• Tue. May 7th, 2024

PLACE YOUR AD HERE AT LOWEST PRICE

ಕೋಲಾರ: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ ಜು.೨೬ರಂದು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಶ್ರೀನಿವಾಸಪುರದಲ್ಲಿ ತರ್ನ ಹಳ್ಳಿ ಪ್ರಗತಿಪರ ರೈತ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಮುಖಂಡರು, ಅರಣ್ಯ ರಕ್ಷಕರೇ ಅರಣ್ಯ ಭಕ್ಷಕರಾದರೆ ಇನ್ನೂ ಸರ್ಕಾರದ ಅರಣ್ಯ ಭೂಮಿಯನ್ನು ಉಳಿಸುವವರು ಯಾರು? ಒಂದು ಕಡೆ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಮರಗಳ ಆಕ್ರಮ ಕಟಾವು ದಂದೆಗೆ ಕಡಿವಾಣ ಇಲ್ಲವೇ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ ಅರಣ್ಯ ಇಲಾಖೆ ಆಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ೩೭೨೫ ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯರು ಶ್ರೀಮಂತರು, ರಾಜಕೀಯ ವ್ಯಕ್ತಿಗಳು ರಾಜಾರೋಷವಾಗಿ ೧೦೦ ಎಕರೆಯಂತೆ ತಮಗೆ ಇಷ್ಟ ಬಂದ ಕಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಸೃಷ್ಠಿಸಿ ಸರ್ವೇ ಅಧಿಕಾರಿಗಳು ನಕ್ಷೆಯನ್ನು ತಯಾರಿಸಿ ಅರಣ್ಯ ಅಧಿಕಾರಿಗಳು ನಿಯತ್ತಾಗಿ ದಾಖಲೆಗಳನ್ನು ಒತ್ತುವರಿದಾರರ ಮನೆಗೆ ತಲುಪಿಸುತ್ತಿರುವುದು ದುರಾದೃಷ್ಟಕರ ಎಂದು ಅಧಿಕಾರಿಗಳ ಭ್ರಷ್ಟಚಾರದ  ವಿರುದ್ದ ಕಿಡಿ ಕಾರಿದರು.

ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಠಿಸಿ ರಾಷ್ರೀಕೃತ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಸಾಲವನ್ನು ಪಡೆದಿರುವ ಭೂ ಒತ್ತುವರಿದಾರರ ವಿರುದ್ದ ಕ್ರಮ  ಕೈಗೊಳ್ಳಲು ಹಿಂದೇಟು ಏಕೆ ಎಂದು ಪ್ರಶ್ನೆ  ಮಾಡುವ ಜೊತೆಗೆ ಸರ್ಕಾರದಿಂದ ಲಕ್ಷ ಲಕ್ಷ ಪಡೆಯುವ ಅಧಿಕಾರಿಗಳೇ ಮಾಜಿ ಶಾಸಕರಾದ ರಮೇಶ್‌ಕುಮಾರ್ ಅರಣ್ಯ ಭೂ ಒತ್ತುವರಿ ಜೊತೆಗೆ ಬಲಾಡ್ಯರ ೩೭೨೫ ಎಕರೆ ಭೂಮಿಯನ್ನು ತೆರೆವುಗೊಳಿಸಿ ನಿಮ್ಮ ತಾಕತ್ತು ಬಲಾಡ್ಯರ ಮೇಲೆ ತೋರಿಸಿ ಎಂದು ಸವಾಲು ಹಾಕಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಏಷ್ಯಾದ  ಎರಡನೇ ಅತಿ ದೊಡ್ಡ ಮಾರುಕಟ್ಟೆಗೆ  ಜಾಗಕ್ಕೆ ೫೦ ಎಕರೆ ಅರಣ್ಯ ಭೂಮಿ ನೀಡಲು ಕೇಂದ್ರ ಸರ್ಕಾರದ ಅರಣ್ಯ ಸಚಿವರ ಮೇಲೆ ಬೆರಳು ತೋರಿಸುವ ಅಧಿಕಾರಿಗಳೇ ಸಾವಿರಾರು ಎಕರೆ ಭೂ ಒತ್ತುವರಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಇಲ್ಲ ತಾವೇ ಕೋಟಿ ಕೋಟಿ ಹಣಕ್ಕೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದ್ದೀರೇಯೆ? ಇದು ಜಿಲ್ಲೆಯ ನೊಂದ ರೈತರ ಪ್ರಶ್ನೆ ಆಗಿದೆ ಎಂದರು.

ಒoದು ಕಡೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಬೆಳೆಬಾಳುವ ಆರ್ಕ್ಲಿಪಾರಂ ಆಕ್ರಮ ಮಾರಾಟ ದಂದೆ ಮತ್ತೊಂದೆಡೆ ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ವ್ಯಕ್ತಿಗಳಿಗೆ  ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಹಿನ್ನಲೆ ಏನೂ ಅರಣ್ಯ ಇಲಾಖೆಯಲ್ಲಿ ಹೆಜ್ಜೆ
ಹೆಜ್ಜೆಗೂ ನಡೆಯುತ್ತಿರುವ ಆಕ್ರಮ  ಭ್ರಷ್ಟಚಾರತೆಗೆ ಕುಮ್ಮಕ್ಕು ಯಾರು ಈ ದಂದೆಗಳು ತನಿಖೆ ಆಗಲೇಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಅಮಾನತು ಮಾಡಲೇಬೇಕು ಎಂದು ಆಗ್ರಹಿಸಿ ಈ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮoಜುನಾಥ್, ಪಾರುಕ್‌ಪಾಷ, ವಿಜಯ್‌ಪಾಲ್, ಆಲವಾಟ ಶಿವ, ಸಹದೇವಣ್ಣ, ಶೇಕ್‌ಶಪಿಹುಲ್ಲಾ, ಮುನಿರಾಜು,
ಮಂಗಸoದ್ರ ತಿಮ್ಮಣ್ಣ, ಮೂರಾಂಡಹಳ್ಳಿ  ಶಿವಾರೆಡ್ಡಿ, ಬಂಗಾರಿ ಮಂಜು, ಸುನಿಲ್‌ಕುಮಾರ್, ಭಾಸ್ಕರ್ ಮುಂತಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!