• Fri. May 10th, 2024

PLACE YOUR AD HERE AT LOWEST PRICE

ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿ ವರ್ಷ ಬಹಳ ಅದ್ಧೂರಿಯಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಾ ಬರ್ತಿದೆ. ಈ ಬಾರಿ ದೂರದ ದುಬೈನಲ್ಲಿ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ದುಬೈ ಫ್ಲೈಟ್ ಏರುತ್ತಿದ್ದಾರೆ.

ಈ ವರ್ಷವೂ ನಮ್ಮ ಸೌತ್ ಚಿತ್ರರಂಗದ ಹಲವು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿವೆ. ಆದರೆ ಯಾರಿಗೆ ಯಾವ್ಯಾವ ಪ್ರಶಸ್ತಿ ಲಭಿಸುತ್ತದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಇಂದು (ಸೆಪ್ಟೆಂಬರ್ 15) ಮತ್ತು ನಾಳೆ (ಸೆಪ್ಟೆಂಬರ್ 16) ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. SIIMA – 2023ರ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ನಿನ್ನೆ(ಸೆಪ್ಟೆಂಬರ್ 14) ಸುದ್ದಿಗೋಷ್ಠಿ ಕೂಡ ನಡೀತು.

ಸುದ್ದಿಗೋಷ್ಠಿಯಲ್ಲಿ ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು, ಶ್ರೀಲೀಲಾ, ಪ್ರಣೀತಾ ಸುಭಾಷ್, ಜೆವಿ ಪ್ರಕಾಶ್ ಕುಮಾರ್ ಮುಂತಾದವರು ಭಾಗವಹಿಸಿದ್ದರು. ಈ ವರ್ಷ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲು ತಯಾರಕರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಶೋ ಯಶಸ್ವಿಯಾಗುತ್ತದೆ ಎಂದು ಅತಿಥಿಗಳು ಹೇಳಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!