• Sat. May 11th, 2024

PLACE YOUR AD HERE AT LOWEST PRICE

ಮುಳಬಾಗಿಲು:ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ(ಡೈರಿಗೆ) ಸರಬರಾಜು ಮಾಡಿದರೆ ಒಕ್ಕೂಟ ಅಭಿವೃದ್ದಿಯಾಗಲಿದೆ ಎಂದು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು.

ನಗರದ ಆರ್‌ಎಂಸಿ ಮಾರುಕಟ್ಟೆಯಲ್ಲಿರುವ ಕೋಚಿಮುಲ್ ಶಿಭಿರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

1500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಪ್ರದೇಶವನ್ನು ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಅನುಧಾನವನ್ನು ಮೀಸಲಿಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು. ನಗರದಲ್ಲಿ ಹೈಟೆಕ್ ಸ್ಟೇಡಿಯಂ ನಿರ್ಮಿಸಲಾಗುವುದು.

ಸರ್ಕಾರದ ಯೋಜನೆಗಳು ಜನರಿಗೆ ತಿಳಿಯಲು ಎಲ್ಲಾ ಇಲಾಖೆಗಳ ಸಾಪ್ಟ್ವೇರ್ ಸಿದ್ದ ಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಬ್ಯಗಳ ಮಾಹಿತಿಯು ಜನರ ಮೊಬೈಲ್‌ಗೆ ತಲುಪಲಿದೆ ಎಂದರು.

ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಪ್ರಸ್ತುತ ಯಥೇಚ್ಚ ಹಾಲು ಹರಿದು ಬರುತ್ತಿರುವುದರಿಂದ ಸರಿಯಾದ ರೀತಿಯಲ್ಲಿ ಮಾರಾಟ ಆಗದೇ ಇರುವುದರಿಂದ ಪ್ರಸ್ತುತ 25 ಕೋಟಿ ರೂ.ಗಳು ನಷ್ಟದಲ್ಲಿದ್ದರೂ ಹಾಲು ಉತ್ಪಾದಕರಿಗೆ ಉತ್ತಮ ದರವನ್ನೇ ನೀಡುತ್ತಿದ್ದೇವೆ.

ರೈತರಿಗೆ ಅತೀ ಹೆಚ್ಚಿನ ಹಾಲಿನ ದರವನ್ನು ಕೊಡಬೇಕೆಂಬ ಆಸೆ ಇದೆ. ಆದರೆ ಹಾಲು ಬಹುಬೇಗ ಕೆಡುವಂತಹ ಪದಾರ್ಥ. ಅಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಯ ಮೇಲೆ ನಮ್ಮ ಆದಾಯ ಅವಲಂಬಿಸಿರುತ್ತೆ. ನಮ್ಮ ಒಕ್ಕೂಟದ ಆದಾಯದ ಮೇಲೆ ಸಹಕಾರ ಸಂಘದ ಆದಾಯ ಅವಲಂಬಿತವಾಗಿದೆ ಎಂದರು.

ಕೋಚಿಮುಲ್ ವ್ಯವಸ್ಥಾಪಕ ಗೋಪಾಲಮೂರ್ತಿ, ಮುಖಂಡರಾದ ಡಾ.ಸಿ.ಎನ್.ಪ್ರಕಾಶ್, ಶ್ಯಾಮೇಗೌಡ, ರಘುಪತಿರೆಡ್ಡಿ, ಕಲ್ಲುಪಲ್ಲಿ ಪ್ರಕಾಶ್, ಕವತನಹಳ್ಳಿ ಮುನಿಶಾಮಿಗೌಡ, ಉತ್ತನೂರು ಶ್ರೀನಿವಾಸ್, ಶಿಭಿರ ಕಛೇರಿ ವ್ಯವಸ್ಥಾಪಕ ಶ್ರೀನಿವಾಸಗೌಡ, ಉಪ ವ್ಯವಸ್ಥಾಪಕ ಕಿರಣ್, ವಿಸ್ತರಣಾಧಿಕಾರಿಗಳಾದ ಶ್ರೀರಾಮ್, ವೇಣು, ಶ್ರೀನಿವಾಸ್, ರವಿಕುಮಾರ್, ಚೇತನಾ, ಸೇರಿದಂತೆ ಎಲ್ಲಾ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!