• Fri. May 3rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೂ ವ್ಯಾಜ್ಯವನ್ನು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಗಳ ಆದೇಶದ ಮೇರೆಗೆ  ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ ಸಹಕಾರದೊಂದಿಗೆ ತಹಸೀಲ್ದಾರ್ ರಶ್ಮಿ.ಯು ವಿಲೇವಾರಿ ಮಾಡಿ ಸಂಬಂಧಪಟ್ಟ ಫಲಾನುಭವಿ ಮಂಜುನಾಥ್ ಗೆ ವರ್ಗಾವಣೆ ಮಾಡಿದರು.

ತಾಲ್ಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಜಮೀನಿಗೆ ಖುದ್ದು ಭೇಟಿ ನೀಡಿ ಮಾದ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್ ರಶ್ಮಿ ಸರ್ವೆನಂ.೪೨/ಪಿ೯ರಲ್ಲಿ ೨ಎಕರೆ ಜಮೀನನ್ನು ಸರ್ಕಾರ ೧೫ವರ್ಷ ಪರಭಾರೆ ಮಾಡಬಾರದೆಂಬ ಷರತ್ತಿನನ್ವಯ ಮಂಜುನಾಥ್ ಬಿನ್ ವೆಂಕಟರಾಮಪ್ಪ ಅವರಿಗೆ ಸಾಗುವಳಿ ಚೀಟಿ ನೀಡಿರುತ್ತದೆ.

ಆದರೆ ಕಾರಣಾಂತರಗಳಿಂದ ನಿಯಮ ಬಾಹಿರವಾಗಿ ಗೋವಿಂದಪ್ಪ ಬಿನ್ ದೊಡ್ಡಬಯ್ಯಣ್ಣ, ಗಂಗಪ್ಪ, ಮತ್ತು ವೆಂಕಟೇಶಪ್ಪನವರಿಗೆ ಪರಭಾರೆ ಮಾಡಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಂಜುನಾಥ್ ಬಿನ್ ವೆಂಕಟರಾಮಪ್ಪ ರವರು ಜಮೀನನ್ನು ಮರುದಾನ ಮಾಡುವಂತೆ ಘನ ನ್ಯಾಯಾಲಯಕ್ಕೆ ಮೊರೆ ಹೋಗಿರುತ್ತಾರೆ.

ವಿಚಾರಣೆ ನಡೆಸಿದ ನ್ಯಾಯಾಲಯವು ಸದರಿ ಜಮೀನು ಮಂಜುನಾಥ್ ಬಿನ್ ವೆಂಕಟರಾಮಪ್ಪ ಅವರಿಗೆ ಹಸ್ತಾಂತರಿಸುವಂತೆ ಆದೇಶ ನೀಡಿರುತ್ತದೆ. ಇದಕ್ಕೆ ಅನುಗುಣವಾಗಿ ಈಗಾಗಲೇ ಸಂಬಂಧಪಟ್ಟ ಗೋವಿಂದಪ್ಪ ಬಿನ್ ದೊಡ್ಡಬಯ್ಯಣ್ಣ, ಗಂಗಪ್ಪ, ವೆಂಕಟೇಶಪ್ಪನವರಿಗೆ ಜಮೀನಿನಲ್ಲಿ ಉಳುಮೆ ಮಾಡಿರುವ ಇಳುವರಿಯನ್ನು ಕಟಾವು ಮಾಡುವಂತೆ ತಿಳಿಸಲಾಗಿತ್ತು.

ಆದರೆ ಸದರಿ ವ್ಯಕ್ತಿಗಳು ಕಟಾವು ಮಾಡದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಇಂದು ಜಮೀನನ್ನು ಮಂಜುನಾಥ್ ಬಿನ್ ವೆಂಕಟರಾಮಪ್ಪ ಅವರಿಗೆ ಪೊಲೀಸರ ಸಹಕಾರದೊಂದಿಗೆ, ಗ್ರಾಮಸ್ಥರ ಸಮಕ್ಷಮದಲ್ಲಿ ಹಸ್ತಾಂತರ ಮಾಡಲಾಯಿತೆಂದು ತಿಳಿಸಿದರು.

ಫಲಾನುಭವಿ ಮಂಜುನಾಥ್ ಮಾತನಾಡಿ ೧೯೭೮ರಲ್ಲಿ ಸರ್ಕಾರ ನಮ್ಮ ತಂದೆಯವರಾದ ವೆಂಕಟರಾಮಪ್ಪ ರವರಿಗೆ ಸಾಗುವಳಿ ಚೀಟಿ ನೀಡಿರುತ್ತದೆ. ಆದರೆ ೧೯೯೮ರಲ್ಲಿ ಗೋವಿಂದಪ್ಪನವರು, ನಮ್ಮ ತಂದೆಯವರಿಂದ ಜಮೀನನ್ನು ಅತಿಕ್ರಮಿಸಿಕೊಂಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು ಎಂದರು.

ಪ್ರತಿದೂರುದಾರರಾದ ಗೋವಿಂದಪ್ಪ ಬಿನ್ ದೊಡ್ಡಬಯ್ಯಣ್ಣ ಮಾತನಾಡಿ, ಸದರಿ ವಿವಾದಸ್ಪದ ಜಮೀನನ್ನು ೧೯೯೩-೯೪ರಲ್ಲಿ ವೆಂಕಟರಾಮಪ್ಪ ನವರು ನಮಗೆ ಶುದ್ದಕ್ರಯ ಮಾಡಿಕೊಟ್ಟಿರುತ್ತಾರೆ.

ಅದರ ಪೂರಕವೆಂಬಂತೆ ಎಲ್ಲಾ ದಾಖಲೆಗಳು ನಮ್ಮ ಬಳಿಯಿವೆ. ೨೦೦೨ರ ಹಿಂದೆ ‘ಪಿ’ ನಂಬರ್‌ಗೆ ಸಂಬಂಧಪಟ್ಟಂತ ಎಲ್ಲಾ ಜಮೀನುಗಳನ್ನು ಪರಭಾರೆ ಮಾಡುವ ಅಥವಾ ಖರೀದಿ ಮಾಡುವ ಅವಕಾಶವಿತ್ತು.

೨೦೦೨ರ ನಂತರದಲ್ಲಿ ಪಿ ನಂಬರ್ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿರುತ್ತದೆ. ಈ ಆದೇಶಕ್ಕೆ ಅನುಗುಣವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಆದ ಕಾರಣ ಸಮರ್ಪಕ ನ್ಯಾಯ ಒದಗಿಸಿಕೊಡುವಂತೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಹಾಗೂ ಪೊಲೀಸರಿಗೆ ಶ್ಲಾಘನೆ:

ಈ ಹಿಂದೆ ನಿಕಟಪೂರ್ವ ತಹಸೀಲ್ದಾರ್ ಚಂದ್ರಮೌಳೇಶ್ವರ ರವರು ಸರ್ವೆ ಕಾರ್ಯ ನಡೆಸುವ ಸಂದರ್ಭದಲ್ಲಿ ಅವರ ಕೊಲೆಯಾಗಿತ್ತು. ತದನಂತರ ಕ್ಷೇತ್ರದಲ್ಲಿ ಭಯದ ವಾತವರಣ ನಿರ್ಮಾಣವಾಗಿತ್ತು.

ಆದರೆ ದೃತಿಗೆಡದ ತಹಸೀಲ್ದಾರ್ ರಶ್ಮಿ.ಯು ಅವರು ಬಹು ವರ್ಷಗಳಿಂದ ವಿಲೇವಾರಿಯಾಗದ ಜಮೀನನ್ನು ಹಸ್ತಾಂತರ ಮಾಡುವಲ್ಲಿ ಯಶಸ್ವಿಯಾದರು. ಇವರ ಧೈರ್ಯ, ದಿಟ್ಟತನ ಹಾಗೂ ಈ ಘಟನೆಗೆ ಸಹಕರಿಸಿದ ಬೂದಿಕೋಟೆ ಪೊಲೀಸ್ ಎಸ್‌ಐ ಸುನೀಲ್, ಎಎಸ್‌ಐ ಶಿವಣ್ಣ ರವರ ತಂಡವನ್ನು ಗ್ರಾಮಸ್ಥರು ಅಭಿನಂಧಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್, ಎಎಸ್‌ಐ ಶಿವಣ್ಣ, ಮುನಿಕೃಷ್ಣ, ಆರ್‌ಐ ಅಜಿತ್, ಗ್ರಾಮ ಲೆಕ್ಕಾಧಿಕಾರಿ ಲೋಹಿತ್, ಒಳಗೊಂಡಂತೆ ದೂರುದಾರ ಮಂಜುನಾಥ್, ಗ್ರಾಮಸ್ಥರಾದ ಮಂಜುನಾಥ್, ಹಾಗೂ ಮುಂತಾದವರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!