• Mon. Apr 29th, 2024

ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು”- ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ನಿರ್ಲಕ್ಷ್ಯ:ಸಂಸದರು ಹಾಗೂ ಸಾರ್ವಜನಿಕರ ಅಕ್ರೋಶ

PLACE YOUR AD HERE AT LOWEST PRICE

ಜಿಲ್ಲಾಡಳಿತದ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು” ಸಾಮೂಹಿಕವಾಗಿ ವಾಚನ ಕಾರ್ಯಕ್ರಮ :

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ “ಸಂವಿಧಾನ ಪೀಠಿಕೆ ಓದು” ಜಾಗತಿಕ ವಾಚನಾ ಕಾರ್ಯಕ್ರಮ ಹಾಗೂ “ಸಮಾನತೆಗಾಗಿ ಪ್ರಜಾಪ್ರಭುತ್ವ” ಜನ ದ್ವನಿ ಜಾಥಾ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ ಅತ್ಯಂತ ಗೌರವ ಹಾಗೂ ಸರಳತೆಯಿಂದ ನೆರವೇರಿತು.

ಸೆ.೧೫ ರಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಲಾಗಿದ್ದ “ಸಮಾನತೆಗಾಗಿ ಪ್ರಜಾಪ್ರಭುತ್ವ” ಮತ್ತು “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮ ಶುಕ್ರವಾರ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ ೮-೩೦ಕ್ಕೆ ಬಂಗಾರಪೇಟೆ ವೃತ್ತದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಕೊತ್ತೂರು ಮಂಜುನಾಥ್, ಅನಿಲ್‌ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಬಸಂತಪ್ಪ, ಸೇರಿದಂತೆ ಹಲವು ಗಣ್ಯರಿಂದ ಮಾಲಾರ್ಪಣೆ ಮಾಡಿದ ನಂತರ ನಚಿಕೇತ ನಿಲಯಕ್ಕೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ನಚಿಕೇತ ನಿಲಯದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ತರುವಾಯ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮ ನೆರವೇರಿತು. ಸರಿಯಾಗಿ ೧೦ ಗಂಟೆಗೆ ಸರಿಯಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂವಿಧಾನ ಪೀಠಿಕೆ ವಾಚನ ಮಾಡಿದ್ದು ಬೃಹತ್ ಎಲೆಕ್ಟ್ರಾನಿಕ್ ಸ್ಕ್ರೀನ್ ಮೇಲೆ ಪ್ರದರ್ಶನಗೊಂಡಾಗ ಮೈದಾನದಲ್ಲಿ ನೆರೆದಿದ್ದ ಎಲ್ಲರೂ ತಮ್ಮ ತಮ್ಮ ಬಲಗೈ ಮುಂದಕ್ಕೆ ಚಾಚಿ ಸಂವಿಧಾನ ಪೀಠಿಕೆ ಪ್ರಮಾಣ ವಾಚನಕ್ಕೆ ದ್ವನಿಗೂಡಿಸಿದರು.

ಸಂವಿಧಾನ ಪೀಠಿಕೆ ವಾಚನಕ್ಕೂ ಮುನ್ನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ರಿಂದ ಗಣ್ಯರಿಗೆ ಸ್ವಾಗತ ಕೋರಲಾಯಿತು. ಮತ್ತಿಕುಂಟೆ ಕೃಷ್ಣ ತಂಡದಿಂದ ನಾಡಗೀತೆ ನೆರವೇರಿತು. ಕೃಷಿ ಇಲಾಖೆಯ ರೇಣುಕಾರವರು ನಿರೂಪಿಸಿ ವಂದಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಗಣ್ಯರಿಂದ ಭಾಷಣಗಳಿಗೆ ಅವಕಾಶ ನೀಡಲಿಲ್ಲವಾದರೂ, ಶಾಸಕ ಕೊತ್ತೂರು ಮಂಜುನಾಥ್ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದ ಕೊನೆಗೆ ವೇದಿಕೆಯಿಂದ ಇಳಿಯುವ ಮುಂಚಿತವಾಗಿ ಮೈಕ್ ಪಡೆದು ನೆರೆದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಈ ದೇಶದ ಮುಂದಿನ ಪ್ರಜೆಗಳಾದ ನೀವುಗಳು ಸಂವಿಧಾನವನ್ನು ಮೈಗೂಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಸಮಾನತೆಯ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾತೃಗಳಾಗಿ ಎಂದು ಕರೆ ನೀಡಿ, ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತಂದಿದ್ದ ಎಲ್ಲಾ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚೆನ್ನಬಸಪ್ಪ, ವಾರ್ತಾಧಿಕಾರಿ ಚೇತನ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಾನಂದ್ ಕೆಂಪರಾಜು, ಜಾಗೃತಿ ಸಮಿತಿ ಸದಸ್ಯರಾದ ಡಿಪಿಎಸ್ ಮುನಿರಾಜು, ವರದೇನಹಳ್ಳಿ ವೆಂಕಟೇಶ್, ಬೆಳಮಾರನಹಳ್ಳಿ ಆನಂದ್, ಹಿರಿಯ ದಲಿತ ಮುಖಂಡರಾದ ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ದಲಿತ್ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಅಂಬರೀಶ್, ಯುವಶಕ್ತಿ ಸುಬ್ಬು, ನಾಗನಾಳ ಮುನಿಯಪ್ಪ, ಅಪ್ಪಿ ನಾರಾಯಣಸ್ವಾಮಿ ಇದ್ದರು.

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಅಕ್ರೋಶ:

ಸರ್ಕಾರಿ ಸಂಸ್ಥೆಗಳಿಗೆ ರಾಷ್ಟೀಯ ಹಬ್ಬಗಳ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೊಸದೇನಲ್ಲಾ. ಅದಕ್ಕಾಗಿ ಸರ್ಕಾರ ಹಲವು ದಿನಗಳ ಮುಂಚಿತವಾಗಿಯೇ ಕಾರ್ಯಕ್ರಮಕ್ಕೆ ಪೂರಕವಾದ ಸೂಚನೆಗಳನ್ನೂ ನೀಡಲಾಗುತ್ತದೆ. ಆನಂತರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇದಕ್ಕೆ ಜಿಲ್ಲಾಡಳಿತಗಳು ಬದ್ದವಾಗಿರುತ್ತದೆ. ಇತಿಹಾಸ ಹೀಗಿದ್ದರೂ, ಸರ್ಕಾರ ಸೆ.೧೫ರಂದು ಆಚರಿಸಲು ಹೊರಟ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಜಿಲ್ಲಾಡಳಿತದ ಅವಕೃಪೆಗೆ ಒಳಗಾಗಿದ್ದು ಮಾತ್ರ ವಿಪರ್ಯಾಸ.

ಸೆ.೧೫ ರಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಲಾಗಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಹಾಗೂ ಸಮಾನತೆಗಾಗಿ ಪ್ರಜಾಪ್ರಭುತ್ವ ಜನ ದ್ವನಿ ಜಾಥಾ ಕಾರ್ಯಕ್ರಮವನ್ನು ನಡೆಸಿಕೊಟ್ಟ ಮಾದರಿ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಟೀಕೆಗೆ ಗ್ರಾಸವಾಗಿತ್ತಲ್ಲದೆ ಸಾರ್ವಜನಿಕ ವಲಯದ ಬೇಸರಕ್ಕೆ ಕಾರಣವಾಯಿತು.

ಈ ಕಾರ್ಯಕ್ರಮಕ್ಕೆ ಸಂಸದರು ಹಾಗೂ ಶಾಸಕರು ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆ ಸದಸ್ಯರ ಶಿಷ್ಟಚಾರ ಪಾಲನೆಯಲ್ಲೂ ಲೋಪವಾಗಿರುವ ಬಗ್ಗೆ ಹಾಗೂ ದಲಿತ ಸಂಘಟನೆಗಳು, ಜನಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳಿಗೆ ಆಹ್ವಾನ ನೀಡಿಲ್ಲ ಎಂದು ಜಿಲ್ಲಾಡಳಿತ ನಿರ್ಲಕ್ಷ್ಯ ದೋರಣೆಯನ್ನು ಸಂಸದ ಮುನಿಸ್ವಾಮಿ ಕಟುವಾಗಿ ಖಂಡಿಸಿದರು.

ಶಾಲಾ ಮಕ್ಕಳನ್ನು ಸುಡು ಬಿಸಿಲಿನಲ್ಲಿ ಜಾಥಾ ನಡೆಸಿದ ನಂತರ ಜೂನಿಯರ್ ಕಾಲೇಜು ಮೈದಾನದ ವೇದಿಕೆ ಕಾರ್ಯಕ್ರಮಕ್ಕೆ ನೆಲದಲ್ಲಿ ಒಂದು ಗಂಟೆಕಾಲ ಕುಳ್ಳಿರಿಸಲಾಗಿತ್ತು. ಆದರೆ, ಮಕ್ಕಳಿಗೆ ಕನಿಷ್ಠ ಕುಡಿಯುವ ನೀರಾಗಲೀ ಅಥವಾ ಲಘು ಉಪಹಾರವನ್ನು ನೀಡುವ ಮನಸ್ಸು ಮಾಡಲಿಲ್ಲ ಎಂಬುದು ಸಹ ಚರ್ಚೆಗೆ ಗ್ರಾಸವಾಯಿತು.

ನಗರದ ಬಂಗಾರಪೇಟೆ ವೃತದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಗಣ್ಯರಿಗೆ ಮಾಲಾರ್ಪಣೆ ಮಾಡಿದ ನಂತರ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೊತೆಯಲ್ಲಿ ಕಾಲುನಡಿಗೆ ಜಾಥಾ ನಡೆಸಲಾಯಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಒಂದೇ ಒಂದು ಕಲಾ ತಂಡ ಇರಲಿಲ್ಲ, ಹಾಡುಗಾರರು ಇರಲಿಲ್ಲ. ಬದಲಾಗಿ ಪೊಲೀಸ್ ವಾಹನದಲ್ಲಿ ಕುಳಿತು ಬ್ಯಾಂಡ್ ಭಾರಿಸಿಕೊಂಡು ಜಾಥಾವನ್ನು ನಡೆಸಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!