• Fri. May 3rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲೂಕಿನಲ್ಲಿ ಬುಧವಾರ ನಡೆದ ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗಳಲ್ಲಿ ಎರಡು ಗ್ರಾಪಂಗಳಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಸತತ ಏಳೂವರೆ ವರ್ಷಗಳಿಂದ ದೊಡ್ಡವಗಲಮಾದಿ ಗ್ರಾಪಂನಲ್ಲಿ ಪ್ರಭಾವಿ ಮುಖಂಡರಾಗಿರುವ ವಿ.ಶೇಷು ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ೨೦೧೫ರಿಂದ ೨೦೨೦ರವರೆಗೆ ದೊಡ್ಡವಲಗಮಾದಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ್ದರು. ಈ ಸ್ಥಾನಕ್ಕೆ ವಿ.ಶೇಷು ಅವರ ತಾಯಿ ಗೋವಿಂದಮ್ಮ ಐದು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.

ನಂತರ ೨೦೨೧ರಲ್ಲಿ ಅಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಗೆ ಮೀಸಲಿರಿಸಿದ್ದರು. ಈ ಅವಧಿಯಲ್ಲಿ ವಿ.ಶೇಷು ಅವರ ಪತ್ನಿ ನಂದಿನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮೀಸಲಿರಿಸಿದ್ದರೂ ಸಹ ಈ ಭಾಗದ ಸದಸ್ಯರು ನಂದಿನಿಯವರನ್ನೇ ಮತ್ತೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ದೊಡ್ಡವಲಗಮಾದಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಸ್.ನಂದಿನಿ ಶೇಷು ೧೦ ಮತಗಳ ಪಡೆದು ೨ನೇ ಬಾರಿ ಜಯಶೀಲರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮುನಿರಾಜ್ ೫ ಮತಗಳು ಪಡೆದು ಸೋತಿದ್ದಾರೆ. ೧ ಮತ ಆಸಿಂಧುವಾಗಿದೆ.

ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಾವಿತ್ರಮ್ಮ ೯ ಮತಗಳ ಪಡೆದು ಜಯಶೀಲರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪದ್ಮಾವತಿ ೭ ಮತಗಳನ್ನು ಪಡೆದು ಸೋತಿದ್ದಾರೆ. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯಾ ಕಾರ‍್ಯನಿರ್ವಹಿಸಿದರು. ಪಿಡಿಒ ಸರಸ್ವತಿ ಹಾಜರಿದ್ದರು.

ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೇಳಿಕೊಳ್ಳಲಾಗುತ್ತಿದ್ದ ತಾಲೂಕಿನ ಅತಿ ಕಡಿಮೆ ಸದಸ್ಯರನ್ನು ಹೊಂದಿರುವ ಹುನ್ಕುಂದ ಗ್ರಾಪಂನಲ್ಲಿ ಈ ಬಾರಿ ಬಿಜೆಪಿಯ ಕಮಲ ಅರಳಿದೆ.

ಹುನ್ಕುಂದ ಗ್ರಾಪಂನಲ್ಲಿ ಕೇವಲ ೧೧ ಸದಸ್ಯರಿದ್ದಾರೆ. ಬಹುಮತಕ್ಕೆ ಕೇವಲ ೬ ಸದಸ್ಯರು ಮಾತ್ರ ಬೇಕಾಗಿದೆ. ಕಳೆದ ಮೊದಲನೇ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ರಂಜಿತ್‌ಕುಮಾರ್ ವಶದಲ್ಲಿದ್ದ ಹುನ್ಕುಂದ ಗ್ರಾಪಂನ್ನು ಇಲ್ಲಿನ ಮುಖಂಡರಾಗಿರುವ ಹುನ್ಕುಂದ ವೆಂಕಟೇಶ್ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಒಮ್ಮತದಿಂದ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹುನಕುಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕುರುಬರಹಳ್ಳಿ ಗ್ರಾಮದ ಆಶಾ ನರಸಿಂಹ ಅವರು ೬ ಮತಗಳ ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪದ್ಮ ೫ ಮತಗಳು ಪಡೆದು ಸೋತಿದ್ದಾರೆ.

ಉಪಾಧ್ಯಕ್ಷರಾಗಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ೬ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ರುಕ್ಮಿಣಿ ೫ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಚುನಾವಣಾಧಿಕಾರಿಯಾಗಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಸಿ.ವೆಂಕಟೇಶ್ ಕಾರ‍್ಯನಿರ್ವಹಿಸಿದರು. ಪಿಡಿಒ ಎಂ.ಚಂದ್ರಪ್ಪ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!