• Sun. Apr 28th, 2024

PLACE YOUR AD HERE AT LOWEST PRICE

ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕೆ.ಜಿಗೆ 242 ರೂ.ವರೆಗೂ ಮಾರಾಟವಾಗುತ್ತಿದೆ. ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ, ದೇಶವು ಟೊಮೆಟೊ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ, ಭಾರತಕ್ಕೆ ಟೊಮೆಟೊ ಪೂರೈಸಲು ನೇಪಾಳ ಸಿದ್ದವಾಗಿದೆ.

ಆದರೆ, ಮಾರುಕಟ್ಟೆ ಮತ್ತು ಇತರ ಅಗತ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಬಯಸುತ್ತಿದೆ. ಭಾರತ ಕೂಡ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿದ್ದಾರೆ.

“ಈಗಾಗಲೇ ನೇಪಾಳದಿಂದ ಭಾರತಕ್ಕೆ ಟೊಮೆಟೊ ರಫ್ತಾಗುತ್ತಿದೆ. ಅದನ್ನು ಧೀರ್ಘಾವಧಿಗೆ ವಿಸ್ತರಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲು ನೇಪಾಳ ಇಚ್ಛಿಸಿದೆ. ಅದಕ್ಕಾಗಿ, ಭಾರತದ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲು ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ನೇಪಾಳ ಬೇಡಿಕೆ ಇಟ್ಟಿದೆ” ಎಂದು ಕೃಷಿ ಸಚಿವಾಲಯದ ವಕ್ತಾರ ಶಬ್ನಮ್ ಶಿವಕೋಟಿ ಹೇಳಿದ್ದಾರೆ.

“ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಾದ ಕಠ್ಮಂಡು, ಲಲಿತ್‌ಪುರ್ ಮತ್ತು ಭಕ್ತಾಪುರದಲ್ಲಿ ಹೇರಳವಾಗಿ ಟೊಮೆಟೊ ಬೆಳೆಯಲಾಗುತ್ತದೆ. ಆ ಟೊಮೆಟೊಗಳಲ್ಲಿ ಬಹುಪಾಲನ್ನು ಭಾರತಕ್ಕೆ ರಫ್ತು ಮಾಡಲು ನೇಪಾಳ ಸಿದ್ದವಾಗಿದೆ” ಎಂದು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಅಭಿವೃದ್ಧಿ ಮಂಡಳಿಯ ಉಪ ನಿರ್ದೇಶಕಿ ಬಿನಯಾ ಶ್ರೇಷ್ಠಾ ತಿಳಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ, ನೇಪಾಳದ ರೈತರು ತಾವು ಬೆಳೆದ ಟೊಮೆಟೊಗಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದರು. ಕಠ್ಮಂಡುವಿನಲ್ಲಿ ಟೊಮೆಟೊ ಕೆ.ಜಿಗೆ 10 ರೂ. ಬೆಲೆಯೂ ಇರಲಿಲ್ಲ. ಬೆಲೆ ಇಳಿಕೆಯಿಂದಾಗಿ ಸುಮಾರು 60,000 ರಿಂದ 70,000 ಕೆಜಿ ಟೊಮೆಟೊಗಳನ್ನು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಬಳಿಯ ರಸ್ತೆಗಳಲ್ಲಿ ಸುರಿದಿದ್ದರು ಎಂದು ಹೇಳಲಾಗಿದೆ.

ಆ ನಂತರದಲ್ಲಿ, ನೇಪಾಳದ ಕೆಲವು ವ್ಯಾಪಾರಿಗಳು ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ಟೊಮೆಟೊ ರಫ್ತು ಮಾಡಲು ಆರಂಭಿಸಿದ್ದರು. ಆ ಬಳಿಕ, ಕಠ್ಮಂಡುವಿನಲ್ಲಿ ಟೊಮೆಟೊ ಬೆಲೆ ನಾಲ್ಕು ಪಟ್ಟು ಹೆಚ್ಚಾಯಿತು ಎಂದು ಅಲ್ಲಿನ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

“ನಾವು ಬೆಳೆದ ಟೊಮೆಟೊಗಳನ್ನು ಅನಧಿಕೃತವಾಗಿ ಭಾರತಕ್ಕೆ ರಫ್ತು ಮಾಡಲು ಆರಂಭಿಸಿದ ಬಳಿಕ ಕಠ್ಮಂಡುವಿನಲ್ಲಿ ಕೆ.ಜಿಗೆ 150 ರೂ. ಸಿಗುತ್ತಿದೆ. ಕಳೆದ ತಿಂಗಳು ಸುಮಾರು 70,000 ಕೆ.ಜಿ ಟೊಮೆಟೊವನ್ನು ಭಾರತಕ್ಕೆ ಅಕ್ರಮವಾಗಿ ರಫ್ತು ಮಾಡಲಾಗಿದೆ” ಎಂದು ನೇಪಾಳದ ಲಲಿತ್‌ಪುರ್ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯುವ ರೈತ ಭದ್ರಿ ಎಂಬವರು ತಿಳಿಸಿದ್ದಾಗಿ ವರದಿಯಾಗಿದೆ.

“ಜುಲೈನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನೇಪಾಳದ ಕೃಷಿ ಸಚಿವ ಬೆದುರಾಮ್ ಭೂಶಾಲ್ ಅವರು ಭಾರತದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಟೊಮೆಟೊ ಮತ್ತು ಇತರ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಹಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಟೊಮೆಟೊ, ಬಟಾಣಿ ಮತ್ತು ಹಸಿರು ಮೆಣಸುಗಳನ್ನು ರಫ್ತು ಮಾಡಲು ಅಗತ್ಯ ಮಾರುಕಟ್ಟೆ ಸೌಲಭ್ಯ ಒದಗಿಸುವಂತೆ ಭಾರತವವನ್ನು ಕೇಳಿದ್ದಾರೆ” ಎಂದು ಕೃಷಿ ಸಚಿವಾಲಯದ ವಕ್ತಾರ ಶಿವಕೋಟಿ ಹೇಳಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!