• Sun. May 5th, 2024

PLACE YOUR AD HERE AT LOWEST PRICE

 ಪೂರ್ವ ತಯಾರಿ ಇಲ್ಲದೆ ಆಯೋಜಿಸಿದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಕಳೆಗುಂದಿದೆ-ಸoಸದ ಮುನಿಸ್ವಾಮಿ

ಕೋಲಾರ,ಸೆ.೧೫ : ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಿಲ್ಲಾಧಿಕಾರಿ ಅಕ್ರಮ್ ಪಾಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ರವರ ನಿರ್ಲಕ್ಷ್ಯ ದಿಂದ ಕಳೆಗುಂದುವ0ತಾಗಿದೆ ಎಂದು ಸಂಸದ ಎಸ್. ಮುನಿಸ್ವಾಮಿ ತೀವ್ರ ಅಸಮದಾನ ಹಾಗೂ ಖಂಡನೆ ವ್ಯಕ್ತಪಡಿಸಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾಪಂಚಾತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ “ಸಂವಿಧಾನ ಪೀಠಿಕೆ ಓದು” ಹಾಗೂ “ಸಮಾನತೆಗಾಗಿ ಪ್ರಜಾಪ್ರಭುತ್ವ” ಜನದ್ವನಿ ಜಾಥಾ ಕಾರ್ಯಕ್ರಮ ಮುಕ್ತಾಯದ ನಂತರ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು. ಸರ್ಕಾರದ ಈ ರೀತಿಯ ಸಾಮೂಹಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಜಿಲ್ಲೆಯ ಹಿರಿಯ ದಲಿತ ಚಳುವಳಿಯ ಮುಖಂಡರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಮಹಿಳಾ ಸಂಘಟನೆಗಳ ಸಭೆ ಕರೆದು ಪೂರ್ವ ತಯಾರಿ ನಡೆಸಬೇಕಿತ್ತು. ಆದರೆ, ಇದ್ಯಾವುದೂ ಮಾಡದ ಕಾರಣ ಇಂದು ಕಾರ್ಯಕ್ರಮದಲ್ಲಿ ಉತ್ಸಾಹ ಇಲ್ಲವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಸಮಾಜಕಲ್ಯಾಣ ಇಲಾಖೆಯ ಜಂಟಿನಿರ್ಧೇಶಕರ ಈ ನಡೆ ಖಂಡನೀಯವಾಗಿದೆ ಎಂದರು.

ಕೋಲಾರ ಜಿಲ್ಲೆ ಚಳುವಳಿಗಳ ತವರೂರು ಎಂದು ಪ್ರಖ್ಯಾತಿಹೊಂದಿದೆ. ಆದರೆ, ಎಲ್ಲರನ್ನೂ ಒಳಗೊಳ್ಳುವ ಮೂಲಕ ಹಬ್ಬದ ವಾತಾವರಣದಲ್ಲಿ ನಡೆಯಬೇಕಾದ ಈ ಕಾರ್ಯಕ್ರಮ ಕಾಟಾಚಾರಕ್ಕೆ ನಡೆದಿದೆ ಎಂದು ದೂರಿದ ಸಂಸದರು. ಮುಂಬರುವ ನವೆಂಬರ್ ತಿಂಗಳ ೨೬ರಂದು ನಡೆಯುವ ಸಂವಿಧಾನ ಸಮರ್ಪಣಾ ದಿನಾಚರಣೆಗಾದರೂ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ಮುಖಂಡರು. ಜನಪರ ಸಂಘಟನೆಗಳ ಮುಖಂಡರ ಸಭೆ ಕರೆದು ಕಾರ್ಯಕ್ರಮ ರೂಪಿಸುವ ಮೂಲಕ ಅರ್ಥಪೂರ್ಣಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಾಗೃತಿ ಸಮಿತಿ ಸದಸ್ಯ ಡಿಪಿಎಸ್ ಮುನಿರಾಜು, ಬೆಳಮಾರನಹಳ್ಳಿ ಆನಂದ್, ದಲಿತ್ ನಾರಾಯಣಸ್ವಾಮಿ, ಯುವಶಕ್ತಿ ಸುಬ್ಬು, ನಾಗನಾಳ ಮುನಿಯಪ್ಪ, ಹೆಚ್.ಎನ್.ಮೂರ್ತಿ, ಅಪ್ಪಿ ನಾರಾಯಣಸ್ವಾಮಿ ,ದಿಂಬಚಾಮನಹಳ್ಳಿ ಅಂಬರೀಶ್ ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!