• Sun. May 5th, 2024

PLACE YOUR AD HERE AT LOWEST PRICE

ಬೆಂಗಳೂರು:ಹೆಲ್ತ್ ಕೇರ್ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ಹೆಡ್ ಲೈಸ್ (ಹೇನು) ಸೋಂಕನ್ನು ಎದುರಿಸಲು ಭಾರತದಲ್ಲಿ ಮೊಟ್ಟಮೊದಲ LICE ಕ್ಲಿನಿಕ್ ಅನ್ನು ಆರಂಭಿಸಿದೆ.

ಹೇನು, ಅಥವಾ ಪೆಡಿಕ್ಯುಲೋಸಿಸ್ ಕ್ಯಾಪಿಟಿಸ್, ಶಾಲೆಗಳು ಮತ್ತು ಸಾಮಾಜಿಕ ವಾತಾವರಣಗಳ ನಿಕಟ ಸಂಪರ್ಕದಿಂದ ಪೋಷಕರು ಮತ್ತು ಮಕ್ಕಳಲ್ಲಿ ಬಹು ಬೇಗ ಕಾಣಿಸಿಕೊಳ್ಳುತ್ತದೆ. ಇದರಿಂದ ನೆತ್ತಿಯಲ್ಲಿ ತುರಿಕೆ ಉಂಟಾಗಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು, ಇದು ಪೀಡಿತ ವ್ಯಕ್ತಿಗಳು ಮತ್ತು ಪೋಷಕರಿಗೆ ಸಮಾನವಾಗಿ ತೊಂದರೆ ಉಂಟುಮಾಡುತ್ತದೆ.

LICE ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಾನಿ ಆನಂದ್, “ಸಾಂಪ್ರದಾಯಿಕವಾಗಿ, ಹೇನುಗಳ ನಿರ್ವಹಣೆಯು ಟಾಪಿಕಲ್ ಮತ್ತು ಓರಲ್ ಪೆಡಿಕ್ಯುಲಿಸೈಡ್ ಏಜೆಂಟ್‌ಗಳ ಮುಖಾಂತರ ಇಲ್ಲವೇ ಕೆಲವು ಶಾಂಪೂಗಳ ಮೂಲಕ ಸಾಧ್ಯವಾಗುತ್ತದೆ.

ನಾವು ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್‌ನಲ್ಲಿ ರಾಸಾಯನಿಕ ಮುಕ್ತ ಎಲೆಕ್ಟ್ರಾನಿಕ್ ಸಾಧನವನ್ನು ಪರಿಚಯಿಸುವುದರೊಂದಿಗೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಇದು ಕೇವಲ 2 ಸೆಷನ್‌ಗಳಲ್ಲಿ ತಲೆಯಲ್ಲಿರುವ ಹೇನುಗಳನ್ನು ತೊಡೆದುಹಾಕುವ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವನ್ನು ಅನುಸರಿಸುತ್ತದೆ” ಎಂದರು.

“ಹೇರ್‌ಲೈನ್ ಇಂಟರ್‌ನ್ಯಾಶನಲ್‌ನಲ್ಲಿ, ನಮ್ಮ ಧ್ಯೇಯವು ಸದಾ ಹೊಸತನವನ್ನು ಪರಿಚಯಿಸುವುದು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವುದಾಗಿದೆ. LICE ಕ್ಲಿನಿಕ್‌ನ ಪ್ರಾರಂಭದೊಂದಿಗೆ, ತಲೆ ಹೇನುಗಳ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ಮೀಸಲಾದ ಸೌಲಭ್ಯವನ್ನು ನೀಡಲು ನಾವು ಸಿದ್ದರಿದ್ದೇವೆ.

ನಮ್ಮಲ್ಲಿ ಪರಿಣಿತ ಚರ್ಮಶಾಸ್ತ್ರಜ್ಞರ ತಂಡವಿದ್ದು ಅವರು ವೈಯಕ್ತೀಕರಿಸಿದ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ಸಜ್ಜಾಗಿದ್ದಾರೆ. ಪ್ರತಿ ರೋಗಿಯು ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಪಡೆಯುತ್ತಾನೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ”ಎಂದು ಅವರು ಹೇಳಿದರು.

ಬೆಂಗಳೂರಿನ ಕೋರಮಂಗಲದಲ್ಲಿರುವ ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕರಾದ ಎನ್ ಎ ಹ್ಯಾರಿಸ್ ಉದ್ಘಾಟಿಸಿ, ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ LICE ಕ್ಲಿನಿಕ್ ಅನ್ನು ಪ್ರಾರಂಭಿಸುವ ಮುಂದಾಳತ್ವವನ್ನು ಶ್ಲಾಘಿಸಿದರು.

ಇದು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು. ಇದು ನಮ್ಮ ಸಮುದಾಯದ ಮೇಲೆ ಪರಿಣಾಮ ಬೀರುವ ಸಾಮಾನ್ಯ ಮತ್ತು ಆಗಾಗ್ಗೆ ಕಡೆಗಣಿಸಲ್ಪಡುವ ಸಮಸ್ಯೆಯನ್ನು ಪರಿಹರಿಸುತ್ತದೆ. ವಿಶೇಷವಾದ ಆರೈಕೆಯನ್ನು ನೀಡುವ ಅವರ ಅಚಲ ಬದ್ಧತೆಗಾಗಿ ನಾನು ಹೇರ್‌ಲೈನ್ ಇಂಟರ್‌ನ್ಯಾಶನಲ್ ಅನ್ನು ಶ್ಲಾಘಿಸುತ್ತೇನೆ ಮತ್ತು ಭಾರತದ ಮೊದಲ LICE ಕ್ಲಿನಿಕ್ ಅನ್ನು ಸ್ಥಾಪಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸುತ್ತೇನೆ” ಎಂದು ಅವರು ಹೇಳಿದರು.

ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಡರ್ಮಟೊಸರ್ಜನ್ ಡಾ. ದಿನೇಶ್ ಜಿ ಗೌಡ ಮತ್ತು ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಕಲಾ ವಿಮಲ್, ಹೊಸ ಕ್ರಾಂತಿಕಾರಿ ಚಿಕಿತ್ಸೆಯ ಕುರಿತು ವಿವರಿಸುತ್ತಾ, “ಹೇರ್‌ಲೈನ್ ಇಂಟರ್‌ನ್ಯಾಶನಲ್‌ನಲ್ಲಿ, ಹೇನುಗಳ ವಿರುದ್ಧ ಕ್ರಾಂತಿಕಾರಿ ಚಿಕಿತ್ಸೆ ನೀಡಿ ಬದಲಾವಣೆಗಳನ್ನು ತರಲು ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದ್ದೇವೆ.

ಸುಧಾರಿತ ಹೀರಿಕೊಳ್ಳುವ ಈ ಸಾಧನದಿಂದ ಹೇನುಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವಂತೆ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಅನುಭವಿ ಚರ್ಮಶಾಸ್ತ್ರಜ್ಞರ ಮೇಲ್ವಿಚಾರಣೆಯಲ್ಲಿ ನಾವು ಕೇವಲ ಎರಡು ಸೆಷನ್ ಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸುವ ಖಚಿತತೆ ನೀಡುತ್ತೇವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕಿತ್ಸಾಲಯದ ವಿಶೇಷವಾದ ನಿಟ್-ಕೂಂಬಿಂಗ್ ತಂತ್ರದ ಪ್ರದರ್ಶನಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು. ಇದು ಚಿಕಿತ್ಸಾ ಪ್ರಕ್ರಿಯೆಯ ಅತ್ಯಗತ್ಯ ಅಂಶವಾಗಿದೆ. ಭಾರತದ ಮೊದಲ LICE ಕ್ಲಿನಿಕ್ ಅನ್ನು ಪ್ರಾರಂಭಿಸುವುದರೊಂದಿಗೆ, ಹೇರ್‌ಲೈನ್ ಇಂಟರ್ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ನೆತ್ತಿಯ ಆರೋಗ್ಯವನ್ನು ಉತ್ತೇಜಿಸಲು ಮತ್ತು ಹೇನುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತನ್ನ ಕಾಳಜಿಯನ್ನು ಪ್ರದರ್ಶಿಸುತ್ತದದೆ ಎಂದರು.

ಕೊರಮಂಗಲ ಹಾಗೂ ಇಂದಿರಾನಗರದಲ್ಲಿರುವ ಹೇರ್‌ಲೈನ್‌ನ ಕ್ಲಿನಿಕ್‌ಗಳಲ್ಲಿ ತಲೆ ಹೇನು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!