• Thu. May 2nd, 2024

PLACE YOUR AD HERE AT LOWEST PRICE

ಕರ್ನಾಟಕದಲ್ಲಿ ಮತ್ತೆ ಪರಭಾಷಾ ಸಿನಿಮಾಗಳ ಹಾವಳಿ ಶುರುವಾಗಿದೆ. ಅದ್ಯಾವ ಮಟ್ಟಿಗೆ ಅಂದರೆ ಬೆಂಗಳೂರಿನ ಕೆ. ಜಿ ರಸ್ತೆಯ ಮೇನ್ ಥಿಯೇಟರ್‌ಗಳಲ್ಲೇ ಪರಭಾಷಾ ಸಿನಿಮಾಗಳು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಬಿದ್ದು ಕನ್ನಡದಲ್ಲಿ ಸಿನಿಮಾಗಳ ರಿಲೀಸ್ ಕಮ್ಮಿ ಆಗ್ತಿದೆ. ಹಾಗಾಗಿ ತೆಲುಗು, ತಮಿಳು, ಹಿಂದಿಯ ದೊಡ್ಡ ದೊಡ್ಡ ಸಿನಿಮಾಗಳು ದಾಂಗುಡಿ ಇಡುತ್ತಿವೆ.

ಒಂದ್ಕಾಲದಲ್ಲಿ ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಈಗ ಅವಕಾಶ ಇದೆ. ಆದರೂ ತಮ್ಮದೇ ಭಾಷೆಯನ್ನು ಸಿನಿಮಾಗಳನ್ನು ತಂದು ರಿಲೀಸ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕಾಟಾಚಾರಕ್ಕೆ ಕೆಲ ಸಿನಿಮಾಗಳನ್ನು ಕನ್ನಡಕ್ಕೂ ಡಬ್ ಮಾಡುತ್ತಿದ್ದಾರೆ. ಆದರೆ ಹೆಚ್ಚು ಶೋಗಳನ್ನು ಕೊಡಲ್ಲ. ನಾಮಕಾವಸ್ತೆಗೆ ಒಂದೆರಡು ಶೋ ಕೊಟ್ಟು ಸುಮ್ಮನಾಗುತ್ತಾರೆ. ಮುಂದಿನ ವಾರವೂ ರಾಜ್ಯದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಶುರುವಾಗುತ್ತಿದೆ.

ದಶಕಗಳಿಂದಲೂ ಪರಭಾಷಾ ಸಿನಿಮಾಗಳ ಜೊತೆ ಕನ್ನಡ ಸಿನಿಮಾಗಳು ಕರ್ನಾಟಕದಲ್ಲೇ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಇದೆ. ಆದರೆ ಮುಂದಿನ ವಾರ ಪೈಪೋಟಿ ನಡೆಸೋಕೆ ಕನ್ನಡ ಸಿನಿಮಾಗಳೇ ರಿಲೀಸ್ ಆಗುತ್ತಿಲ್ಲ. ಇದರ ಲಾಭವನ್ನು ತಮಿಳು, ಹಿಂದಿ ಸಿನಿಮಾಗಳು ಪಡೆದುಕೊಳ್ಳುತ್ತಿವೆ. ಈಗಾಗಲೇ ತಮಿಳಿನ ‘ಜೈಲರ್’ ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮತ್ತೊಂದು ಕಡೆ ಬಾಲಿವುಡ್‌ನ ‘ಗದರ್ -2’, ತೆಲುಗಿನ ‘ಭೋಳಾ ಶಂಕರ್’ ಸಿನಿಮಾಗಳು ಬರ್ತಿವೆ.

‘ಕ್ಷೇತ್ರಪತಿ’ ಸೇರಿದಂತೆ ಒಂದೆರಡು ಕನ್ನಡ ಸಿನಿಮಾಗಳು ಮುಂದಿನ ವಾರ ಬಿಡುಗಡೆ ಆಗುತ್ತಿವೆ. ಆದರೆ ಪರಭಾಷೆಯ ದೊಡ್ಡ ಸಿನಿಮಾಗಳ ನಡುವೆ ಈ ಸಿನಿಮಾಗಳು ಸದ್ದು ಮಾಡೋದು ಕಷ್ಟವಾಗಿಬಿಟ್ಟಿದೆ. ಈಗಾಗಲೇ ಬೆಂಗಳೂರಿನಲ್ಲಿ ‘ಜೈಲರ್’ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಮೊದಲ ದಿನ ಸಾವಿರಾರು ಶೋಗಳಲ್ಲಿ ‘ಜೈಲರ್’ ಪ್ರದರ್ಶನವಾಗಲಿದೆ.

ಈಗಾಗಲೇ ತಮಿಳಿನ 500ಕ್ಕೂ ಅಧಿಕ ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಆದರೆ ಕನ್ನಡ ವರ್ಷನ್‌ ಬೆರಳೆಣಿಯಷ್ಟು ಮಾತ್ರ ಇದೆ. ಇನ್ನು ಪಿವಿಆರ್‌ ಹಾಗೂ ಐನಾಕ್ಸ್ ಚೈನ್‌ಗಳಲ್ಲಿ ಸಿನಿಮಾ ಮೊದಲ ದಿನ ಟಿಕೆಟ್ ದರ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಪರಭಾಷಾ ಸಿನಿಮಾಗಳ ಹಗಲು ದರೋಡೆ ನಡೀತಿದೆ.

ಕೆಜಿ ರಸ್ತೆಯ ಸಂತೋಷ್‌ ಚಿತ್ರಮಂದಿರದಲ್ಲಿ ‘ಜೈಲರ್’ ತೆಲುಗು ವರ್ಷನ್ ಹಾಕಿದ್ದಾರೆ. ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ ಕೂಡ ಅಲ್ಲಿ ತೆಲುಗು ಶೋ ಪ್ರದರ್ಶನ ಮಾಡುತ್ತಿರುವುದು ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಕನ್ನಡ ಸಿನಿಮಾಗಳಿಗೆ ಹೆಸರುವಾಸಿಯಾದ ಹಲವು ಥಿಯೇಟರ್‌ಗಳಲ್ಲಿ ‘ಜೈಲರ್’ ತಮಿಳು ವರ್ಷನ್ ಬರ್ತಿದೆ. ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೂ ಈ ರೀತಿ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ಧಾರೆ.

ಸಂತೋಷ್ ಥಿಯೇಟರ್‌ನಲ್ಲಿ ‘ಜೈಲರ್’ ಆರ್ಭಟ ನಡೆದರೆ ಪಕ್ಕದಲ್ಲೇ ಇರುವ ನರ್ತಕಿಯಲ್ಲಿ ಹಿಂದಿಯ ‘ಗದರ್ -2’ ರಿಲೀಸ್ ಆಗುತ್ತಿದೆ. ಹೌದು ಈಗಾಗಲೇ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದ್ದು ನರ್ತಕಿಯಲ್ಲಿ ಬುಕ್ಕಿಂಗ್ ಓಪನ್ ಆಗಿದೆ. ಸ್ಯಾಂಡಲ್‌ವುಡ್‌ನ ಕೇಂದ್ರ ಭಾಗ ಗಾಂಧಿನಗರದ ಚಿತ್ರಮಂದಿರಗಳಲ್ಲೇ ಹಿಂದಿ, ತಮಿಳು ಸಿನಿಮಾಗಳು ರಿಲೀಸ್ ಆಗುತ್ತಿರುವುದು ಕನ್ನಡ ಸಿನಿರಸಿಕರಿಗೆ ಬೇಸರ ತಂದಿದೆ. ಸದ್ಯ ನರ್ತಕಿಯಲ್ಲಿ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ಪ್ರದರ್ಶನವಾಗುತ್ತಿದೆ. ಆ ಸಿನಿಮಾ ತೆಗೆದು ಮುಂದಿನ ವಾರ ‘ಗದರ್ -2’ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅನಿಲ್ ಶರ್ಮಾ ನಿರ್ದೇಶನದ ಐತಿಹಾಸಿಕ ‘ಗದರ್ -2’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಸನ್ನಿ ಡಿಯೋಲ್, ಅಮೀಷಾ ಪಟೇಲ್, ಉತ್ಕರ್ಷ್ ಶರ್ಮಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನು ನೆಲ್ಸನ್ ನಿರ್ದೇಶನದ ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!