• Sat. Apr 27th, 2024

PLACE YOUR AD HERE AT LOWEST PRICE

ದಾವಣಗೆರೆ:ಸುಮಾರು 20 ದೇಶಗಳ ಧ್ವಜಗಳು, 25 ಕ್ಕೂ ಹೆಚ್ಚು ಪಕ್ಷಿಗಳು, 25 ಕ್ಕೂ ಅಧಿಕ ತರಕಾರಿಗಳು 30 ಕ್ಕೂ ಅಧಿಕ ಪ್ರಾಣಿಗಳು 18 ಹೆಸರಾಂತ ಪರ್ವತಗಳು, ಪ್ರಾಣಿಗಳು ಹಾಗೂ ವರ್ಣಮಾಲೆಗಳನ್ನ ಗುರುತಿಸುವಲ್ಲಿ ದಾವಣಗೆರೆಯ 1 ವರ್ಷ 3 ತಿಂಗಳ ಕಂದ ನಿಪುಣನಾಗಿದ್ದಾನೆ. ಸದ್ಯ ಈ ಕಾರಣಕ್ಕೆ ದೇಶ ಮೆಚ್ಚುವ ಸಾಧನೆ ಮಾಡಿದ್ದಾನೆ.

ಈಗ ತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ. ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಗುಡ್ಡಣ್ಣ ಗೀತಾ ದಂಪತಿಯ ಮೊಮ್ಮಗ ಮನ್ವಿತ್ ಸಿ.ಎಸ್ ಈ ಅಪ್ರತಿಮ ಸಾಧನೆ ಮಾಡಿದ್ದಾನೆ.

ಮನ್ವಿತ್ ತಾಯಿ ಸೌಮ್ಯಶ್ರೀ ಜಿ. ಹಾಗೂ ತಂದೆ ಚೇತನ್ ಎಂ. ಈ ದಂಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿಯರ್. ಮನೆಯಲ್ಲಿದ್ದ ಸಂದರ್ಭದಲ್ಲಿ ತನ್ನ ಮಗ ಮನ್ವಿತ್‍ಗೆ ಸಾಮನ್ಯ ಜ್ಞಾನದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇನ್ನೂ ಮಾತು ಬರುವ ಸಂದರ್ಭದಲ್ಲೇ ಮನ್ವಿತ್ ಅಪಾರ ಜ್ಞಾಪಕ ಶಕ್ತಿ ಹೊಂದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾನೆ.

ಈತನ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಗುರುತಿಸಿದ ಈತನ ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಶಿಫಾರಸ್ಸು ಮಾಡಿದ್ದರು. ಇದೀಗ ಮನ್ವಿತ್ ಈ ಸಾಧನೆಯನ್ನು ರೆಕಾರ್ಡ್ ಎಂದು ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಈ ಪುಟ್ಟ ಪೋರನ ಸಾಧನೆ ಮೆಚ್ಚಿ ಶಾಸಕ ಬಸವರಾಜು ವಿ. ಶಿವಗಂಗಾ ಸೇರಿದಂತೆ ಗ್ರಾಮದ ಮುಖಂಡರು ಸನ್ಮಾನಿಸಿ ಅಭಿನಂಧನೆ ಸಲ್ಲಿಸಿ ಶುಭಕೋರಿದ್ದಾರೆ. ಆಡುವ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ ಈ ಬಾಲಕ ಮುಂದೆಯೇ ಹೆಚ್ಚು ಸಾಧನೆ ಮಾಡಲಿ ಎನ್ನುವುದು ಎಲ್ಲರ ಆಶಯವಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!