• Fri. May 3rd, 2024

PLACE YOUR AD HERE AT LOWEST PRICE

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸುಮಾರು ೧೯೬ ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಗಳಿಂದ ಸಾಬೀತಾಗಿದ್ದು, ಸರ್ಕಾರ ಕೂಡಲೇ ಕೋಮುಲ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸಬೇಕೆಂದು ಜನಾಂಧೋಲನ ಸಂಘಟನೆ ಸರ್ಕಾರವನ್ನು ಆಗ್ರಹಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಚಂಜಿಮಲೆ ಮುನೇಶ್ ಮಾತನಾಡಿ, ಕೋಚಿಮುಲ್ ಒಕ್ಕೂಟದಲ್ಲಿ ಮೆಗಾ ಡೈರಿ ಘಟಕ ನಿರ್ಮಾಣದ ಹಾಲು ಸಂಸ್ಕರಣಾ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ಸಂಸ್ಕರಣಾ ಯಂತ್ರೋಪಕರಣ ಖರೀದಿಯಲ್ಲಿ ಸರ್ಕಾರದ ಯೋಜನಾ ಅನುಮೋದನೆಗಿಂತ ಹಲವು ದಶ ಕೋಟಿ ರೂಪಾಯಿಗಳ ಹೆಚ್ಚುವರಿ ಹಣ ವೆಚ್ಚ ಮಾಡಿರುವುದು ಅಧಿನಿಯಮ ೬೫ರ ವಿಚಾರಣೆಯಂತೆ ಅಧಿಕ ವೆಚ್ಚ ವಸೂಲಾತಿ ಕ್ರಮವಹಿಸದಿರುವುದರ ವಿರುದ್ಧ ತತ್‌ಕ್ಷಣ ಹಾಲು ಒಕ್ಕೂಟಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಮೆಗಾ ಡೈರಿ ಸ್ಥಾಪನೆಯ ಯೋಜನೆಯ ಅನುಷ್ಠಾನದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಆಡಳಿತ ಮಂಡಳಿಯು ಅನುಷ್ಟಾನ ಮಾಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಫಲವಾಗಿ ಅಧಿಕ ವೆಚ್ಚ ಮತ್ತು ಹಣ ದುರುಪಯೋಗ ಮಾಡಿಕೊಂಡಿರುವುದು ತನಿಖೆಗಳಿಂದ ಸಾಭೀತಾಗಿದೆ.

ಬಹುಮುಖ್ಯವಾಗಿ ಪ್ರತಿನಿಧಿಸುವ ಸರ್ಕಾರಿ ಅಧಿಕಾರಿಗಳು ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿದ್ದು, ಅನುಮೋದನೆ ನೀಡುವ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಪರಿಶೀಲನೆ ಮಾಡದೆ ಅನುಮೋದನೆ ನೀಡಲಾಗಿದೆ ಎಂದು ಆರೋಪ ಮಾಡಿದರು.

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ೬.೯೬ ಕೋಟಿ ಲಾಭದಲ್ಲಿದೆ ಎಂದು ಸುಳ್ಳು ಹೇಳುತ್ತಿರುವ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮತ್ತು ಮಾಜಿ ವ್ಯವಸ್ಥಪಕ ನಿರ್ದೇಶಕ ಹಾಗೂ ಆಡಳಿತ ಮಂಡಳಿಯ ಹಾಲಿ ನಿರ್ದೇಶಕ ಹನುಮೇಶ್ ಸರ್ಕಾರಕ್ಕೆ ಹಾಗೂ ಜನತೆಗೆ ತಪ್ಪು ಸಂದೇಶ ನೀಡಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಸೆಕ್ಷನ್ ೬೮ರಂತೆ ಹಣ ವಸೂಲಾತಿ ಮತ್ತು ಕರ್ತವ್ಯ ಲೋಪದ ವಿರುದ್ದ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಕಾರ್ಯಾದೇಶ ನೀಡಿ ಸಾಲಕ್ಕು ತಿಂಗಳು ಕಳೆದರೂ ಕೂಡ ಇಂದಿನವರೆಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ದೂರಿದರು. .

ಇನ್ನೂ ಈಗಾಗಲೇ ಅರೋಪ ಹೊತ್ತಿರುವ ಅಧ್ಯಕ್ಷರು ಹಾಗೂ ನಿರ್ದೇಶಕ ಹನುಮೇಶ್ ರವರು ಇದೀಗ ಮೆಗಾ ಡೈರಿ ಯೋಜನೆ ಆರಂಭಕ್ಕೂ ಮುನ್ನವೇ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಸಾಭೀತಾಗಿರುವವರಿಂದಲೇ ನೇಮಕಾತಿ ನಡೆದರೆ ಇನ್ನಷ್ಟು ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿದೆ ಕಾರಣ ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಬೇಕು, ಹಗರಣದಲ್ಲಿ ಒಕ್ಕೂಟಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಮತ್ತು ಸಮರ್ಪಕವಾದ ಆಡಳಿತಾಧಿಕಾರಿ ನೇಮಕ ಮಾಡುವ ಮೂಲಕ ಮುಂದೆ ಇಂತಹ ಹಾಲು ಒಕ್ಕೂಟಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ರಾಜ್ಯ ಸರ್ಕಾರವು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.

 

nammasuddi.net ನಲ್ಲಿ ಜಾಹೀರಾತು ಪ್ರಕಟಣೆಗಾಗಿ ಸಂಪರ್ಕಿಸಿ :

ಕೆ.ಎಸ್.ಗಣೇಶ್ – 9448311003
ಸಿ.ವಿ.ನಾಗರಾಜ್ – 9632188872
ಕೆ.ರಾಮಮೂರ್ತಿ – 9449675480

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!