• Wed. May 1st, 2024

PLACE YOUR AD HERE AT LOWEST PRICE

ಕೆಜಿಎಫ್:ಬೇತಮಂಗಲ ಗ್ರಾಮ ಪಂಚಾಯಿತಿಯ ಮೊದಲ ಅವಧಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಗ್ರಾಪಂಯ ಸರ್ವ ಸದಸ್ಯರನ್ನು ಸನ್ಮಾನಿಸಿ ಬಿಲ್ಕೋಡಲಾಯಿತು.

ಗ್ರಾಪಂಯ ಮೊದಲ ಅವಧಿಯ ಅಧ್ಯಕ್ಷರಾದ ಮಮತ ಗಣೇಶ್ ಅಧ್ಯಕ್ಷತೆಯ ಕೊನೆಯ ಸಮಾನ್ಯ ಸಭೆಯಲ್ಲಿ ೩೦ ತಿಂಗಳ ಅಧಿಕಾರ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರಾದ ಮಮತ ಗಣೇಶ್ ಮಾತನಾಡಿ, ೩೦ ತಿಂಗಳ ಅಧಿಕಾರ ಅವಧಿಯಲ್ಲಿ ಗ್ರಾಪಂಯ ಸರ್ವ ಸದಸ್ಯರು ಸಹ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗ್ರಾಂ ಪಂಚಾಯಿತಿಯು ತಾಲ್ಲೂಕಿನಲ್ಲಿಯೇ ದೊಡ್ಡ ಗ್ರಾಪಂಯಾಗಿದ್ದು, ಗ್ರಾಪಂಯ ಸರ್ವಗೀಣ ಅಭಿವೃದ್ಧಿಗಾಗಿ ಪ್ರಮಾಣಿಕವಾಗಿ ಶ್ರಮಿಸಲಾಗಿದೆ. ಜನತೆ ಹಾಗೂ ಸದಸ್ಯರು ನೀಡಿದ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಸಾರ್ವಜನಿಕರ ಯೋಗಕ್ಷೆಮಕ್ಕಾಗಿ ಶ್ರಮಿಸಿರುವುದಾಗಿ ತಿಳಿಸಿದರು.

ಗ್ರಾಮಸ್ಥರಿಗೆ ಕುಡಿಯುವ ನೀರು, ಕಸ ವಿಲೇವಾರಿ ಘಟಕಕ್ಕೆ ಜಾಗ ಮಂಜೂರು, ಹಳೆಯ ಗ್ರಾಪಂ ಕಟ್ಟಡ ತೆರುವು, ನೂತನ ಶೌಚಾಲಯ ನಿರ್ಮಾಣ, ಅಂಗನವಾಡಿ ಕೇಂದ್ರ ನಿರ್ಮಾಣ ಸೇರಿದಂತೆ ಗ್ರಾಪಂಯಿಂದ ನರೇಗಾ ಹಾಗೂ ೧೫ನೇ ಹಣಕಾಸಿನಿಂದ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಇದೇ ವೇಳೆ ಅಧ್ಯಕ್ಷರು ಗ್ರಾಪಂಯ ಎಲ್ಲಾ ಸದಸ್ಯರನ್ನು ಪಕ್ಷತೀತವಾಗಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡುವ ಮೂಲಕ ಬಿಲ್ಕೋಡಲಾಯಿತು, ಮುಂದಿನ ದಿನಗಳಲ್ಲಿಯೂ ಸಹ ಗ್ರಾಪಂಯ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ನಂದೀಶ್, ಸದಸ್ಯರಾದ ಡೈರಿ ಮಂಜುನಾಥ್, ಡೈರಿ ಅನಂದ್, ಓಂ ಸುರೇಶ್, ಶ್ರೀನಿವಾಸ್, ರಾಧಮ್ಮ, ಗಂಗಮ್ಮ, ಸುಕನ್ಯಮ್ಮ, ಅನುಸೂಯಮ್ಮ, ಲಕ್ಷ್ಮಮ್ಮ, ಪ್ರೀಯದರ್ಶಿಣಿ, ಸ್ವಪ್ನ, ಸಂದ್ಯಾ, ಶಿಲ್ಪ, ಅರ್ಬೀನ್ ತಾಜ್, ಇನಾಯಿತ್ ಉಲ್ಲಾ, ಸುರೇಂದ್ರ ಗೌಡ, ರೇಣುಕಮ್ಮ, ಆಶಾ, ಏಜಾಜ್ ಪಾಷ, ವಿನು ಕಾರ್ತೀಕ್, ಶೇಷಾದ್ರಿ, ನಾಗೇಶ್ ಮತ್ತು ಸಿಬ್ಬಂದಿ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!