• Wed. May 1st, 2024

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆ.ಎ. ಹೇಮಾವತಿ ಬಸವರಾಜು ಅಧ್ಯಕ್ಷರಾಗಿ, ಚಲಪತಿ.ಆರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

12 ಸದಸ್ಯರ ಬಲವಿರುವ ಪಂಚಾಯ್ತಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಎ.ಹೇಮಾವತಿ ಬಸವರಾಜು ಸ್ಪರ್ಧಿಸಿ , ಎದುರಾಳಿ ಜೆ.ಡಿ.ಎಸ್ ಬೆಂಬಲಿತ ಚಂದನ ವಿರುದ್ಧ ಏಳು ಮತಗಳನ್ನು ಪಡೆದು ಜಯಶೀಲರಾದರೆ , ಪರಿಶಿಷ್ಠ ಜಾತಿ (ಸಾಮಾನ್ಯ) ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್ ಬೆಂಬಲಿತ ಅಭ್ಯರ್ಥಿ ಆರ್.ಚಲಪತಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಸಿ.ವರಲಕ್ಷ್ಮಿ ಸ್ಪರ್ಧಿಸಿದ್ದು ಇಬ್ಬರೂ ತಲಾ ಆರು ಮತಗಳನ್ನು ಪಡೆದು ಸಮ ಬಲದ ಕಾರಣ ಲಾಟರಿ ಮೂಲಕ ಆರ್.ಚಲಪತಿಯವರಿಗೆ ಅದೃಷ್ಟ ಒಲಿದು ಗೆಲುವಿನ ನಗೆ ಬೀರಿದರು.

ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಹೇಮಾವತಿ ಪಂಚಾಯತಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ನೀಡುವಂತೆ ಕೋರಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಚಲಪತಿ ಮಾತನಾಡಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಾಗಿದ್ದು ಅವುಗಳ ನಿವಾರಣೆಗೆ ಹಾಗೂ ಪಂಚಾಯತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.

ಚುನಾವಣೆಗೆ ಗುರುತುಪಡಿಸಿದ ಅಧಿಕಾರಿ ಶಿಕ್ಷಣ ಇಲಾಖೆ ಬಿ.ಇ.ಒ ಎಸ್.ಎನ್.ಕನ್ನಯ್ಯ ಹಾಗೂ ಪಿ.ಡಿ.ಒ ರವೀಂದ್ರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. 

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜನಘಟ್ಟ ವೆಂಕಟಮುನಿಯಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸತೀಶ್ ಮೂರ್ತಿ, ಕೆ.ಸಿ.ಚೌಡಪ್ಪ,ಆಂಜನೇಯ ರೆಡ್ಡಿ,ವಿದ್ಯಾಕೇಶವ ಕುಮಾರ್,ಚಂದನ,ಕಲ್ಲೂರು ನಂಜಪ್ಪ,ಮಾಜಿ.ಜಿ.ಪಂ.ಸದಸ್ಯ ನಂಜುಂಡಪ್ಪ, ನಾರಾಯಣ ಸ್ವಾಮಿ,ಗೋಪಾಲಪ್ಪ,ಕೆ.ಎನ್.ಎನ್ ‌‌.ನಾರಾಯಣಸ್ವಾಮು, ಜನ್ನಘಟ್ಟ ವೆಂಕಟೇಶ್, ಕಲ್ಲೂರು ಮುನೇಗೌಡ,ಮುನಿಶಾಮರೆಡ್ಡಿ, ಜೆ.ಪಿ.ಪಿ.ಶ್ರೀನಿವಾಸ್ ಹಾಗೂ ಪಂಚಾಯತಿಯ ಸದಸ್ಯರುಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!