• Sun. Apr 28th, 2024

PLACE YOUR AD HERE AT LOWEST PRICE

‘ಕಿಂಗ್ ಫಿಷರ್ ಬಿಯರ್‌’ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ವಿಚಾರ ಬಯಲಾಗಿದ್ದು, ಈ ಹಿನ್ನೆಲೆಯಲ್ಲಿ 25 ಕೋಟಿ ರೂ. ಮೌಲ್ಯದ ಬಾಕ್ಸ್ ಬಿಯರ್ ಅನ್ನು ಮೈಸೂರಿನ ಅಬಕಾರಿ ಇಲಾಖೆ ಜಪ್ತಿ ಮಾಡಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿ ಜುಲೈ 15ರಂದು ತಯಾರಿಸಿದ್ದ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢಪಟ್ಟಿದೆ.

ಬಿಯರ್‌ನಲ್ಲಿರುವ ಸೆಡಿಮೆಂಟ್ ಎಂಬ ಅಂಶ ದೇಹಕ್ಕೆ ಅಪಾಯಕಾರಿ ಎಂಬುದು ಲ್ಯಾಬ್‌ನಲ್ಲಿ ನಡೆಸಲಾದ ತಪಾಸಣೆಯಲ್ಲಿ ಪತ್ತೆಯಾಗಿದ್ದು, ‘ಮಾನವರ ಸೇವನೆಗೆ ಯೋಗ್ಯವಲ್ಲ’ ಎಂದು ವರದಿ ನೀಡಿದೆ.

  • ಜು.17ರಂದು ತಪಾಸಣೆ; ಆಗಸ್ಟ್ 2ರಂದುಮಾನವರ ಸೇವನೆಗೆ ಯೋಗ್ಯವಲ್ಲಎಂದು ವರದಿ
  • ₹25 ಕೋಟಿ ಮೌಲ್ಯದ 78,678 ಬಾಕ್ಸ್ ಬಿಯರ್ ವಶಕ್ಕೆಪಡೆದ ಅಬಕಾರಿ ಇಲಾಖೆ

ವಿಷಕಾರಿ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಗ್ರಾಹಕರಿಗೆ ವಿತರಣೆ ಮಾಡದಂತೆ ಅಬಕಾರಿ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಜೊತೆಗೆ ₹25 ಕೋಟಿ ಮೌಲ್ಯದ 78,678 ಬಿಯರ್ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದಾರೆ.

ವಿಷಕಾರಿ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಕಿಂಗ್​ ಫಿಶರ್​ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿಂಗ್ ಫಿಶರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಶರ್ ಅಲ್ಟ್ರಾ ಲ್ಯಾಗರ್ ಬಿಯರ್​ನಲ್ಲಿ ವಿಶಕಾರಿ ಅಂಶ ಪತ್ತೆಯಾಗಿದೆ. 7C ಹಾಗು 7E ಬ್ಯಾಚ್​ನಲ್ಲಿ ಎಲ್ಲಾ ಬಿಯರ್‌ಗಳನ್ನು ಜಪ್ತಿ ಮಾಡಿದ್ದು, ಕೆಮಿಕಲ್​ ಪರೀಕ್ಷೆಯಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ. ಅಷ್ಟೂ ಪ್ರಮಾಣದ ಬಿಯರ್​​ ಬಾಟೆಲ್​ ನಾಶ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ರವಿಶಂಕರ್ ತಿಳಿಸಿದ್ದಾರೆ.

ಜುಲೈ 17ರಂದು ತಪಾಸಣೆ, ಆಗಸ್ಟ್​ 2ರಂದು ವರದಿ

ಜುಲೈ 17ರಂದು ಬಿಯರ್​ನ ಸ್ಯಾಂಪಲ್ ಪಡೆದು ತಪಾಸಣೆಗಾಗಿ ರವಾನೆ ಮಾಡಲಾಗಿತ್ತು. ಆ.2 ರಂದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿದ್ದು, ‘ಅನ್ ಫಿಟ್ ಫಾರ್ ಹ್ಯೂಮನ್ ಕನ್ಸಂಪ್ಷನ್’ ಅಂದರೆ ಮಾನವರ ಸೇವನೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿತ್ತು. ಮಾನವರು ಸೇವಿಸಲು ಯೋಗ್ಯವಲ್ಲ ಅನ್ನೋದು ಬೆಂಗಳೂರಿನ ಲ್ಯಾಬ್​ನಿಂದ ಬಂದಿದೆ. ನಾವು ಮೈಸೂರು ಡಿಸಿ ಹಾಗು ಅಬಕಾರಿ ಡಿಸಿ ಇಬ್ಬರಿಗೂ ಪತ್ರ ಬರೆದು ಮುಂದಿನ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಮೈಸೂರು ಗ್ರಾಮಾಂತರ ಉಪ ಅಬಕಾರಿ ಆಯುಕ್ತ ಎ. ರವಿಶಂಕರ್​ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗೆ 78,678 ಬಿಯರ್​ ಪೂರೈಕೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಎಲ್ಲ ಬಾಟಲ್​ಗಳ ಮಾರಾಟ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣಕ್ಕಾಗಿ ಯುನೈಟೆಡ್ ಬ್ರಿವರಿಸ್ ಕಂಪನಿ ವಿರುದ್ಧ ಅಬಕಾರಿ ಕಾಯ್ದೆಯಡಿ ಎಫ್​ಐಆರ್ ದಾಖಲು ಮಾಡಲಾಗಿದೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಇಲಾಖಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ.

ಬೆಂಗಳೂರಿಗೆ 11 ಸಾವಿರ ಬಿಯರ್​ ಬಾಟಲ್​ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಆಗಿದೆ. ಆದರೆ ಅದರಲ್ಲಿ ಎಷ್ಟು ಮಾರಾಟ ಆಗಿದೆ ಅನ್ನೋ ಲೆಕ್ಕವನ್ನು ಅಧಿಕಾರಿಗಳು ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.

ಕಂಪನಿ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರಿನ ಯುನೈಟೆಡ್ ಬ್ರೆವರೀಸ್ ಕಂಪನಿ, ‘ಜುಲೈ 15 ರಂದು ತಯಾರಿಸಿದ್ದ ಕಿಂಗ್‌ಫಿಶರ್ ಅಲ್ಟ್ರಾ ಬಿಯರ್ ಬಾಟಲಿಗಳಲ್ಲಿ ಲೋಪ ಹೊಂದಿದೆ. ಈ ಬಗ್ಗೆ ನಾವು ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಮತ್ತು ಅವರ ತನಿಖೆಗೆ ಸಹಕರಿಸುತ್ತಿದ್ದೇವೆ. ಇದು ಕಿಂಗ್‌ಫಿಷರ್ ಅಲ್ಟ್ರಾದ ಒಂದೇ ಬ್ಯಾಚ್‌ನಲ್ಲಿ ಮಾತ್ರ ಕಂಡು ಬಂದಿದೆ. ಕಿಂಗ್‌ಫಿಷರ್ ಸ್ಟ್ರಾಂಗ್‌ನಲ್ಲಿ ಅಲ್ಲ’ ಎಂದು ಹೇಳಿದೆ.

‘ನಾವು ಕಿಂಗ್‌ಫಿಷರ್ ಅಲ್ಟ್ರಾ ಬ್ಯಾಚ್‌ಅನ್ನು ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದೇವೆ. ಆದ್ದರಿಂದ ಇದು ಆರೋಗ್ಯದ ಮೇಲೆ ಯಾವುದೇ ಅಪಾಯಗಳನ್ನು ಉಂಟುಮಾಡುವುದಿಲ್ಲ ಎಂದು ಪರೀಕ್ಷೆಯಲ್ಲಿ ದೃಢಪಡಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದು ನಮ್ಮ‌ ಕರ್ತವ್ಯ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!