• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದಿರುವುದು ನಿಮ್ಮ ಪುಣ್ಯ. ನಮ್ಮ ತಾಲೂಕಿನಲ್ಲಿಯೇ ವಿಶೇಷವಾಗಿ ನಗರ ಭಾಗದಲ್ಲಿ ಉತ್ತಮ ಸೌಲಭ್ಯಗಳನ್ನು ಕೊಡತಕ್ಕಂಥ ಶಾಲೆ ಹಾಗೂ ಕಾಲೇಜ್ ಎಂದರೆ ಅದು ಈ ಕಾಲೇಜು ಮಾತ್ರ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಕಯಂತ್ರ ಕೊಠಡಿ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಕಾಲೇಜಿಗೆ ಕೋಲಾರ ಜಿಲ್ಲೆಯಲ್ಲಿಯೇ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ  ಎಂದರೆ ಅದು ಬಂಗಾರಪೇಟೆ ಬಾಲಕಿಯರ ಕಾಲೇಜು ಮಾತ್ರ ಎಂದರು.

ಬಹಳ ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಕೊಠಡಿಗಳ ಸಮಸ್ಯೆವಯಿತ್ತು. ಸರಿಯಾದ ಅನುಕೂಲಗಳು ಇರಲಿಲ್ಲ. ಅನೇಕ ಸಮಸ್ಯೆಗಳಿತ್ತು. ನಾನು ಹಿಂದೆ ಪುರಸಭೆ ಅಧ್ಯಕ್ಷನಾಗಿದ್ದಾಗ ಪುರಸಭೆ ಜಾಗವನ್ನು ಸಂಪೂರ್ಣವಾಗಿ ಈ ಕಾಲೇಜಿಗೆ ನೀಡಿದ್ದೇವೆ. ನಂತರ ನಾನು ಶಾಸಕನಾದ ಮೇಲೆ ಹೊಸ ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದ್ದೇನೆ ಹಾಗೂ ಹೊಸ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದೇನೆ. ಈಗಲೂ ಸಹ ಇನ್ನೂ ಎರಡು ಶೌಚಾಲಯಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

ನೀವು ಖಾಸಗಿ ಕಾಲೇಜುಗಳಿಗೆ ಹೋದರೆ ಕನಿಷ್ಠಪಕ್ಷ ಒಂದು ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ 2 ಲಕ್ಷಗಳ ತನಕ ಖರ್ಚಾಗುತ್ತೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಅಷ್ಟು ಖರ್ಚು ವೆಚ್ಚಗಳು ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿ ಛಲವಿರಬೇಕು, ಓದುವ ವಿಷಯದಲ್ಲಿ ಛಲವಿದ್ದರೆ ಮಾತ್ರ ಮುಂದೆ ಬರಲು ಸಾಧ್ಯ. ನಾನು ನೋಡಿರುವ ಹಾಗೆ ಪ್ರತಿ ವರ್ಷವೂ ಸಹ ಹೆಣ್ಣು ಮಕ್ಕಳೇ ಮೇಲುಗೈ. ಗಂಡು ಮಕ್ಕಳು ಓದುವುದಿಲ್ಲ ಅಂತಲ್ಲ ಆಸಕ್ತಿ ಕಡಿಮೆ ಅವರಿಗೆ ಎಂದರು.

ನೀವೆಲ್ಲರೂ ಸಹ ಮುಂದೆ ಪಿಯುಸಿ ಮುಗಿದ ಮೇಲೆ ಕೆ ಸಿ ರೆಡ್ಡಿಯ ಕಾಲೇಜಿಗೆ ಹೋಗಬೇಕು. ಅಲ್ಲಿಯೂ ಸಹ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಕೆಸಿರೆಡ್ಡಿ ಕಾಲೇಜಿನಲ್ಲಿ ಕೇವಲ 400 ಮಕ್ಕಳು ಇದ್ದರು. ಇವತ್ತು 1,600 ಮಕ್ಕಳಿದ್ದಾರೆ ಜೊತೆಗೆ 20 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಬಿಎ, ಬಿಎಸ್ಸಿ,ಬಿಕಾಂ, ಎಂಕಾಂ ಈಗ ಹೊಸದಾಗಿ ಎಂಬಿಎ ಸಹ ಪ್ರಾರಂಭ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲರೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ನಿಮ್ಮ ತಂದೆ ತಾಯಂದಿರಿಗೆ, ಗುರುಗಳಿಗೆ ಹಾಗೂ ನಮ್ಮ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ,ಕಾಲೇಜಿನ ಪ್ರಾಂಶುಪಾಲರಾದ ಸುಬ್ರಮಣಿ, ಕಾಮಸಮುದ್ರ ಕಾಲೇಜಿನ ಪ್ರಾಂಶುಪಾಲರಾದ ಮುರಳಿ, ನಾಗರಾಜ್, ಬೋಡಿರೆಡ್ಡಿ, ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!