• Sun. May 5th, 2024

PLACE YOUR AD HERE AT LOWEST PRICE

ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಎಂಟು ತಿಂಗಳುಗಳು ಬಾಕಿ ಉಳಿದಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈ ಬಾರಿ ರಾಜ್ಯದಿಂದ ಸಂಸತ್ತಿನ ಮೇಲ್ಮನೆ ಪ್ರವೇಶಿಸುವ ಸಾಧ್ಯತೆಯಿದೆ.

ಕರ್ನಾಟಕದ ನಾಲ್ವರು ರಾಜ್ಯಸಭಾ ಸದಸ್ಯರಾದ ಜಿ ಸಿ ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್, ಡಾ. ಎಲ್ ಹನುಮಂತಯ್ಯ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ಅವಧಿ ಏಪ್ರಿಲ್ 2, 2024 ರಂದು ಕೊನೆಗೊಳ್ಳುತ್ತಿದೆ. ಪ್ರಸ್ತುತ ವಿಧಾನಸಭಾ ಸದಸ್ಯರ ಬಲಾಬಲದ ಪ್ರಕಾರ, ಕಾಂಗ್ರೆಸ್ ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಸೀರ್‌ ಹುಸೇನ್ ಅವರಿಗೆ ಮತ್ತೊಂದು ಅವಕಾಶ ನೀಡಲು ಉತ್ಸುಕತೆ ತೋರಿದ್ದಾರೆ. ಸೋನಿಯಾ ಗಾಂಧಿ ಜೊತೆ ರಾಜ್ಯದಿಂದ ಸೈಯದ್ ನಾಸೀರ್ ಹುಸೇನ್ ಮತ್ತು ಕಾಂಗ್ರೆಸ್‌ ವಕ್ತಾರೆ ಹಾಗೂ ಉತ್ತರ ಪ್ರದೇಶ ಮೂಲದ ಸುಪ್ರಿಯಾ ಶ್ರೀನಾಥೆ ಅವರು ಮೇಲ್ಮನೆ ಪ್ರವೇಶಿಸಬಹುದು ಎನ್ನಲಾಗುತ್ತಿದೆ.

ಇತ್ತೀಚಿಗೆ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಸೋನಿಯಾ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ, ಸಿಎಂ ಸಿದ್ದರಾಮಯ್ಯ ಅವರು ರಾಜ್ಯಸಭೆ ಸ್ಥಾನದ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಇದರ ಬಗ್ಗೆ ಸೋನಿಯಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಅವರು ಮೇಲ್ಮನೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

ಆರೋಗ್ಯ ಹಾಗೂ 10 ಜನಪಥ್ ಕಾರಣ

2019ರ ಬಳಿಕ ಸೋನಿಯಾ ಗಾಂಧಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದು ಕಷ್ಟವಾಗಬಹುದು. ಇದರಿಂದ ರಾಜ್ಯಸಭೆಯಿಂದ ಆಯ್ಕೆಯಾಗಲು ಚಿಂತನೆ ನಡೆಸುತ್ತಿದ್ದಾರೆ.

ಅದಲ್ಲದೆ 1989ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 10 ಜನಪಥ್ ಮಾರ್ಗದ ರಸ್ತೆ ನಿವಾಸಕ್ಕೆ ಸ್ಥಳಾಂತರವಾಗಿದ್ದರು. ಅಂದಿನಿಂದಲೂ ಸೋನಿಯಾ ಅವರು ಅಲ್ಲಿಯ ವಾಸವಿದ್ದಾರೆ. ರಾಜ್ಯಸಭೆಯಿಂದ ಆಯ್ಕೆಯಾದರೆ ಅವರು ಈ ನಿವಾಸವನ್ನು ಉಳಿಸಿಕೊಳ್ಳಲು ಕಾರಣವಾಗಬಹುದು.

ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ದೆಹಲಿಯ ತುಘಲಕ್ ಕ್ರೆಸೆಂಟ್‌ನ ಸರ್ಕಾರಿ ಬಂಗಲೆಯನ್ನು ತೆರವು ಮಾಡಿದ್ದರು. ಈಗ ಅವರು ತಾಯಿ ಸೋನಿಯಾ ನಿವಾಸದಲ್ಲಿಯೇ ವಾಸವಿದ್ದಾರೆ.

ಪ್ರಸ್ತುತ ಅವಧಿಯನ್ನು ಒಳಗೊಂಡು ರಾಯ್‌ಬರೇಲಿಯಿಂದ ಸೋನಿಯಾ ಅವರು ಸತತ ಐದು ಬಾರಿಯಿಂದ ಸಂಸದೆಯಾಗಿದ್ದಾರೆ. ಆದರೆ 2019ರ ನಂತರ ಅನಾರೋಗ್ಯ ಮತ್ತು ಮುಂತಾದ ಕಾರಣಗಳಿಂದ ಅವರು ಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡುತ್ತಿಲ್ಲ. ಇದು ಕೂಡ ರಾಜ್ಯಸಭೆಗೆ ಸ್ಪರ್ಧಿಸಲು ಪ್ರಮುಖ ಕಾರಣವಾಗಿದೆ.

ಒಂದು ವೇಳೆ ಪ್ರಿಯಾಂಕಾ ಗಾಂಧಿ ಅವರು 2024ರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದರೂ, ಮೊದಲ ಬಾರಿಗೆ ಸಂಸದರಾಗುವ ಕಾರಣ ಅವರಿಗೆ 10 ಜನಪಥ್ ನಿವಾಸದಲ್ಲಿ ಉಳಿದುಕೊಳ್ಳುವ ಅವಕಾಶ ಸಿಗುವುದಿಲ್ಲ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!