• Tue. Apr 30th, 2024

PLACE YOUR AD HERE AT LOWEST PRICE

ಕೆಜಿಎಫ್:ಕರ್ನಾಟಕ ರಾಜ್ಯವು ವಿಶಾಲವಾದ ಅನೇಕ ಜಲಸಂಪನ್ಮೂಲಗಳನ್ನು ಹೊಂದಿದ್ದು ಮೀನು ಅಭಿವೃದ್ದಿಗೆ ಹೆಚ್ಚು ಸೌಲಭ್ಯಗಳನ್ನು ನೀಡಿದೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೀನುಗಾರರ ಸಹಕಾರ ಒಕ್ಕೂಟಗಳ ರಾಜ್ಯಾಧ್ಯಕ್ಷ ಅ,ಮು,ಲಕ್ಷ್ಮೀನಾರಾಯಣ ಹೇಳಿದರು.

ತಾಲ್ಲೂಕಿನ ಬೇತಮಂಗಲದ ಮೀನುಗಾರಿಗೆ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮೀನುಗಾರರ ಕಲ್ಯಾಣ ಅಭಿವೃದ್ದಿ ಕಾರ್ಯಕ್ರಮಗಳು ಮತ್ತು ಮೀನು ಕೃಷಿಕರಿಗೆ ಬೇಕಾದ ಹಲವು ಕಾರ್ಯಕ್ರಮಗಳು ಮೀನುಗಾರಿಕೆ ಇಲಾಖೆ ಹಮ್ಮಿಕೊಂಡಿದೆ.

ಇಲಾಖೆಯು ಮೀನುಮರಿಗಳನ್ನು ತಂದು ಒಂದು ಹಂತದವರೆಗೆ ಪೋಷಿಸಿ ನಂತರ ಕೃಷಿಕರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ರೈತರು ಎಲ್ಲಾ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಕೆರೆಗಳಲ್ಲಿ ಸಿಡಿಮದ್ದು ಮತ್ತು ವಿಷಕಾರಿ ವಸ್ತುಗಳನ್ನು ಕಲಬೆರೆಕೆ ಮಾಡುವುದರಿಂದ ಮೀನುಗಳು ಸಾಯುತ್ತವೆ. ಇದರಿಂದ ಮೀನಿನ ಸಂತತಿಗೆ ಹಾಗೂ ಮಾನವ ಜೀವನಕ್ಕೆ ಅಪಾಯಕಾರಿ ಆದುದರಿಂದ ಮೀನುಗಾರಿಕೆಗೆ ಕೆರೆಗಳನ್ನು ಗುತ್ತಿಗೆ ಪಡೆದಿರುವವರು ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕೆಂದರು.

ಮೀನುಗಾರರ ಸೌಲಭ್ಯಕ್ಕೆ ಮನವಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ಮೀನುಗಾರಿಕೆ ಇಲಖೆಯ ಸಚಿವರನ್ನು ಇತ್ತೀಚಿಗೆ ಭೇಟಿ ಮಾಡಿ ಮೀನು ಕೃಷಿಗೆ ಉತ್ತೇಜನೆ ನೀಡುವ ಸಲುವಾಗಿ ಹೆಚ್ಚಿನ ಅದ್ಯತೆ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ, ಮೀನುಗಾರರ ಆರ್ಥಿಕವಾಗಿಯೂ ಸಹ ಪ್ರಗತಿ ಕಾಣಲು ಸಹಕಾರಿಯಾಗಲಿದೆ ಎಂದರು.

ಕೋಲಾರ ಜಿಲ್ಲೆಯ ಮೀನುಗಾರಿಕೆ ಇಲಾಖೆ ಅಧಿಕಾರಿ ಅನಂತ್ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ಮೀನುಗಾರಿಕೆಯಲ್ಲಿ ಬದಲಾವಣೆಗಾಗಿ ಅನೇಕ ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ. ಮೀನು ಕೃಷಿಕರ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲವೆಚಿದರು.

ಮೀನು ಕೃಷಿಕರು ಇಲಾಖೆಯಲ್ಲಿಯೇ ಮೀನು ಮರಿಗಳನ್ನು ಪಡೆಯುವ ಜತೆಗೆ ಇಲಾಖೆಯ ಮಾರ್ಗದರ್ಶನದಂತೆ ಮೀನು ಪೋಷಣೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಖೆಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲ್ಲೂಕು ಸಹಾಯಕ ನಿರ್ದೇಶಕ ಲೋಕೇಶ್, ಮುನಿರಾಜು, ಕಾರಿ ವಿಶ್ವನಾಥ್, ಚಂದ್ರಶೇಖರ್, ವೆಂಕಟಾಚಲಪತಿ, ಲೋಕೇಶ್, ಅಯ್ಯಪ್ಪ, ಮಂಜು ಸೇರಿದಂತೆ ಮೀನುಗಾರರು ಹಾಜರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!