• Mon. Apr 29th, 2024

PLACE YOUR AD HERE AT LOWEST PRICE

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯ ಸ್ಥಾಪನೆಯನ್ನು ಈ ವರ್ಷವೂ ಮಾಡುತ್ತೇವೆ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನ ಪಾಕಿಸ್ತಾನ ಇಲ್ಲವೇ ಆಫ್ಘಾನಿಸ್ತಾನದಲ್ಲಿ ಇಲ್ಲ, ಅದು ಭಾರತದಲ್ಲಿಯೇ ಇದೆ. ನಮ್ಮದೇ ನೆಲದಲ್ಲಿ ನಮ್ಮ ದೇವರ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದರೆ ಸಹಿಸಿಕೊಳ್ಳುವುದಾದರೂ ಹೇಗೆ..? ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಸರ್ಕಾರವಿರಲಿ, ಮುಸ್ಲಿಮರೇ ಆಗಲಿ ಯಾರು ಸಹ ವಿರೋಧ ಮಾಡದೆ ಸಹಕಾರ ನೀಡಬೇಕು. ಅದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರಿಗೆ ಅವಕಾಶ ನೀಡಿಲ್ಲವೇ, ಹಾಗಿದ್ದರೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಯಾಕೆ ವಿರೋಧ ಎಂದು ಪ್ರಶ್ನಿಸಿದರು.

ಮಾತು ಮುಂದುವರಿಸಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 40,000 ಮಹಿಳೆಯರು ಕಾಣೆಯಾಗಿದ್ದು 45,000 ಅಪ್ರಾಪ್ತರು ಗರ್ಭಿಣಿಯಾಗಿದ್ದಾರೆ. ಇದೊಂದು ಭಯಾನಕ ಸ್ಥಿತಿಯಾಗಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸೂಕ್ತ ತನಿಖೆ ತನಿಖೆ ನಡೆಸಬೇಕು. ಇಂತಹ ಕೃತ್ಯಗಳ ತಡೆಗೆ ವಿಶೇಷ ಪಡೆ ರಚಿಸಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಮಹಿಳೆಯರ ನಾಪತ್ತೆಯಿಂದ ಲವ್ ಜಿಹಾದ್ ಉದ್ದೇಶದ ಆತಂಕ ಇದ್ದು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಒಂದರಲ್ಲೇ ಕಳೆದ 11 ವರ್ಷಗಳಲ್ಲಿ 434 ಮಹಿಳೆಯರು ಕಾಣೆಯಾಗಿದ್ದು ಸುಮಾರು 452 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳ ಬಗ್ಗೆ ಲಘುವಾಗಿ ಪರಿಗಣಿಸುವುದು ಯಾವುದೇ ಪಕ್ಷದ ಸರ್ಕಾರಕ್ಕೂ ಒಳ್ಳೆಯದಲ್ಲ ಎಂದರು.

ದಕ್ಷಿಣ ಕನ್ನಡದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸೌಜನ್ಯ ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ತನಿಖೆಯಲ್ಲಿ ಲೋಪ, ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಯತ್ನಗಳು ಸಾಕಷ್ಟು ನಡೆದಿವೆ ಎಂಬುದು ಗೋಚರಿಸುತ್ತಿದೆ. ಈ ಬಗ್ಗೆ ಸರಕಾರ ಸಮಗ್ರ ತನಿಖೆಗೆ ಮುಂದಾಗಬೇಕಾಗಿದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಮಾಸಾಂತ್ಯಕ್ಕೆ ಹುಬ್ಬಳ್ಳಿಯಿಂದ ಉತ್ತರ ಕರ್ನಾಟಕದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗುತ್ತಿದ್ದು, ಸೌಜನ್ಯ ಅವರ ತಾಯಿ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರ ಮೇಲೆ ದೌರ್ಜನ್ಯ ಲವ್ ಜಿಹಾದ್, ಕಿಡ್ನಾಪ್, ನಾಪತ್ತೆಯಂತಹ ಪ್ರಕರಣಗಳ ಬಗ್ಗೆ ಸಂಘಟಿತ ಹೋರಾಟದ ಅಗತ್ಯವಿದ್ದು, ಈ ಬಗ್ಗೆ ನಾನೇ ಖುದ್ದಾಗಿ ಹಿಂದೂಪರ ಸಂಘಟನೆಗಳೆಲ್ಲವನ್ನು ಭೇಟಿಯಾಗಿ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡುತ್ತೇನೆ. ಧರ್ಮ, ಜಾತಿ ರಹಿತ ಹೋರಾಟ ಆಗಬೇಕಾಗಿದೆ ಎಂದು ಹೇಳಿದರು.

ಲವ್ ಜಿಹಾದ್ ಕೇವಲ ಒಂದು ರಾಜ್ಯ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಾದ್ಯಂತ ಆವರಿಸಿದ್ದು, ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ರಚನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದರು. ಈ ವೇಳೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!