• Fri. Oct 11th, 2024

PLACE YOUR AD HERE AT LOWEST PRICE

ಬೆಂಗಳೂರು:ಸುತ ಗಣೇಶನ ಹಬ್ಬಕ್ಕೆ ದೇವಾಲಯಗಳು ಭರ್ಜರಿಯಾಗಿ ರೆಡಿ ಆಗಿದ್ದು, ಬ್ಯೂಟಿಫುಲ್ ಆಗಿ ವಿಭಿನ್ನ ಪರಿಕಲ್ಪನೆಯಲ್ಲಿ ಭಕ್ತಾದಿಗಳನ್ನು ಸೆಳೆಯುತ್ತಿವೆ. ಒಂದಕ್ಕಿಂತ ಒಂದು ಡಿಫರೆಂಟ್ ಡಿಫರೆಂಟ್ ಆಗಿ ಕಂಗೊಳಿಸುತ್ತಿದೆ. ಅದರಲ್ಲೂ ಜೆ.ಪಿ. ನಗರದ ಗಣಪನ ಮಂದಿರ ಅಂತೂ ನೋಟು ಮತ್ತು ನಾಣ್ಯಗಳಿಂದ ಶೃಂಗಾರಗೊಂಡು ಜಗಮಗಿಸುತ್ತಿತ್ತು.

10, 20, 50, ನೂರು ಹಾಗೂ 500 ರೂಪಾಯಿ ನೋಟುಗಳ ಹಾರ ಒಂದು ಕಡೆ ಆದ್ರೆ, ಅದರ ಜೊತೆಗೆ ನಾಣ್ಯಗಳ ಮೂಲಕ ಅಲಂಕಾರ ಮಾಡಲಾಗಿದ್ದು, 10, 20ರ ಕಾಯಿನ್‌ಗಳಂತೂ ಕಣ್ಣು ಕುಕ್ಕುವ ಹಾಗಿದ್ದವು. ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ವೈಭವದ ಗಣೇಶೋತ್ಸವ ನಡೆದಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತ ಬಾಂಧವರು ಸೇರಿದ್ದರು.

ಸತ್ಯ ಗಣಪತಿ ಶಿರಾಡಿ ಸಾಯಿಬಾಬಾ ಟ್ರಸ್ಟ್‌ನಿಂದ ಬರೊಬ್ಬರಿ ಎರಡೂವರೆ ಕೋಟಿ ರೂಪಾಯಿ ಹಣ ಬಳಸಿ ನೋಟು-ನಾಣ್ಯದ ಅಲಂಕಾರ ಮಾಡಲಾಗಿದೆ. 58 ಲಕ್ಷ ಮೌಲ್ಯದ 5, 10, 20 ನಾಣ್ಯಗಳು ಹಾಗೂ10, 20, 50, 100, 200, 500, 2000 ನೋಟುಗಳ ಸರಮಾಲೆಯಿಂದ ದೇಗುಲಕ್ಕೆ ಡೆಕೊರೇಷನ್ ಮಾಡಲಾಗಿದೆ. ಇದು ಎಲ್ಲರ ಗಮನ ಸೆಳೆಯುತ್ತಿದ್ದು, ಈ ವೈಭವ ಕಾಣ್ತುಂಬಿಕೊಳ್ಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.

ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್‌, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ದೇವಿಯನ್ನು ಧರೆಗೆ ತಂದಂತಿದೆ. 120ಕ್ಕೂ ಅಧಿಕ ಜನರ ತಂಡದಿಂದ ಸತತ ಹದಿನೈದು ದಿನ ವ್ಯಯಿಸಿ ನೋಟುಗಳ ಅಲಾಂಕರ ಮಾಡಲಾಗಿದೆ.

ಅಲ್ಲದೆ ಈ ಸಲ ಚಂದ್ರಯಾನ -3 ಸಕ್ಸಸ್‌ಲ್ಲಿ ಇರುವ ನಮ್ಮ ದೇಹದ ಖುಷಿ ಡಬಲ್ ಮಾಡಲು, ಜೈ ಕರ್ನಾಟಕ, ಜೈ ಜವಾನ್‌ ಜೈ ಕಿಸಾನ್‌, ಮೇರಾ ಭಾರತ್‌ ಮಹಾನ್‌ ಥೀಮ್‌ ಅಳವಡಿಸಲಾಗಿದೆ. ಇದೆಲ್ಲ ಭಕ್ತರು ಕೊಟ್ಟ ಹಣ ಹಾಗೇ ಟ್ರಸ್ಟ್ ಇಂದ ಹಾಕಿರುವ ಹಣ ಅಂತಾ ಟ್ರಸ್ಟಿ ರಾಮಮೋಹನ್ ರಾಜ್ ಮಾಹಿತಿ ನೀಡಿದರು.

ಜೊತೆಗೆ ಸೆಕ್ಯೂರಿಟಿಗೆ 15 ಜನಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, 20ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಸುರಕ್ಷತೆಗೆ ಅಳವಡಿಕೆ ಮಾಡಲಾಗಿತ್ತು. ಇಂದು ಬೆಳಿಗ್ಗೆಯಿಂದ ದೇಗುಲದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 5 ಗಂಟೆಯಿಂದ ವಿವಿಧ ಪೂಜೆ ಮಾಡಲಾಗಿದೆ.

ಅಲಂಕಾರ ನೋಡಲು ಬರುವ ಭಕ್ತರ ಮೇಲೆ ಸಿಸಿಟಿವಿ ಕಣ್ಗಾವಲು ಇದೆ. ಬ್ಯಾರಿಕೇಡ್ ಹಾಕಲಾಗಿದ್ದು, ಅಲಂಕಾರ ಮಾಡಿದ ನೋಟು ಭಕ್ತರು ಮುಟ್ಟದಂತೆ ವ್ಯವಸ್ಥೆ ‌ಮಾಡಲಾಗಿದೆ. ಒಟ್ಟಾರೆ ಈ ಬಾರಿ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಇಲ್ಲಿಯ ಪರಿಕಲ್ಪನೆಯೇ ಜನರ ಸೆಳೆಯುತ್ತಿದೆ. ಗಣೇಶ ಚುತುರ್ಥಿಗೆ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲಾಗುತ್ತದೆ.

ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನ ಕೋಟಿ ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳನ್ನು ದೇವಸ್ಥಾನವನ್ನು ಆಲಂಕರಿಸಿದ್ದು, ಇದು ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿ ಬಾರಿ ವಿಶೇಷ ರೀತಿಯಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶ ದೇವಸ್ಥನದ ಆಡಳಿತ ಮಂಡಳಿ ಹೊಂದಿದ್ದು, ಈ ಬಾರಿ ವಿಭಿನ್ನವಾದ ಆಲಂಕಾರವನ್ನು ಮಾಡಿದ್ದಾರೆ. ಈ ಬಾರಿ ಗಣೇಶ ಚತುರ್ಥಿಯ ಪ್ರಯುಕ್ತ ಸುಮಾರು 56 ಲಕ್ಷ ಮೌಲ್ಯದ 5,10 ಮತ್ತು 20 ರೂಪಾಯಿ ನಾಣ್ಯಗಳನ್ನು ಬಳಸಿ, 10,20,50,100,200 ಮತ್ತು 500 ರೂಪಾಯಿಗಳ ನೋಟ್‌ಗಳನ್ನು ಬಳಸಿಕೊಂಡು ಹೂವಿನಂತೆ ಮಾಲೆಗಳನ್ನು ಮಾಡುವ ಮೂಲಕ ಆಲಂಕಾರ ಮಾಡಲಾಗಿದೆ.

ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು 56 ಲಕ್ಷ ಮೌಲ್ಯದ ನಾಣ್ಯಗಳ ಮೂಲಕ ಆಲಂಕಾರ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ 150 ಜನ ಈ ಆಲಂಕಾರ ಮಾಡಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ಇದೇ ವೇಳೆ, ನಾಣ್ಯಗಳಿಂದಲೇ ಗಣೇಶನ ಪೋಟೋ, ಜೈ ಕರ್ನಾಟಕ, ನೇಷನ್‌ ಫರ್ಸ್ಟ್‌, ವಿಕ್ರಮ್‌ ಲ್ಯಾಂಡರ್‌, ಚಂದ್ರಯಾನದ ಚಿತ್ರಗಳು ಮತ್ತು ಜೈ ಜವಾನ್‌ ಜೈ ಕಿಸಾನ್‌ ಚಿತ್ರಗಳನ್ನು ನಿರ್ಮಿಸಲಾಗಿದೆ.

ಈ ಆಲಂಕಾರ ನೋಡಿ ಭಕ್ತರು ಬಹಳ ಸಂತಸಗೊಂಡಿದ್ದಾರೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಟ್ರಸ್ಟ್‌ನ ಟ್ರಸ್ಟಿಗಳಾದ ರಾಮ್‌ ಮೋಹನ್‌ ರಾಜು ತಿಳಿಸಿದರು. ಈ ಆಲಂಕಾರ ಇನ್ನೂ ಒಂದು ವಾರಗಳ ಕಾಲ ಇರಲಿದ್ದು, ಭಕ್ತಾದಿಗಳು ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಟಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!