• Sun. Apr 28th, 2024

PLACE YOUR AD HERE AT LOWEST PRICE

ಚಿಕ್ಕಬಳ್ಳಾಪುರ:ಸರಿ ಸುಮಾರು ಒಂದು ದಶಕದಿಂದ ನಿರ್ಮಾಣವಾಗುತ್ತಿದ್ದ ಚಿಕ್ಕಬಳ್ಳಾಪುರ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇಂದು ಉದ್ಘಾಟನಾ ಭಾಗ್ಯ ಸಿಕ್ಕಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ನಿರಂತರ ಹೋರಾಟದ ಒತ್ತಡದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವು ಲೋಕಾರ್ಪಣೆಗೊಂಡಿದೆ.

ಸುಮಾರು 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಶುರುವಾದ ಈ ಕಾಲೇಜು ಕಟ್ಟಡ ಕಾಮಗಾರಿಯ ವೆಚ್ಚದಲ್ಲಿ ಹಲವು ಬದಲಾವಣೆಗಳು ಕಂಡು, ಹೆಚ್ಚುವರಿ ಕಾಮಗಾರಿಗಳೊಂದಿಗೆ ಪೂರ್ಣ ವೆಚ್ಚ 6 ಕೋಟಿ 70 ಲಕ್ಷ ರೂಪಾಯಿಗೆ ಮುಟ್ಟಿದೆ.

ವಿದ್ಯಾರ್ಥಿಗಳ ನಿರಂತರ ಅಳಲು, ಹೋರಾಟಗಾರರ ಧ್ವನಿ, ನ್ಯಾಯಾಧೀಶರ ಖಡಕ್ ಎಚ್ಚರಿಕೆ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ 8 ವರ್ಷಗಳ ಬಳಿಕ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಆಗಸ್ಟ್‌ 18ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ತರಗತಿಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿದ್ದಾರೆ. ಈಗಲಾದರೂ ಸೇವೆಗೆ ಲಭ್ಯವಾಗುತ್ತಿರುವಿಕೆಯು ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ.

ಕಳೆದ 2015ನೇ ಸಾಲಿನಲ್ಲಿ ಅಣಕನೂರು ಗ್ರಾಮಕ್ಕೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿ-7ರ ಬೈಪಾಸ್ ಮೇಲುಸೇತುವೆ ಸಮೀಪದ 2 ಏಕರೆ ಜಾಗದಲ್ಲಿ 10 ಕೋಟಿ ರೂ.ವೆಚ್ಚದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2017 ರೊಳಗೆ ಕಾಮಗಾರಿ ಉದ್ಘಾಟನೆ ಯಾಗಬೇಕಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳು, ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಅಸಡ್ಡೆ ಭಾವನೆ, ಅನುದಾನದ ಕೊರತೆ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಕೆಲಸವು ಕುಂಟುತ್ತ ಸಾಗಿ ಬಂದಿದೆ.

ಉದ್ಘಾಟನೆಗೆ ಸಂತಸ.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉದ್ಘಾಟನೆಗೆ ಸಂತಸ ವ್ಯಕ್ತವಾಗಿದೆ. ಇಲ್ಲಿನ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಬಿಎ, ಮತ್ತೊಂದೆಡೆ ನಗರದ ವಾಪಸಂದ್ರದ ಸಿಟಿಜನ್ ಕ್ಲಬ್‌ನ ಕಟ್ಟಡದಲ್ಲಿ ಬಿ.ಕಾಂ ಮತ್ತು ಬಿಬಿಎಂ ತರಗತಿಗಳನ್ನು ನಡೆಸುವಿಕೆಯಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ತೊಂದರೆ ಅನುಭವಿಸಬೇಕಾಗಿತ್ತು. ಇನ್ನು ಶೌಚಗೃಹ ಸಮಸ್ಯೆ, ಸ್ಥಳದ ಅಭಾವ ಸೇರಿದಂತೆ ಹಲವು ಸಮಸ್ಯೆಗಳಿಗೆ ಹೈರಾಣರಾಗಬೇಕಾಗಿದ್ದು ,ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದರು.

ಲೆಕ್ಕ ಇಲ್ಲದ ಹೋರಾಟ.

ಇಲ್ಲಿನ ಕಾಲೇಜು ಉದ್ಘಾಟನೆಗೆ ಒತ್ತಾಯಿಸಿದ ನಡೆಸಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಧರಣಿ, ಪ್ರತಿಭಟನಾ ಮೆರವಣಿಗೆ, ಪತ್ರ ಚಳವಳಿ, ತರಗತಿ ಬಹಿಷ್ಕಾರದ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಕೊನೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬೀರಪ್ಪ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಉತ್ಸವ, ಅದ್ಧೂರಿ ಕಾರ್ಯಕ್ರಮಗಳಿಗೆ ಅನುದಾನದ ಬರವಿಲ್ಲ, ಬಡ ವಿದ್ಯಾರ್ಥಿಗಳಿಗೆ ಮಾತ್ರ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಎಂಬುದಾಗಿ ಅವ್ಯವಸ್ಥೆಗೆ ಕಿಡಿಕಾರಿದ್ದರು.

ಒಂದು ಕಾಲೇಜಿನ ಕಟ್ಟಡವನ್ನು ನಿರ್ಮಿಸಿ, ಉದ್ಘಾಟಿಸಲು ಇಷ್ಟು ವರ್ಷ ವಿಳಂಬವಾಗಿದ್ದೇ ದುರದೃಷ್ಟಕರ. ಇದು ಸ್ಥಳೀಯ ಜನಪ್ರತಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ ‘ ಧೋರಣೆಗೆ ನಿದರ್ಶನ, ಒಟ್ಟಾರೆಯಗಿ ಇಂದು ಉದ್ಘಾಟನೆ ಆಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!