• Fri. May 3rd, 2024

PLACE YOUR AD HERE AT LOWEST PRICE

ಕೆಜಿಎಫ್:ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ಮುಂದಾಗಿರುವುದನ್ನು ಖಂಡಿಸುವುದಾಗಿ ಮಾಜಿ ಶಾಸಕ ವೈ,ಸಂಪಂಗಿ ಆಕ್ರೋಷ ವ್ಯಕ್ತಪಡಿಸಿ, ಕಾಯ್ದೆ ರದ್ದು ಮಾಡಿದರೆ ಹೋರಾಟ ಹಮ್ಮಿಕೊಳ್ಳುವಿದಾಗಿ ಎಚ್ಚರಿಸಿದರು.

ಅವರು ತಾಲ್ಲೂಕಿನ ಬೇತಮಂಗಲ ಹೋಬಳಿ ನಾಗಶೆಟ್ಟಿಹಳ್ಳಿ ತಮ್ಮ ತೋಟದ ಮನೆಯ ಹತ್ತಿರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗೋವು ಹಿಂದೂಗಳ ದೈವ ಗೋವನ್ನು ತಾಯಿಯ ರೂಪದಲ್ಲಿ ಕಾಣಬೇಕು, ದೇಶದ ಬೆನ್ನೆಲಬು ರೈತರ ಕೃಷಿ ಚಟುವಟಿಕೆಗಳಲ್ಲಿ ಗೋವುಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ ಗೋವಿನಲ್ಲಿ ಮುಕ್ಕೋಟಿ ದೇವರುಗಳನ್ನು ಕಾಣುತ್ತೇವೆ ಅವುಗಳನ್ನು ಸಂರಕ್ಷಣೆ ಮಾಡವುದು ನಮ್ಮ ಕರ್ತವ್ಯ ಎಂದರು.

ಕಾಂಗ್ರೆಸ್ಸಿಗರು ಯಾವಾಗಲು ಹಿಂದುಗಳ ಭಾವನೆಗಳನ್ನು ವಿರೋದಿಸುತ್ತಲೇ ಬಂದಿದ್ದಾರೆ, ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆ  ಮಾಡಲಾಗಿತ್ತು, ಕಾಂಗ್ರೆಸ್ ಸರ್ಕಾರ ಗೋಹತ್ಯೆ ಮತ್ತು ಮತಾಂತರ ನಿಷೇದ ಕಾಯ್ದೆ ವಾಪಸ್ ಪಡೆಯಲು ಹೆಜ್ಜೆ ಇಟ್ಟಿದೆ, ಇದನ್ನು ಬಿಜೆಪಿ ಪಕ್ಷ ಒಪ್ಪುವುದಿಲ್ಲ. ಒಂದು ವೇಳೆ ವಾಪಸ್ ಪಡೆದಲ್ಲಿ ಉಗ್ರ ಹೋರಾಟಗಳನ್ನುಕೈಗೊಳ್ಳತ್ತೇವೆ ಎಂದು ಎಚ್ಚರಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ:

ಪಠ್ಯ ಪುಸ್ತಕಗಳನ್ನು ಮತ್ತೋಮ್ಮೆ ಬದಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ ಹೋರಾಟಗಾರರ ಇತಿಹಾಸವನ್ನು ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ ಆದರೆ ಈಗ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಪಠ್ಯಪುಸ್ತಕಗಳನ್ನು ಬದಲು ಮಾಡಲು ಮುಂದಾಗಿರುವ ನಿರ್ಧಾರವನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಮ್ಮಸಂದ್ರ ಗ್ರಾಪಂ ಉಪಾಧ್ಯಕ್ಷ ದಾಮೋಧರ್ ರೆಡ್ಡಿ, ಗ್ರಾಪಂ ಸದಸ್ಯರಾದ ಶಿವಣ್ಣ, ನರಸಿಂಹಗೌಡ, ಮುನಿಯಪ್ಪ, ನಾರಾಯಣಸ್ವಾಮಿ, ಸುರೇಶ್, ಮುರಳಿ, ಕೃಷ್ಣಪ್ಪ, ಸುಬ್ರಮಣಿ, ಮುಖಂಡರಾದ ಶ್ರೀರಾಮಪ್ಪ, ಅಮರೇಶ, ತಿಪ್ಪಣ್ಣ ಸೇರಿದಂತೆ ಉಪಸ್ಥಿತರಿದ್ದರು.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!