• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ,ಸೆ.೨೦ : ಶ್ರೀ ರೇಣುಕಾ ಪೀಠ ಹಾಗೂ ಶ್ರೀ ನಾರಾಯಣಗುರು ಮಠದ ಆರ್ಯ ಈಡಿಗ ಮಹಾಸಂಸ್ಥಾನಕ್ಕೆ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿಯವರೇ ಪೀಠಾಧ್ಯಕ್ಷರು, ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಘೋಷಿಸಿದೆ ಎಂದು ಕೋಲಾರ ಜಿಲ್ಲಾ ಆರ್ಯ ಈಡಿಗ ಜನಾಂಗದ ಕೌಶಲ್ಯಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಾಸ್ತಿ ಟಿ.ಸಿ.ರಮೇಶ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಾಸ್ತಿ ಟಿ.ಸಿ.ರಮೇಶ್, ತೆರವಾದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರ ಸ್ಥಾನಕ್ಕೆ ಕೇರಳದ ಶಿವಗಿರಿಯಲ್ಲಿ ನಾರಾಯಣಗುರು ದೀಕ್ಷೆಪಡೆದಿದ್ದಂತಹ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿಯವರನ್ನು ಸಮಸ್ತ ಈಡಿಗ ಸಮಾಜದ ೨೫ ಪಂಗಡಗಳು ಒಮ್ಮತದಿಂದ ಪೀಠಾಧಿಪತಿಗಳಾಗಿ ಸ್ವೀಕರಿಸಲಾಗಿದೆ ಎಂದರು.

ಈ ಮದ್ಯೆ ಶ್ರೀ ಪ್ರಣವಾನಂದ ಸ್ವಾಮೀಜಿ ಸ್ವಯಂ ಘೋಷಿತ ಸ್ವಾಮೀಜಿಯಾಗಿ ತಿರುಗುತ್ತಿದ್ದು ಈಡಿಗ ಸಮುದಾಯದದಲ್ಲಿ ಒಡಕುಗಳನ್ನು ಮೂಡಿಸುತ್ತಿರುವುದು ರಾಜಕೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವುದು ಮತ್ತು ರಾಜ್ಯ ಹಾಗೂ ಜಿಲ್ಲಾ ಸಂಘಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದ ಹಾಗೆ ಆಧಾರರಹಿತ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರವುದು ಕಂಡು ಬಂದಿದ್ದು. ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ಸೆ.೨೦ರಂದು ರಾಜ್ಯ ಕೇಂದ್ರ ಸಮಿತಿಯಿಂದ ರಾಜ್ಯಾಧ್ಯಕ್ಷ ಡಾ.ಎಂ.ತಿಮ್ಮೇಗೌಡ ನೇತೃತ್ವದಲ್ಲಿ ಎಲ್ಲಾ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ, ಸ್ವಯಂಘೋಷಿತ ನಕಲಿ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಯವರಿಂದ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದ್ದು, ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಲಾಯಿತು.

ಸುದ್ಧಿಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಟಿ.ಶಿವಕುಮಾರ್, ಜಾಲಪ್ಪ ರಾಜೇಂದ್ರ, ಪೋತರಾಜ್, ರವೀಂದ್ರಕುಮಾರ್ ಡಿ,ಬೋರೊಳೆ, ಎಸ್.ಹೆಚ್.ಪದ್ಮರವೀಂದ್ರ, ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಮೋಹನ್ ದಾಸ್, ಖಜಾಂಚಿ ಹರಿಚರಣ್, ಜಂಟಿ ಕಾರ್ಯದರ್ಶಿ ಜಿ.ಓ.ಕೃಷ್ಣ(ಬಾಬು), ಆರ್.ಪಿ.ಪ್ರಕಾಶ್, ನಾಗರಾಜ್, ಎ. ಸಂಘಟನಾ ಕಾರ್ಯದರ್ಶಿ ಕೆ.ಎಸ್.ದುಶ್ಯಂತ್ , ಬಿ.ರಾಜಪ್ಪ, ಮಂಜುನಾಥ್ ಎನ್.ಹಾನಗಲ್, ಮಹದೇವ್ ಎಲ್.ಈಳಿಗೇರ್, ಬಸವರಾಜ ಭೀಮಪ್ಪ ಈಳಿಗೇರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲಾಧ್ಯಕ್ಷರುಗಳು ಹಾಜರಿದ್ದರು ಎಂದು ಕೋಲಾರ ಜಿಲ್ಲಾಧ್ಯಕ್ಷ ಮಾಸ್ತಿ ಟಿ.ಸಿ.ರಮೇಶ್ ತಿಳಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!