• Tue. Apr 30th, 2024

ಶೌಚಾಲಯದಲ್ಲಿ ಹಿಡನ್‌ ಕ್ಯಾಮೆರಾ ಇದೆ ಎಂಬ ವದಂತಿ ಹರಡಿದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ವೀಡಿಯೋ ಹರಿದಾಡುತ್ತಿದೆ ಎಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಖುಷ್ಬೂ

PLACE YOUR AD HERE AT LOWEST PRICE

  • ಕೋಮು ಬಣ್ಣಕ್ಕೆ ತಿರುಗಿರುವ ಉಡುಪಿ ಕಾಲೇಜಿನ ವಿಡಿಯೋ ಪ್ರಕರಣ
  • ‘ಇದು ಬ್ರೇಕಿಂಗ್ ನ್ಯೂಸ್ ಅಲ್ಲ’ ಎಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ

ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉಡುಪಿಗೆ ಆಗಮಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಪ್ರತಿನಿಧಿ ಖುಷ್ಬೂ ಸುಂದರ್‌, ಶೌಚಾಲಯದಲ್ಲಿ ಯಾವುದೇ ಹಿಡನ್‌ ಕ್ಯಾಮೆರಾಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಪೊಲೀಸರೊಂದಿಗೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಶೌಚಾಲಯದಲ್ಲಿ ಹಿಡನ್‌ ಕ್ಯಾಮೆರಾ ಇದೆ ಎಂಬ ವದಂತಿ ಹರಡಿದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ವೀಡಿಯೋ ಹರಿದಾಡುತ್ತಿದೆ. ಇದೊಂದು ಶೈಕ್ಷಣಿಕ ಸಂಸ್ಥೆ. ಹಾಗಾಗಿ ಹಿಡನ್‌ ಕ್ಯಾಮೆರಾಗಳು ಇರಲು ಸಾಧ್ಯವಿಲ್ಲ ಎಂದರು.

ಯಾರಾದರೂ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ಅದನ್ನು ನಾವು ಪುರಸ್ಕರಿಸಲು ಆಗಲ್ಲ. ನಮಗೆ ದಾಖಲೆಗಳು ಬೇಕು. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂದು ಖುಷ್ಬೂ ತಿಳಿಸಿದರು.

‘ಶೌಚಾಲಯದಲ್ಲಿ ಹಿಡನ್‌ ಕ್ಯಾಮೆರಾ ಇದೆ ಎಂಬುದು ಕೇವಲ ವದಂತಿಯಷ್ಟೇ. ಮಾಧ್ಯಮದವರೂ ಕೂಡ ಇದೇ ವದಂತಿಯನ್ನು ನಂಬಿಕೊಂಡು ನನ್ನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಇದು ಬೇಸರ ತರಿಸುತ್ತಿದೆ. ಈ ಪ್ರಕರಣದ ಕುರಿತು ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಕಾಲೇಜಿನಲ್ಲಿ ನಾಲ್ಕು ಗಂಟೆ ತಪಾಸಣೆ ನಡೆಸಿಯೂ ಏನೂ ಸಿಕ್ಕಿಲ್ಲವೇ ಎಂದು ಕೇಳಿದ ಪತ್ರಕರ್ತನಿಗೆ ಉತ್ತರ ನೀಡಿದ ಖುಷ್ಬೂ ಸುಂದರ್, ‘ಇದು ಬ್ರೇಕಿಂಗ್ ನ್ಯೂಸ್ ಅಲ್ಲ. ಇದು ವಿದ್ಯಾರ್ಥಿಗಳ ಬಗೆಗಿನ ವಿಷಯ. ಮಹಿಳೆಯರ ವಿಚಾರ. ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ಇದು ಎರಡು ನಿಮಿಷದಲ್ಲಿ ತಯಾರಾಗುವ ನೂಡಲ್ಸ್ ಅಲ್ಲ” ಎಂದು ಖಡಕ್ ಆಗಿಯೇ ಉತ್ತರಿಸಿದರು.

‘ರಾಷ್ಟ್ರೀಯ ಮಹಿಳಾ ಆಯೋಗವು ಪೊಲೀಸರೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ನಾವೂ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹಾಗಾಗಿ ಯಾವುದೇ ಮಾಹಿತಿಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ತಿಳಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!