• Tue. May 7th, 2024

PLACE YOUR AD HERE AT LOWEST PRICE

ಮುಳಬಾಗಿಲು:ಟಮೊಟೋಗೆ ಬಂದಂತಹ ಬೆಲೆ ಉಳಿದ ಎಲ್ಲಾ ಕೃಷಿ ಉತ್ಪನ್ನಗಳಿಗೂ ಬೇಡಿಕೆ ಉಂಟಾಗಲಿದೆ ಕೃಷಿಕರು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡದೆ ಕೃಷಿಯನ್ನು ಬಿಡದೆ ದೇಶಕ್ಕೆ ಅನ್ನ ನೀಡುವ ಕಾಯಕದಲ್ಲಿ ತೊಡಗುವ ಮೂಲಕ ದೇಶ ಕಟ್ಟಬೇಕಾಗಿದೆ ಎಂದು ಬಿಕೆಎಸ್ ಜಿಲ್ಲಾ ಸಹ ಕಾರ್ಯದರ್ಶಿ ವಕೀಲ ವಿ.ಜಯಪ್ಪ ಹೇಳಿದರು.

ತಾಲೂಕಿನ ತಿಮ್ಮರಾವುತನಹಳ್ಳಿ ಗ್ರಾಮದ ಶ್ರೀಸಂಗಮೇಶ್ವರ ದೇವಾಲಯದಲ್ಲಿ ಗ್ರಾ.ಪಂ. ವ್ಯಾಪ್ತಿಯ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳ ಆಯ್ಕೆ ಮತ್ತು ಗ್ರಾಮ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಭಾರತ ದೇಶ ಸಮೃದ್ದವಾಗಿದ್ದ ಕಾಲ ಘಟ್ಟದಲ್ಲಿ ಮೊಘಲರು, ಡಚ್ಚರು, ಬ್ರಿಟೀಷರು ದಾಳಿ ಮಾಡಿ ಕೃಷಿ ಉತ್ಪನ್ನಗಳು, ಸಾಂಬಾರು ಉತ್ಪನ್ನಗಳೊಂದಿಗೆ ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದರು.

ಅಷ್ಟೊಂದು ಸಂಪತ್ತು ಭರಿತ ಕೃಷಿ ಪ್ರಧಾನ ದೇಶದಲ್ಲಿ ಸ್ವಾತಂತ್ರ್ಯಾ ನಂತರ ಕೃಷಿಕನು ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿ ಇಲ್ಲದೆ ರೈತ ಅರ್ಥಿಕವಾಗಿ ದಿವಾಳಿಯಾಗಿದ್ದರಿಂದ ಅಭಿವೃದ್ದಿಯಾಗಲು ಸಾದ್ಯವಾಗಲಿಲ್ಲ, ಸರ್ಕಾರಗಳು ತೆಗೆದುಕೊಳ್ಳುವ ರೈತ ವಿರೋಧಿ, ಕೃಷಿ ವಿರೋಧಿ ನೀತಿಗಳು ಬಿಕ್ಕಟ್ಟು ಸೃಷ್ಠಿಸಿದ್ದು ಇದರಿಂದ ನಷ್ಟ ಉಂಟಾದ ಕಾರಣ ರೈತ ಜಮೀನುಗಳನ್ನು ಮಾರಾಟ ಮಾಡಿ ಬೀದಿಗೆ ಬೀಳುತ್ತಿದ್ದಾರೆಂದರು.

ಬಿಕೆಎಸ್ ದಕ್ಷಣ ಪ್ರಾಂತ ಕಾರ್ಯಕಾರಿ ಸದಸ್ಯ ಎ.ಅಪ್ಪಾಜಿಗೌಡ ಮಾತನಾಡಿ ಸರ್ಕಾರಿ ನೌಕರರು, ಅಶಾ ಅಂಗನವಾಡಿ ಕಾರ್ಯಕರ್ತೆಯರು ಯಾವ ರೀತಿ ವೇತನವನ್ನು ಕಾಲ ಕಾಲಕ್ಕೆ ಎಚ್ಚರಿಸಬೇಕೆಂದು ಹೋರಾಟಗಳು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯುವಂತೆ ರೈತರು ಸಹ ತಾವು ಬೆಳೆಯುವ ಹಣ್ಣು ತರಕಾರಿ ದವಸ ದಾನ್ಯಗಳು ಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಬೆಲೆ ನಿಗದಿ ಮಾಡಿ ವೇತನ ಹೆಚ್ಚಿಸಿದಂತೆ ಕೃಷಿ ಉತ್ಪನ್ನಗಳಿಗೂ ಹಾಲಿನ ಉತ್ಪನ್ನಗಳಿಗೂ ಬೆಲೆ ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ತಂದಾಗಲೇ ಉದ್ಯಮಿಗಳು ಸರ್ಕಾರಿ ಅಧಿಕಾರಿಗಳು ನೌಕರರಂತೆ ಕೃಷಿಕರು ಜೀವನ ಸಾಗಿಸಬಹುದು ಇಲ್ಲದಿದ್ದರೆ ಕಷ್ಠದ ದಿನಗಳು ಎದುರಿಸಬೇಕಾಗುತ್ತದೆ ಈ ನಿಟ್ಟಿನಲ್ಲಿ ರೈತ ಜಾಗೃತಿ ಕಾರ್ಯಕ್ರಮಗಳು ಕಿಸಾನ್ ಸಂಘದಿAದ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಹಿರಿಯ ಮುಖಂಡ ಸುಬ್ರಮಣಿರೆಡ್ಡಿ ದೇವಾಲಯದ ಅರ್ಚಕ ಶ್ರೀಧರ್‌ಶಾಸ್ತ್ರಿ ಮಾತನಾಡಿದರು. ಈ ವೇಳೆ ಮುಖಂಡರಾದ ರಾಜಾರೆಡ್ಡಿ, ಹನುಮಂತರೆಡ್ಡಿ, ಎ.ಎಂ.ಚಂದ್ರಶೇಖರ್, ಚಲಪತಿ, ಕುಪ್ಪಾಂಡಹಳ್ಳಿ ವಿ.ಕೃಷ್ಣಪ್ಪ, ಕೋಗಿಲೇರು ಸುಬ್ರಮಣಿ, ವಿ.ಗಣೇಶ್, ಮೋಹನ್‌ರೆಡ್ಡಿ, ಮಾರಪ್ಪ, ಎತೂರಹಳ್ಳಿ ಸತೀಶ್, ದೊಡ್ಡೇಗೌಡ, ಲೋಕೇಶ್‌ರೆಡ್ಡಿ, ಷಣ್ಮುಖ, ಅಬ್ಬೇನಹಳ್ಳಿ ಮಂಜುನಾಥ್, ನಾಗರಾಜಗೌಡ, ಜಗನ್ನಾಥಶೆಟ್ಟಿ, ರಮಣರೆಡ್ಡಿ, ಎಸ್.ಅಶೋಕ್, ದಿಲೀಪ್, ವೇಣುಗೋಪಾಲ್ ಇದ್ದರು.

ಗ್ರಾ.ಪಂ. ಮಟ್ಟದ ಪದಾಧಿಕಾರಿಗಳ ನೇಮಕ.

ಅಧ್ಯಕ್ಷರಾಗಿ ತಿಮ್ಮರಾವುತನಹಳ್ಳಿ ಚಲಪತಿ, ಗೌರವಾಧ್ಯಕ್ಷ ಕೋಗಿಲೇರು ಎ.ಎಂ.ಚಂದ್ರಶೇಖರ್, ಉಪಾಧ್ಯಕ್ಷ ಕೋಗಿಲೇರು ಮೋಹನರೆಡ್ಡಿ, ಕಾರ್ಯದರ್ಶಿ ಏತೋರಹಳ್ಳಿ ಸತೀಶ್, ಖಜಾಂಚಿ ಕುಪ್ಪಾಂಡಹಳ್ಳಿ ವಿ.ಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮಣರೆಡ್ಡಿ, ದಿಲೀಪ್, ದೊಡ್ಡೇಗೌಡ, ಎಂ.ಸುಬ್ರಮಣಿ, ರಾಜಾರೆಡ್ಡಿ, ಜನಾರ್ಧನ್‌ಶೆಟ್ಟಿ, ಮಂಜುನಾಥ್, ರಾಮಮೂರ್ತಿ, ಜನಾರ್ಧನ್, ಮುರಳಿ ಅವರನ್ನು ಆಯ್ಕೆ ಮಾಡಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!