• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಫ್:ಶಾಸಕರಾದ ಡಾ. ರೂಪಕಲಾ ಎಂ ಶಶಿಧರ್ ಕೆಜಿಎಫ್ ನ ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಪ್ರಮುಖವಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಖಾಂತರ ಕೆ.ಜಿ.ಎಫ್. ನಗರದಲ್ಲಿ 400 ಮನೆಗಳ ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು. ವಸತಿ ರಹಿತ ಬಡವರಿಗೆ ಮನೆ ನಿರ್ಮಾಣ ಮಾಡಿ ನೀಡುವ ಯೋಜನೆ ಇಷ್ಟು ವಿಳಂಬವಾದರೆ ಹೇಗೆ ಎಂದು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಎ.ಇ.ಇ. ಶ್ರೀ ಚರಣ್ ರಾಜ್ ಮಾತನಾಡಿ, ಮನೆ ನಿರ್ಮಾಣ ವಿಳಂಬವಾಗಲು ಮುಖ್ಯ ಕಾರಣ ಫಲಾನುಭವಿಯ ವಂತಿಗೆ ಪಾವತಿಸದೇ ಇರುವುದರಿಂದ ನಿರ್ಮಾಣ ಕಾರ್ಯ ತಡವಾಗಿದೆ, ಹಾಗೂ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಪಾಲಿನ ಅನುದಾನ ಬಿಡುಗಡೆಯಾಗಲಿದ್ದು ಆ ಹಣದಿಂದ ಪೂರ್ಣಗೊಳಿಸಲು ಸಾದ್ಯವಿಲ್ಲ ಎಂದು ತಿಳಸಿದರು.

ಒಂದು ಮನೆ ನಿರ್ಮಾಣಕ್ಕೆ ಒಟ್ಟು ರೂ.7.35 ವೆಚ್ಚ ತಗುಲಲಿದ್ದು ಇದರಲ್ಲಿ ಸರ್ಕಾರಗಳ ವಂತಿಗೆ ಹೊರತುಪಡಿಸಿ ಸುಮಾರು ರೂ.3.50 ಲಕ್ಷದಿಂದ ರೂ.4.00 ಲಕ್ಷ ಫಲಾನುಭಿಯ ವಂತಿಗೆ ಇರುತ್ತದೆ ಎಂದು ತಿಳಿಸಿದರು.

ಕೆ.ಜಿ.ಎಫ್. ನಗರದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರು ಕೂಲಿ ಕಾರ್ಮಿಕರಿದ್ದು ಅವರು ಪಾವತಿಸಬೇಕಾಗಿರುವ ಹಣವನ್ನು ಭರಿಸುವುದು ಅವರಿಂದ ಸಾಧ್ಯವಿರುವುದಿಲ್ಲ, ಪಾವತಿಸಬೇಕಾದ ಮೊತ್ತವನ್ನು ಸರಿದೂಗಿಸಲು ಮಾರ್ಗ ಕಂಡುಹಿಡಿಯಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ಇಲಾಖೆಯಿಂದ ಎಸ್.ಸಿ.ಪಿ. ಯೋಜನೆಯಡಿ ಮತ್ತು ಕಾರ್ಮಿಕ ಇಲಾಖೆ ಮುಖಾಂತರ ಸುಮಾರು 3.00 ಲಕ್ಷದವರೆಗೆ ಹಣ ಒದಗಿಸಲು ಅವಕಾಶ ಇದ್ದು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆದಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಎ.ಇ.ಇ. ತಿಳಿಸಿದರು.

ಫಲಾನುಭವಿಗೆ ಅಧಿಕ ಹೊರೆ ಆಗದಂತೆ ಮನೆ ನಿರ್ಮಾಣ ಕೆಲಸ ಪೂರ್ಣಗೊಳಿಸಲು ಎಲ್ಲ ರೀತಿ ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು, ಹಾಗೂ ಮತ್ತೊಮ್ಮೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಐದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆಪೌರಾಯುಕ್ತ ಪವನ್ ಕುಮಾರ್  ಕೊಳಗೇರಿ ಅಭಿವೃದ್ಧಿ ಮಂಡಳಿಯ ಚಂದ್ರಕುಮಾರ್ ಮೊದಲಾದವರಿದ್ದರು.

Today Dated:20-09-2023  Hon’ble  MLA Smt. Roopakala M Shashidhar held meeting with Slum Development board Officials at CMC meeting hall KGF.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!