• Sun. May 5th, 2024

PLACE YOUR AD HERE AT LOWEST PRICE

 ಕೆಜಿಎಫ್:ಎನ್.ಜಿ.ಹುಲ್ಕೂರು ಗ್ರಾಪಂಯ ಮೊದಲ ಅವಧಿಯ ಅಧ್ಯಕ್ಷರ ಮತ್ತುಉಪಾಧ್ಯಕ್ಷರ ಅವಧಿ ಮುಗಿಯುತ್ತಿರುವ ನಿಟ್ಟಿನಲ್ಲಿ ಕೊನೆಯ ಸಾಮಾನ್ಯ ಸಭೆಯಲ್ಲಿ ಮೊದಲ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸರ್ವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೇತಮಂಗಲ ಹೋಬಳಿ ಎನ್,ಜಿ.ಹುಲ್ಕೂರು ಗ್ರಾಪಂ ಕೊನೆಯ ಸಾಮಾನ್ಯ ಸಭೆಯಲ್ಲಿ ಮೊದಲ ಅವಧಿಯ ೩೦ ತಿಂಗಳ ಆಡಳಿತ ಮಂಡಳಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಹಾಗೂ ಒಟ್ಟು ಬಜೆಟ್‌ನ್ನು ಗ್ರಾಪಂ ಅಧ್ಯಕ್ಷ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಸಭೆಯಲ್ಲಿ ಸರ್ವ ಸದಸ್ಯರಿಗೆ ತಿಳಿಸಲಾಯಿತು.

ಅದ್ಯಕ್ ಸುನಿಲ್ ಕುಮಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಮೂಲ ಭೂತ ಸೌಲಭ್ಯಗಳ ಜತೆಗೆ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಗ್ರಾಪಂಯ ಆಡಳಿತ ಮಂಡಳಿಯಿಂದ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಶ್ರಮಿಸಿರುವುದು ಸಂತಸ ಸಂಗತಿಯಾಗಿದೆ.

ಮೊದಲ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಶೌಚಾಲಯ ನಿರ್ಮಾಣ, ಶಾಲಾ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ಟ್ಯಾಂಕ್ ಅಳವಡಿಕೆ, ಸಿಸಿ ರಸ್ತೆಗಳು, ನೀರಿನ ಕಾಲುವೆಗಳು, ಚರಂಡಿಗಳ ನಿರ್ಮಾಣ, ಕೊಳವೆ ಬಾವಿಗಳ ದುರಸ್ತಿ ಸೇರಿದಂತೆ ನರೇಗಾ ಯೋಜನೆಯ ಅನುದಾನ ಹಾಗೂ ೧೫ ನೇ ಹಣಕಾಸಿನ ಮೂಲಕ ಬಹಲಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದರ ಬಗ್ಗೆ ಚರ್ಚಿಸಿದರು.

ಗ್ರಾಪಂಯ ಎಲ್ಲಾ ಗ್ರಾಮಸ್ಥರಿಗೂ ಸಹ ನರೇಗಾ ಯೋಜನೆ ಅಡಿಯಲ್ಲಿ ಹಸು ಶೆಡ್ ನಿರ್ಮಾಣ, ಸೋಪು ಕಿಟ್, ಸಿಸಿಗಳ ನಾಟಿ, ತೊಟ್ಟಿಗಳ ನಿರ್ಮಾಣ, ತೋಟಗಳಿಗೆ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೂ ಗ್ರಾಪಂಯಿಂದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಗ್ರಾಮಗಳಲ್ಲಿ ಸಾರ್ವಜನಿಕರಿಗೆ ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿಗಳನ್ನು ದುರಸ್ಥಿ ಪಡಿಸುವುದು ಹಾಗೂ ಹೊಸ ಪಂಪು ಮೋಟರ್ ಅಳವಡಿಕೆಯನ್ನು ಮಾಡಿರುವುದಾಗಿ ಚರ್ಚಿಸಿದರು.

ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೇಕಿರುವ ಆರ್ಥಿಕ ಸಹಾಯ ಹಾಗೂ ಅಂಗವಿಕಲರಿಗೆ ಸಹಾಯ ದನವನ್ನು ನೀಡಲಾಗಿದೆ. ಪ್ರಸ್ತುತ ೬ ವಿದ್ಯಾರ್ಥಿಗಳು ಆರ್ಥಿಕ ಸಹಾಯ ದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೊದಲು ಅರ್ಜಿ ಸಲ್ಲಿಸಿರುವವರಿಗೆ ಮೊದಲ ಅದ್ಯತೆ ಮೇಲೆ ಎಲ್ಲರಿಗೂ ನೀಡುವುದಾಗಿ ತಿರ್ಮಾನಿಸಿದರು.

ಗ್ರಾಪಂಯಿಂದ ಗ್ರಾಮಗಳ ಅಭಿವೃದ್ಧಿಗೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಹಣಕಾಸಿಗಾಗಿ ಕಡ್ಡಾಯ ತೆರಿಗೆ, ಜನರಲ್ ಲೈಸನ್ಸ್, ಎನ್‌ಓಸಿಗಳನ್ನು ನೀಡುವುದಕ್ಕೆ ನಿಗಧಿತ ಮೊತ್ತವನ್ನು ತೆರಿಗೆ ರೂಪದಲ್ಲಿ ಗ್ರಾಪಂಗೆ ಪಾವತಿ ಮಾಡಲು ಸರ್ವ ಸದಸ್ಯರ ಸಭೆಯಲ್ಲಿ ತಿರ್ಮಾನ ಕೈಗೊಂಡರು.

ಗ್ರಾಪಂ ಮೊದಲ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ನನಗೆ ಸರ್ವ ಸದಸ್ಯರು ಅಭಿವೃದ್ಧಿ ಕಾಮಗಾರಿಗೆ ಪಕ್ಷಾತೀತವಾಗಿ ಸಹಕಾರ ನೀಡಿದ ಸಲುವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಗ್ರಾಪಂಯ ಪ್ರಗತಿಗೆ ಶ್ರಮಿಸೋಣ ಎಂದು ಗ್ರಾಪಂ ಅಧ್ಯಕ್ಷ ಸುನೀಲ್ ಕುಮಾರ್ ಹೇಳಿದರು.

ಗ್ರಾಪಂಯ ಸರ್ವ ಸದಸ್ಯರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯು ಸಹ ನಿಮ್ಮ ಸಹಕಾರ ಇನ್ನಷ್ಟು ಇದ್ದಲ್ಲಿ ಗ್ರಾಪಂಯನ್ನು ಮಾದರಿ ಗ್ರಾಪಂಯನ್ನಾಗಿ ಪರಿವರ್ತಿಸಬಹುದು.  ಕಾನೂನನ್ನು ಗೌರವಿಸಿ ಕಾನೂನು ಅಡಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಗ್ರಾಪಂಯನ್ನು ಅಭಿವೃದ್ದಿ ಮಾಡೋಣ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್ ಹೇಳೀದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ವೆಂಕಟಮ್ಮ ಸ್ಭೆರಿದಂತೆ ಸರ್ವ ಸದಸ್ಯರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!