• Sun. May 5th, 2024

PLACE YOUR AD HERE AT LOWEST PRICE

ರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಉಡ್ಡಯನ ಕೇಂದ್ರದಿಂದ ‘ವಿಕ್ರಮ್‌’ ಲ್ಯಾಂಡರ್‌ ಹಾಗೂ ‘ಪ್ರಜ್ಞಾನ್’ ರೋವರ್‌ ಹೊತ್ತ ದೇಶದ ಐತಿಹಾಸಿಕ ‘ಚಂದ್ರಯಾನ 3’ ಉಡಾವಣಾ ವಾಹಕ ಎಲ್‌ವಿಎಂ-3 ಎಂ4 ಇಂದು(ಜುಲೈ 14) ಮಧ್ಯಾಹ್ನ 2.35 ಗಂಟೆಗೆ ನಭಕ್ಕೆ ಚಿಮ್ಮಿತು.

ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್ ನೇತೃತ್ವದ ಬಾಹ್ಯಾಕಾಶ ವಿಜ್ಞಾನಿಗಳ ತಂಡ ‘ಚಂದ್ರಯಾನ 3’ ರಾಕೇಟ್‌ ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾರೆ. ಬಾಹ್ಯಾಕಾಶ ಕಾರ್ಯಕ್ರಮವು ‘ಸಾಫ್ಟ್‌ ಲ್ಯಾಡಿಂಗ್‌’ನಲ್ಲಿ ಯಶಸ್ಸು ದೊರಕಿದರೆ ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಅಮೆರಿಕ, ಚೀನಾ, ಹಿಂದಿನ ಸೋವಿಯತ್‌ ಒಕ್ಕೂಟ ಈ ಸಾಧನೆ ಮಾಡಿದ್ದವು.

1960ರ ದಶಕದಲ್ಲಿ ಅಮೆರಿಕ ಹಾಗೂ ರಷ್ಯಾ ನಡುವೆ ನಡೆದ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಒಂದರ ನಂತರ ಒಂದು ನೌಕೆಯನ್ನು ಕಳಿಸಿದ್ದಕ್ಕಾಗಿ ಎರಡು ದೇಶಗಳು ಚಂದ್ರನ ಮೇಲೆ ತಮ್ಮ ನೌಕೆ ಇಳಿಸಲು ಯಶಸ್ವಿಯಾಗಿದ್ದವು. ಅದಾದ ಬಳಿಕ ಚೀನಾ ಮಾತ್ರ ತನ್ನ ನೌಕೆಯನ್ನು ಚಂದ್ರನಲ್ಲಿ ಇಳಿಸಲು ಯಶಸ್ವಿಯಾಗಿತ್ತು. 2013ರಲ್ಲಿ Change’s-5 ಮಿಷನ್‌ನೊಂದಿಗೆ ಚೀನಾ ತನ್ನ ಮೊದಲ ಯತ್ನದಲ್ಲಿಯೇ ಚಂದ್ರನಲ್ಲಿಗೆ ಇಳಿಸಿತ್ತು.

ಚಂದ್ರಯಾನಕ್ಕೆ 3,84,400 ಕಿಮೀ ದೂರ

ಭೂಮಿಯಿಂದ ಚಂದ್ರವು ಸುಮಾರು 3,84,400 ಕಿಲೋ ಮೀಟರ್ ದೂರದಲ್ಲಿದೆ. ಬಾಹ್ಯಾಕಾಶ ನೌಕೆ ಸಾಗುವ ಮಾರ್ಗಕ್ಕೆ ಅನುಸಾರವಾಗಿ ಭೂಮಿ ಮತ್ತು ಚಂದ್ರನ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತದೆ.

ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಬೇಕೆಂದರೆ ನೌಕೆಯ ವೇಗವನ್ನು ನಿಧಾನಗೊಳಿಸಬೇಕಾಗುತ್ತದೆ. ಆದರೆ, ಚಂದ್ರನ ಬಳಿಗೆ ಹೋಗುವ ಬಾಹ್ಯಾಕಾಶ ನೌಕೆಗಳು ಚಂದ್ರನಲ್ಲಿನ ವಾತಾವರಣ ವೈರುಧ್ಯದಿಂದ ಸಮಸ್ಯೆಗೆ ಸಿಲುಕುತ್ತವೆ. ಈ ವೇಳೆ ಸಾಕಷ್ಟು ಘರ್ಷಣೆ ಉಂಟಾಗುತ್ತದೆ.

ಇಂತಹ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಧಾನಗೊಳಿಸಬಹುದಾದ ಏಕೈಕ ವಿಷಯವೆಂದರೆ ಅದರ ಪ್ರೊಪಲ್ಷನ್ ಸಿಸ್ಟಮ್. ಸುರಕ್ಷಿತವಾದ ಲ್ಯಾಂಡಿಂಗ್‌ ಮಾಡಲು ಬಹಳ ವೇಗವಾಗಿ ನೌಕೆಯನ್ನು ನಿಧಾನಗೊಳಿಸಬೇಕು. ಇದಕ್ಕೆ ಸಾಕಷ್ಟು ಇಂಧನ ವ್ಯಯವಾಗುತ್ತದೆ. ಆದ್ದರಿಂದ ಹೆಚ್ಚು ಇಂಧನ ತೆಗೆದುಕೊಂಡು ಹೋಗಬೇಕಾಗುತ್ತದೆ. ಹೆಚ್ಚು ಇಂಧನ ತುಂಬಿದರೆ ಬಾಹ್ಯಾಕಾಶ ನೌಕೆ ಹೆಚ್ಚು ಭಾರವಾಗಿರುತ್ತದೆ, ಹೆಚ್ಚು ಇಂಧನ ಕೂಡ ಬೇಕಾಗುತ್ತದೆ.

ಇಸ್ರೋ ನೇರ ವೀಕ್ಷಣೆ ಸೌಲಭ್ಯ: ಚಂದ್ರಯಾನ-3 ರ ನೇರ ಉಡಾವಣೆಯನ್ನು ವೀಕ್ಷಿಸಲು ಇಸ್ರೋದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಲೈವ್ ಸ್ಟ್ರೀಮಿಂಗ್ ಮೂಲಕ ಉಡಾವಣೆಯ ನೇರ ಪ್ರಸಾರ ಮಾಡಲಾಗಿತ್ತು.

ಚಂದ್ರಯಾನ-3 ಯೋಜನೆಗೆ ಅಂದಾಜು 600 ಕೋಟಿ ರೂ. ಖರ್ಚಾಗಿದೆ. ಆದರೆ ಇದರ ಅಂತಿಮ ಬಜೆಟ್ 615 ಕೋಟಿ ರೂ. ಆದರೆ ಚಂದ್ರಯಾನ-2 ಕ್ಕೆ ಹೋಲಿಸಿದರೆ ಈ ಬಜೆಟ್ ತುಂಬಾ ಕಡಿಮೆ.

ಲ್ಯಾಂಡಿಂಗ್ ಕಾರ್ಯಾಚರಣೆ ಹೇಗೆ ?

ಎಲ್ಎಂವಿ–3 ಎಂ4 ನೌಕೆಯು ನೆಲದಿಂದ ಜಿಗಿದ ಕೆಲವೇ ನಿಮಿಷಗಳಲ್ಲಿ ಪ್ರೊಪಲ್ಷನ್ ನೌಕೆಯನ್ನು ಭೂಮಿಯಿಂದ ಪೂರ್ವ ನಿಗದಿತ ಎತ್ತರದ ಕಕ್ಷೆಗೆ ಸೇರಿಸಲಿದೆ. ಭೂಮಿಯ ಸುತ್ತ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುವ ಪ್ರೊಪಲ್ಷನ್ ನೌಕೆಯು ಹಲವು ಹಂತಗಳಲ್ಲಿ ತನ್ನ ಕಕ್ಷೆಯ ಎತ್ತರವನ್ನು ಹೆಚ್ಚಿಸಿಕೊಳ್ಳುತ್ತದೆ. ನಂತರ ಭೂಮಿಯ ಕಕ್ಷೆಯಿಂದ ಚಂದ್ರನ ಕ್ಷಕೆಯತ್ತ ಪ್ರಯಾಣ ಆರಂಭಿಸುತ್ತದೆ. ಹಲವು ದಿನಗಳ ಪ್ರಯಾಣದ ನಂತರ ಪ್ರೊಪಲ್ಷನ್ ನೌಕೆಯು ಚಂದ್ರನ ಕಕ್ಷೆಯನ್ನು ಸೇರುತ್ತದೆ.

ಆರಂಭದಲ್ಲಿ ಅರೆಗೋಲಾಕಾರದ ಕಕ್ಷೆಯಲ್ಲಿ ಚಂದ್ರನನ್ನು ಸುತ್ತುತ್ತದೆ. ನಂತರ ಹಲವು ಹಂತಗಳಲ್ಲಿ ಕಕ್ಷೆಯ ಎತ್ತರವನ್ನು ಕಡಿಮೆ ಮಾಡಿಕೊಳ್ಳಲಿದೆ. ಚಂದ್ರನ ಮೇಲ್ಮೈನಿಂದ 100 ಕಿ.ಮೀ. ಎತ್ತರದ ವೃತ್ತಾಕಾರದ ಕಕ್ಷೆ ತಲುಪಿದಾಗ, ಲ್ಯಾಂಡರ್ ನೌಕೆಯಿಂದ ಪ್ರೊಪಲ್ಷನ್ ನೌಕೆಯು ಬೇರ್ಪಡಲಿದೆ. ಇಷ್ಟಲ್ಲ ಕಾರ್ಯಾಚರಣೆ ಕೈಗೊಳ್ಳಲು ಕನಿಷ್ಠ 40 ದಿನ ಬೇಕಾಗುತ್ತದೆ.

ಒಂದು ಚಂದ್ರ ದಿನದ ಕಾರ್ಯಾಚರಣೆ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿದ ನಂತರ, ಲ್ಯಾಂಡರ್ ಮತ್ತು ರೋವರ್ ನೌಕೆಗಳೆರಡೂ ಕಾರ್ಯಾಚರಣೆ ನಡೆಸುವ ಒಟ್ಟು ಅವಧಿ ಒಂದು ಚಂದ್ರ ದಿನ ಮಾತ್ರ. ಆದರೆ ಚಂದ್ರನಲ್ಲಿನ ಒಂದು ದಿನ, ಭೂಮಿಯಲ್ಲಿನ 14 ದಿನಗಳಿಗೆ ಸಮ.

ಈ ಅವಧಿಯಲ್ಲಿ ಎರಡೂ ನೌಕೆಗಳು ಹಲವು ಮಹತ್ವದ ಕಾರ್ಯಾಚರಣೆಗಳನ್ನು ನಡೆಸಲಿವೆ. ಇದನ್ನು ಭೂಮಿಯಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ಈ ಕಾರ್ಯಾಚರಣೆಗಳಲ್ಲಿ ನಡೆಸುವ ವೈಜ್ಞಾನಿಕ ಪರಿಶೀಲನೆಗಳು ಚಂದ್ರನ ಮೇಲ್ಮೈನಲ್ಲಿನ ಖನಿಜ ಸಂಪತ್ತು, ನೀರಿನ ಪತ್ತೆ, ಸೂಕ್ಷ್ಮಾಣು ಜೀವಿಗಳ ಇರುವಿಕೆಯನ್ನು ತಿಳಿದುಕೊಳ್ಳಲು ಕಾರಣವಾಗಲಿದೆ.

ಚಂದ್ರಯಾನ – 3 ಉಪಗ್ರಹ ಉಡಾವಣೆ ವಾಹಕ ಎಲ್ವಿಎಂ3-ಎಂ4 ವೈಶಿಷ್ಟ್ಯಗಳು

43.5 ಮೀ ಎತ್ತರ

3900 ಕೆಜಿ

ತೆಗೆದುಕೊಳ್ಳುವ ಅವಧಿ: 40 ದಿನಗಳು. ಆಗಸ್ಟ್‌ 23-24ರಂದು ಚಂದ್ರನನ್ನು ತಲುಪಲಿದೆ. ಚಂದ್ರಯಾನ-2 48 ದಿನಗಳನ್ನು ತೆಗೆದುಕೊಂಡಿತ್ತು.

ವಿಕ್ರಮ್ ಲ್ಯಾಂಡರ್‌ ವೈಶಿಷ್ಟ್ಯ

1 ಚಾಂದ್ರಮಾನ ದಿನ : (ಭೂಮಿಯ 14 ದಿನಗಳಿಗೆ ಸಮ)

1,749,86 ಕೆಜಿ

738 ವಾಟ್‌ ವಿದ್ಯುತ್‌ ಬಳಕೆ

ಪ್ರಜ್ಞಾನ ರೋವರ್‌ ವೈಶಿಷ್ಟ್ಯಗಳು

1 ಚಾಂದ್ರಮಾನ ದಿನ ಕಾರ್ಯನಿರ್ವಹಣೆ ಅವಧಿ

26 ಕೆಜಿ ಒಟ್ಟು ತೂಕ

50 ವ್ಯಾಟ್‌ ವಿದ್ಯುತ್‌ ಬಳಕೆ

ಇಸ್ರೋದ ಚಂದ್ರಯಾನ ನಡೆದು ಬಂದ ದಾರಿ

2003, ಆಗಸ್ಟ್ 15: ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ ಯೋಜನೆ ಪ್ರಕಟ.

2008, ಅಕ್ಟೋಬರ್ 22: ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-1 ಉಡಾವಣೆ.

2008, ನವೆಂಬರ್ 14: ಚಂದ್ರಯಾನ-1ರಿಂದ ಪ್ರತ್ಯೇಕಗೊಂಡ ಮೂನ್ ಇಂಪ್ಯಾಕ್ಟ್ ಪ್ರೋಬ್, ಚಂದ್ರನ ದಕ್ಷಿಣ ಧ್ರುವದತ್ತ ಇಳಿದು, ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳು ಇರುವುದನ್ನು ಖಚಿತಪಡಿಸಿತು. 2009ರ ಆಗಸ್ಟ್ 28ರಂದು ಚಂದ್ರಯಾನ-1 ಕಾರ್ಯಕ್ರಮ ಮುಕ್ತಾಯ.

2019, ಜುಲೈ 22: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆ

ಆಗಸ್ಟ್ 20, 2019: ಚಂದ್ರನ ಕಕ್ಷೆಗೆ ಚಂದ್ರಯಾನ-2 ಬಾಹ್ಯಾಕಾಶ ನೌಕೆ ಸೇರ್ಪಡೆ.

2019, ಸೆಪ್ಟೆಂಬರ್ 2: ಚಂದ್ರನ ಧ್ರುವ ಕಕ್ಷೆಯ 100 ಕಿಮೀಯಲ್ಲಿ ಚಂದ್ರನನ್ನು ಸುತ್ತುತ್ತಾ ವಿಕ್ರಂ ಲ್ಯಾಂಡರ್ ಪ್ರತ್ಯೇಕಗೊಂಡಿತು. ಆದರೆ ಚಂದ್ರನ ಮೇಲ್ಮೈನಿಂದ 2.1 ಕಿಮೀ ದೂರದಲ್ಲಿದ್ದಾಗ ಭೂಮಿಯಲ್ಲಿನ ಕೇಂದ್ರದಿಂದ ಲ್ಯಾಂಡರ್ ಸಂವಹನ ಸಂಪರ್ಕ ಕಡಿದುಕೊಂಡು ಚಂದ್ರಯಾನ-2 ವೈಫಲ್ಯ ಅನುಭವಿಸಿತು. 2020 ಈ ಬಗ್ಗೆ ಜನವರಿ 1ರಂದು ಅಧಿಕೃತವಾಗಿ ಇಸ್ರೋದಿಂದ ಪ್ರಕಟ

2023, ಜುಲೈ 14: ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದ ಎರಡನೇ ಲಾಂಚ್‌ಪ್ಯಾಡ್‌ನಿಂದ ಉಡಾವಣೆ.

2023, ಆಗಸ್ಟ್ 23/24: ಚಂದ್ರಯಾನ ನೌಕೆಯಲ್ಲಿನ ವಿಕ್ರಂ ಲ್ಯಾಂಡರ್ ಆಗಸ್ಟ್ 23- 24 ರಂದು ಚಂದ್ರನ ಮೇಲ್ಮೈನಲ್ಲಿ ಸುಗಮವಾಗಿ ಇಳಿಯುವ ಮೂಲಕ ಪ್ರತಿಷ್ಠಿತ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಲಿದೆ ಎಂದು ಇಸ್ರೋ ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!