• Fri. May 3rd, 2024

PLACE YOUR AD HERE AT LOWEST PRICE

ಮಾಲೂರು:   ಪ್ರಸಕ್ತ ಜುಲೈ ತಿಂಗಳ ೬ರಂದು ತಾಲ್ಲೂಕಿನ ಆಲಂಬಾಡಿ ಗೇಟ್ ಸಮೀಪ ಇರುವ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ದೃಶ್ಯ-೨೦೨೩ ಅತ್ಯಂತ ವರ್ಣರಂಜಿತವಾಗಿ ಮೂಡಿಬರುವ ಮೂಲಕ ನೆರೆದಿದ್ದವರ ಕಣ್ಮನ ಸೆಳೆಯಿತು. ಸುಮಾರು ೨೧ ಕಾಲೇಜುಗಳಿಂದ ೩೩೪ ವಿದ್ಯಾರ್ಥಿಗಳು ಫ್ಯಾಷನ್ ವಾಕ್ ಮತ್ತು ಮೈಮ್, ಮೆಹಂದಿ, ರಂಗೋಲಿ, ಚಿತ್ರ ಬಿಡಿಸುವ ಸ್ಪರ್ಧೆ, ರೀಲ್ಸ್ ತಯಾರಿಸುವ ಸ್ಪರ್ಧೆ, ಛಾಯಾಗ್ರಹಣ, ಥ್ರಶರ್ ಬೇಟೆ, ಫೇಸ್ ಪೇಂಟಿಂಗ್, ಬೆಸ್ಟ್ ಔಟ್ ಆಫ್ ಬೆಸ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಪದವಿ ಕಾಲೇಜಿನ ಪ್ರಾಂಶುಪಾಲ ಫಾದರ್ ಜಿನ್ಸ್ ಜಾರ್ಜ್ ಸಿಎಂಐ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಗದಲ್ಲಿ ಸ್ಪರ್ಧೆ ಎಂಬುದು ತುಂಬಾ ಮುಖ್ಯವಾಗಿದೆ ಹಾಗಾಗಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಆಗಮಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯಶೀಲರಾಗಿರುವುದು ತುಂಬಾ ಸಂತಸದ ವಿಚಾರ ಎಂದು ತಿಳಿಸಿ ಎಲ್ಲಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಈ ಕೆಳಕಂಡಂತಿದೆ: ಫ್ಯಾಷನ್ ವಾಕ್ ಮತ್ತು ಮೈಮ್ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ: ನಾಗಾರ್ಜುನ ಕಾಲೇಜು, ಮೆಹಂದಿ ಸ್ಪರ್ಧೆಯಲ್ಲಿ: ಸರ್ಕಾರಿ ಪದವಿ ಕಾಲೇಜು ಬಂಗಾರಪೇಟೆ ಪ್ರಥಮ ಬಹುಮಾನ, ರಂಗೋಲಿ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಮಂಗಸಂದ್ರ ಪ್ರಥಮ ಬಹುಮಾನ, ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕೃಪಾನಿಧಿ ಕಾಲೇಜು ಬೆಂಗಳೂರು ಪ್ರಥಮ ಬಹುಮಾನ, ರೀಲ್ಸ್ ತಯಾರಿಸುವ ಸ್ಪರ್ಧೆಯಲ್ಲಿ ಸೇಂಟ್ ಪ್ರಾನ್ಸಿಸ್ ಕಾಲೇಜು ಪ್ರಥಮ ಬಹುಮಾನ.

ಛಾಯಾಗ್ರಹಣ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾನಿಕೇತನ ದೊಮ್ಮಸಂದ್ರ ಕಾಲೇಜು ಪ್ರಥಮ ಬಹುಮಾನ, ಥ್ರಶರ್ ಬೇಟೆ, ಫೇಸ್ ಪೇಂಟಿಂಗ್, ಬೆಸ್ಟ್ ಔಟ್ ಆಫ್ ಬೆಸ್ಟ್ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಹಾಗೂ ಈ ದಿನದ ಓವರಾಲ್ ಚಾಂಪಿಯನ್ಶಿಪ್ ಅನ್ನು ಕೂಡ ಶಿಷ್ಯ ಸ್ಕೂಲ್ ಹೊಸೂರುರವರು ಪಡೆಯುವುದರ ಮೂಲಕ ಕಾರ್ಯಕ್ರಮದಲ್ಲಿ ವಿಜೃಂಭಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಎಬಿನ್ ವಿ ಪ್ರಾನ್ಸಿಸ್ ಸಿಎಂಐ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಬಿನೋಜ್, ಹಲವಾರು ಗಣ್ಯರು, ಕಾಲೇಜಿನ ಆಡಳಿತ ಅಧಿಕಾರಿ ರಿಚರ್ಡ್ ಸ್ಟಾಲಿನ್ ಪಾಲ್,ಎನ್ ಸಿ ಸಿ ಅಧಿಕಾರಿ ಅಬ್ರಾಹಂ ಲಿಂಕನ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!