿ ನಡೆದೆವು ಈಗಲೂ ಸಹ ಕಾರ್ಮಿಕರು ಮತ್ತು ರೈತರಿಗಾಗಿ ನಡೆಯುತ್ತಿದ್ದೇವೆ ಎಂದರು. ಈ ರೀತಿಯ ಜನರೇ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದವರು.

ಸ್ವಾತಂತ್ರ್ಯಾ ಸಂಗ್ರಾಮದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಅವರು ತಮ್ಮ ಅಧ್ಯಯನವನ್ನು ನಾಶಪಡಿಸಿಕೊಂಡರು, ಅವರಲ್ಲಿ ಅನೇಕರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲಿಲ್ಲ ತಮಿಳುನಾಡಿನ ಮಧುರೈ ವಿಶ್ವವಿದ್ಯಾನಿಲಯದ ಪ್ರತಿಭವಂತ ವಿದ್ಯಾರ್ಥಿ ಎನ್.ಶಂಕರಯ್ಯ ಅಂತಿಮ ಪರೀಕ್ಷೆಗಳಿಗೆ ೧೫ ದಿನಗಳ ಮೊದಲು ಬಂಧನಕ್ಕೆ ಒಳಪಡುತ್ತಾರೆ. ತನ್ನ ಪದವಿಯನ್ನು ಪೂರ್ಣಗೊಳಿಸಲಿಲ್ಲ. ಬಿಡುಗಡೆಯಾಗಿ ಹೊರಬಂದ ಅವರು ನೇರವಾಗಿ ಮದುರೈ ಪಟ್ಟಣದ ಕಾರ್ಪೋರೇಷನ್ ಮೈದಾನಕ್ಕೆ ತೆರಳಿ ಅಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಮತ್ತು ಮದ್ಯರಾತ್ರಿ ಪ್ರತಿಭಟನಾ ಮೆರವಣಿಯಲ್ಲಿ ಭಾಗವಹಿಸುತ್ತಾರೆ. ನಾನು ನಿಮಗೆ ಹೇಳ ಬಯಸುವುದೇನೆಂದರೆ, ದಯವಿಟ್ಟು ಇದನ್ನು ತಿಳಿದುಕೊಳ್ಳಿ ಈ ಜನರು ಬೇರೆ ಯಾರೂ ಅಲ್ಲ ನೀವು ಮತ್ತು ನಾವು, ಅಂದ್ರೆ ಸಾಮಾನ್ಯ ಜನರು ಎಂದು ನಾನು ಹೇಳ ಬಯಸುತ್ತೇನೆ. ಈಗ ಇಲ್ಲಿರುವ ವಿದ್ಯಾರ್ಥಿಗಳು ಒಂದು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ, ನೀವು ಇಲ್ಲಿಂದ ಹಿಂತಿರುಗಿ ಮನೆಗೆ ಹೋದ ಮೇಲೆ ನಿಮ್ಮ ಅಜ್ಜಅಜ್ಜಿಯರೊಂದಿಗೆ ಮಾತನಾಡಿ ಪ್ರತಿ ಕುಟುಂಬವು ಒಂದು ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಹೊಂದಿದೆ. ಏಕೆಂದರೆ ಹೇಗೆ ನಮ್ಮ ಶ್ರೇಷ್ಠ ಸ್ವಾತಂತ್ರ್ಯಾ ಸಂಗ್ರಾಮವು ವಿಕಸನಗೊಂಡಿತು ಎಂದು ತಿಳಿಸುತ್ತದೆ.

ಕೊನೆಯದಾಗಿ ಹೇಳಬೇಕೆಂದರೆ, ನಾನು ಇತ್ತೀಚೆಗೆ ಕ್ಯಾಪ್ಟನ್ ಭಾವ್ ಅವರನ್ನು ಬೇಟಿ ಮಾಡಿದಾಗ ಅವರೊಂದು ಮಾತು ಹೇಳಿದರು. ಗೊಂದಲಕ್ಕೀಡಾಗಬೇಡಿ , ನಾವು ಎರಡು ವಿಷಯಗಳಿಗಾಗಿ ಹೋರಾಡಿದ್ದೇವೆ ನಾವು ಸ್ವತಂತ್ರ್ಯಕ್ಕಾಗಿ(independence) ಹೋರಾಡಿದ್ದೇವೆ ನಾವು ಸ್ವಾತಂತ್ರ‍್ಯಕ್ಕಾಗಿ(freedom)  ಹೋರಾಡಿದ್ದೇವೆ. ನಾವು  ಸ್ವತಂತ್ರ್ಯ(independence) ಸಾಧಿಸಿದ್ದೇವೆ, ಆದರೆ, ಸ್ವಾತಂತ್ರ‍್ಯ (freedom) ಅದೊಂದು ಧೀರ್ಘಕಾಲಿಕ ದೊಡ್ಡ ಯೋಜನೆ. ನೀವೆಲ್ಲರೂ ಹೋರಾಡಬೇಕಾದ ದೊಡ್ಡ ಯೋಜನೆಯಾಗಿದೆ. ಎಲ್ಲಾ ಸ್ವಾತಂತ್ರ‍್ಯ ಹೋರಾಟಗಾರರು ಸ್ವತಂತ್ರ್ಯ ಮತ್ತು ಸ್ವಾತಂತ್ರ‍್ಯದ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅವರು ಮಾತನಾಡುತ್ತಿದ್ದ ಸ್ವಾತಂತ್ರ‍್ಯ ಯಾವುದು ಹಾಗಾದರೆ ಅವರು ಮಾತನಾಡುತ್ತಿರುವ ಸ್ವಾತಂತ್ರ‍್ಯ ಎಂದರೆ ಏನು ? ಅದು ನಾನು ನಿಮ್ಮ ಮುಂದಿಡುವ ನನ್ನ ಕೊನೆಯ ವಿಷಯ. ಅವರ ಪ್ರಕಾರ ಸ್ವತಂತ್ರ (independence ) ಎಂದರೆ  ಅನುಸರಿಸುತ್ತಿರುವ ಆಡಳಿತಗಾರನನ್ನು ಹೊರಹಾಕುವುದು. ಆದರೆ, ಸ್ವಾತಂತ್ರ‍್ಯವು (freedom) ಎಂದರೆ ಸ್ವಾತಂತ್ರ‍್ಯದ ಅತ್ಯುತ್ತಮ ತಾಣವಾಗಿದೆ .ಅವರೆಲ್ಲರೂ ಅದು ಭಾರತದ ಸಂವಿಧಾನದಲ್ಲಿದೆ ಎಂದು ಹೇಳಿದರು.

ಓದಿ ಎಲ್ಲರಿಗೂ ನ್ಯಾಯ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಮಾನತೆ, ಭ್ರಾತೃತ್ವ ಸ್ವಾತಂತ್ರ‍್ಯ (liberty) . ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ನಾನು ಎರಡನ್ನು ತೆಗೆದುಕೊಳ್ಳುತ್ತೇನೆ ನನಗೆ ಇದೆ ಬೇಡ, ನಾನು ಸ್ವಾತಂತ್ರö್ಯ ಮತ್ತು ಸಮಾನತೆಯನ್ನು ತೆಗೆದುಕೊಳ್ಳುತ್ತೇನೆ ಸೋದರತ್ವವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗದು, ಅವರು ಅದನ್ನು ಅರ್ಥಹೀನ ಎಂದು ಹೇಳಿದರು. ಅವುಗಳೆಲ್ಲಾ ಒಟ್ಟಿಗೆ ಇರದ ಹೊರತು ಅದಕ್ಕೆ ಮೌಲ್ಯವಿರುವುದಿಲ್ಲ. ಸ್ವಾತಂತ್ರ‍್ಯ ಸಮಾನತೆ ಭ್ರಾತೃತ್ವ ಒಂದು ಪ್ಯಾಕೇಜ್. ಅದು ನಿಮಗೆ ಇದು ಅಗತ್ಯವಿದೆ ಮತ್ತು ಭಾರತದ ಸಂವಿಧಾನದ ನಿರ್ದೇಶನ ತತ್ವಗಳು ಆರೋಗ್ಯ ಮತ್ತು ಆಹಾರದ ಹಕ್ಕು, ಕೆಲಸ ಮಾಡುವ ಹಕ್ಕು ನೀಡಿದೆ. ಸಂವಿಧಾನ ಓದಿನಲ್ಲಿ ಸಮರ್ಥಿಸಿಕೊಳ್ಳಬಹುದಾಗಿದೆ. ನೀವು ನನಗೆ ಸ್ಫೂರ್ತಿ ನೀಡುತ್ತಿರುವ ೨೦೦೯ರಲ್ಲಿ ಅನೇಕ ಹದಿಹರೆಯದ ವಿದ್ಯಾರ್ಥಿಗಳು ಕಾಲೇಜುಗಳ ದ್ವಾರದಲ್ಲಿ ನಿಂತು ಸಂವಿಧಾನದ ಪೀಠಿಕೆಯನ್ನು ಓದುತ್ತಿದ್ದ ದೃಶ್ಯಗಳು ನನಗೆ ತುಂಬಾ ಹೆಮ್ಮೆ ತಂದಿತು ಹಾಗೂ ಸ್ಪೂರ್ತಿ ತುಂಬಿದ್ದೀರಿ. ಸ್ವಾತಂತ್ರ‍್ಯ ಹೋರಾಟದ ಕೊನೆಯ ಕಥೆಗಳಿಗಾಗಿ ನಿಮ್ಮ ಏರಿಯಾಗಳಲ್ಲಿ, ನಿಮ್ಮ ಕುಟುಂಬಗಳಲ್ಲಿ ನೋಡಿ, ಅವರನ್ನು ಗೌರವಿಸಿ, ಸ್ವತಂತ್ರ್ಯ(independence)ವನ್ನು ಗೌರವಿಸಿ, ಸ್ವಾತಂತ್ರ‍್ಯದ ಖಾತರಿಯನ್ನು ಸಂವಿಧಾನವನ್ನು ಪಾಲಿಸಿ ಮತ್ತು ಸಾಧಿಸಿ.

ಧನ್ಯವಾದ.

ಕನ್ನಡಕ್ಕೆ ಅನುವಾದ : ಸಿ.ವಿ.ನಾಗರಾಜ್, ಕೋಲಾರ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!