• Sun. Apr 28th, 2024

PLACE YOUR AD HERE AT LOWEST PRICE

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಘಃಟನೆ ಹಾಗೂ ಪ್ರಧಾನಿ ಮೋದಿ ಮೌನವನ್ನು ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ

ಕೋಲಾರ, ಜುಲೈ, ೨೨ : ಮಣಿಪುರದಲ್ಲಿ ೦೩ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ ದೈಹಿಕ ಹಲ್ಲೆ ಮಾಡುತ್ತಾ ಗುಂಪು ಅತ್ಯಾಚಾರ ಎಸಗಿರುವ ಘಟನೆ ಅತ್ಯಂತ ಹೇಯಕೃತ್ಯವಾಗಿದ್ದು ಈ ಪಾತಕಿ ಘಟನೆಯನ್ನು ಖಂಡಿಸಿ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಮೆಕ್ಕೆವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಘಟನೆ ನಡೆದು ೨೫ ದಿನಗಳಾದರೂ ” ರೋಮ್ ನಗರ ಉರಿಯುತ್ತಿದ್ದಾಗ ನೀರೋ ಚರ್ಕವರ್ತಿ ಪಿಠೀಲು ನುಡಿಸುತ್ತಿದ್ದ” ಎಂಬAತೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಕರ್ನಾಟಕದ ಚುನಾವಣಯ ಅಬ್ಬರದ ಪ್ರಚಾರದಲ್ಲಿದ್ದರು.

ಈ ಘಟನೆ ಭಾರತದ ಆತ್ಮಸಾಕ್ಷಿಯನ್ನು ತೀವ್ರವಾಗಿ ಕಲುಕಿದೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗಲೂ ಇದುವರೆಗೂ ಸೊಲ್ಲೆತ್ತದೆ ಇರುವ ಪ್ರಧಾನಮಂತ್ರಿಗಳ ಕಾರ್ಯವಿಧಾನವೇ ಆಕ್ಷೇಪಾರ್ಹವಾಗಿದೆ.

ಕೇಂದ್ರದ ಒಕ್ಕೂಟ ಸರ್ಕಾರವು ಮಣಿಪುರದ ಪರಿಸ್ಥಿತಿಯನ್ನು ಆಳುವ ಪಕ್ಷದ ಹಿತಾಸಕ್ತಿಗೆ ಉಪಯೋಗಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಬಿಜೆಪಿಯನ್ನು ಪುನರ್ ಸ್ಥಾಪಿಸಬೇಕು. ಸಾವುನೋವಿಗೆ ತುತ್ತಾದವರಿಗೆ ಆಸ್ತಿ ಕಳೆದುಕೊಂಡವರಿಗೆ ಸೂಕ್ತಪರಿಹಾರ ನೀಡಬೇಕು. ಪಾತಕಿಗಳಿಗೆ ಉಗ್ರ ಶಿಕ್ಷೆ ಖಾತ್ರಿಪಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ರೈತ ಸಂಘದ ನಳಿನಿಗೌಡ, ಮಹಿಳಾ ಜಾಗೃತಿ ವೇದಿಕೆಯ ಮಮತಾ ರೆಡ್ಡಿ, ಗಮನ ಶಾಂತಮ್ಮ, ಜಿ.ಆರ್. ಮುರಳಿಕೃಷ್ಣ, ಈನೆಲ ಈಜಲ ವೆಂಕಟಾಚಲಪತಿ, ಸಂಜೀವಪ್ಪ ಮುಂತಾದವರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!