• Sun. May 5th, 2024

PLACE YOUR AD HERE AT LOWEST PRICE

ಕೆಜಿಎಫ್:ಪೋನ್ ಪೇ ಲಿಂಕ್ ಒತ್ತಿದರೆ ತಿಂಗಳಿಗೆ 50 ಸಾವಿರ ರೂ ಆದಾಯ ಬರುವುದಾಗಿ ಹೇಳಿದ್ದನ್ನು ನಂಬಿದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ಗೆ ಬಂದ ಲಿಂಕನ್ನು ಒತ್ತಿದ್ದರಿಂದ ತಮ್ಮ ಬ್ಯಾಂಕ್ ಖಾತೆಯಿಂದ 15.27.400 ರೂ ಕಳೆದುಕೊಂಡಿದ್ದಾರೆ.

ಸುಭಾಷ್ ನಗರದ ಮುರುಗನ್ ಮೊಬೈಲ್ ಗೆ 9263533522 ಸಂಖ್ಯೆಯೊಂದ ಕರೆ ಮಾಡಿದ ದುಷ್ಕರ್ಮಿಯು ನಾನು ಟಿಜೆಸಿ ಕಾರ್ಪೋರೇಟ್ ಕಂಪನಿಯ ರೀಜನಲ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ನಂತರ ತಿಂಗಳಿಗೆ 50 ಸಾವಿರ ರೂ ಆದಾಯ ಬರುವುದು ಎಂಬ ಪೋನ್ ಪೇ ಲಿಂಕ್ ಅನ್ನು ಕಳುಸಿದ್ದು ಅದನ್ನು ಓಪನ್ ಮಾಡಿದರೆ ತಿಂಗಳಿಗೆ 50 ಸಾವಿರ ರೂ ಬರುವುದಾಗಿ ನಂಬಿಸಿದ್ದ. ಮುರುಗನ್ ತನ್ನ ಮೊಬೈಲ್ ಗೆ ಬಂದಿದ್ದ ಲಿಂಕ್ ಅನ್ನು ಓಪನ್ ಮಾಡಿದ್ದಾರೆ.

ಅದನ್ನು ಬಳಸಿಕೊಂಡ ದುಷ್ಕರ್ಮಿಯು ಪೋನ್ ಪೇ ಮುಖಾಂತರ ಹಂತ ಹಂತವಾಗಿ ಒಂದು ತಿಂಗಳಿನಿಂದ 15.27.400 ರೂಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಸೈಬರ್ ಕ್ರೈಂ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!