• Mon. May 6th, 2024

ವಕ್ಕಲೇರಿ ಗ್ರಾಮ ಪಂಚಾಯತಿ ಜೆ.ಡಿ.ಎಸ್ ವಶಕ್ಕೆ, ಕಾಂಗ್ರೆಸ್‌ಗೆ ತೀವ್ರ ಮುಖಭಂಗ, ರಾಜ್ಯಧಿಕಾರ ಚುಕ್ಕಾಣಿ ಹಿಡಿದ ಎರಡೇ ತಿಂಗಳಲ್ಲಿ ಜನರ ತಿರಸ್ಕಾರಕ್ಕೆ ಒಳಗಾದ ಕಾಂಗ್ರೆಸ್ : ಸಿ.ಎಂ.ಆರ್. ಶ್ರೀನಾಥ್ ವ್ಯಂಗ್ಯ

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ. ವೈ.ಎಂ. ರಾಧಿಕಾ ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಎಂ. ಆನಂದ್‌ಕುಮಾರ್ ಅತ್ಯಧಿಕ ಬಹುಮತದಿಂದ ವಿಜೇತರಾಗಿದ್ದಾರೆ.

ವಕ್ಕಲೇರಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿತ್ತು. ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಚಿನ್ನಮ್ಮ ಹಾಗೂ ಶ್ರೀನಿವಾಸಪ್ಪ ಮತ್ತು ಜೆ.ಡಿ.ಎಸ್.ಬೆಂಬಲಿತ ವೈ.ಎಂ.ರಾಧಿಕಾ ಮಂಜುನಾಥ್ ಹಾಗೂ ಎಂ.ಆನ0ದಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾಧಿಕಾರಿ ನಾಮಪತ್ರ ಪರಿಶೀಲಿಸಿ ಊರ್ಜಿತಗೊಂಡ ನಂತರ ೨೧ ಸದಸ್ಯರ ಗುಪ್ತ ಮತದಾನ ನಡೆಸಲಾಯಿತು. ಮತ ಎಣಿಕೆ ನಡೆದು ಅಧ್ಯಕ್ಷರಾಗಿ ವೈ.ಎಂ.ರಾಧಿಕಾ ಮ0ಜುನಾಥ್ ೧೮ ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಿನ್ನಮ್ಮ ವಿರುದ್ಧ ಅತ್ಯಧಿಕ ಬಹುಮತದಿಂದ ಜಯಶೀಲರಾಗಿದ್ದಾರೆ. ಮತ್ತು ಉಪಾಧ್ಯಕ್ಷರಾಗಿ ಎಂ.ಆನ0ದಕುಮಾರ್ ೧೫ ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸಪ್ಪ ವಿರುದ್ಧ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬೈರೇಗೌಡ ಅಧಿಕೃತವಾಗಿ ಘೋಷಿಸಿದರು.

ಚುನಾವಣೆ ನಂತರ ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಸಹ ಕಾಂಗ್ರೆಸ್‌ನ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ ಇಂದು ಮತದಾರರು ಜೆ.ಡಿ.ಎಸ್.ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಜೆ.ಡಿ.ಎಸ್ ಬೆಂಬಲಿಸಿ ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಧಿಕ್ಕರಿಸಿದ್ದಾರೆ.

ಮುಮದಿನ ದಿನಗಳಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭಾ ಚುನಾವಣೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಜೆ.ಡಿ.ಎಸ್.ಪಕ್ಷವನ್ನು ಜನ ಬೆಂಬಲಿಸುವ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ವಿಧಾನಸಭೆ ಒಳಗೊಂಡ0ತೆ ಎಲ್ಲಾ ಹಂತಗಳಲ್ಲಿ ಜೆ.ಡಿ.ಎಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕರಿಸಿದ ಎಲ್ಲಾ ಮುಖಂಡರಿಗೆ ಹಾಗೂ ಗೆಲುವು ಸಾಧಿಸಿದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ, ಸದಸ್ಯರಿಗೆ ಸಿಹಿ ತಿನ್ನಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕ್ಕಲೇರಿ ರಾಮು, ಸಿ.ಎಂ.ಆರ್.ಹರೀಶ್, ವೆಂಕಟೇಶಪ್ಪ, ಫಾಲಾಕ್ಷಗೌಡ, ಬಣಕನಹಳ್ಳಿ ನಟರಾಜ್, ಮಂಜುನಾಥ್, ಇಲಿಯಾಜ್‌ಖಾನ್, ಶೋಭಾ ಮಂಜುನಾಥ್, ಮಾರ್ಕೊಂಡಪ್ಪ, ಪಿ.ಡಿ.ಓ ಮಂಜುನಾಥ ಪ್ರಸಾದ್ ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!