• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸೋಮವಾರದಿಂದ ಪಟ್ಟಣದ ಜೂನಿಯರ್ ಕಾಲೇಜ್ ಬಳಿ ಇರುವ ಓವರ್ ಟ್ಯಾಂಕ್ ಗೆ ಎರಗೋಳ ಡ್ಯಾಂ ನೀರು ಸರಬರಾಜು ಮಾಡಲಾಗುವುದು. ಮೊದಲಿಗೆ ದೇಶಿಹಳ್ಳಿ ಮುನಿಯಮ್ಮ ಲೇಔಟ್, ಅಮರಾವತಿ, ಫಲತಿಮ್ಮನಹಳ್ಳಿ, ಕೆರೆಕೋಡಿಗೆ ಸರಬರಾಜು ಮಾಡಲಾಗುವುದು ಎಂದು  ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.

ಅವರು ಪಟ್ಟಣದ ಪುರಸಭೆ ಆವಾರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರಕ್ಕೆ ಯರಗೋಳ್ ಡ್ಯಾಂ ನ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂಬುದು ಸರ್ಕಾರದ ಮಹತ್ವದ ಯೋಜನೆಯಾಗಿತ್ತು ಅದಕ್ಕೆ ಈಗ ಕಾಲ ಕೂಡಿಬಂದಿದೆ. ಸೋಮವಾರದಿಂದ ನೀರು ಸರಬರಾಜು ಮಾಡುತ್ತೇವೆ ಎಂದರು.

ದೇಶೀಹಳ್ಳಿ, ಅಮರಾವತಿ ಬಡಾವಣೆ, ಕೆ.ಜಿ.ಎಫ್ ರಸ್ತೆಯ ಅಕ್ಕ-ಪಕ್ಕದ ಮನೆಗಳು, ಮುನಿಯಮ್ಮ ಲೇಔಟ್, ರಾಜೆಂದ್ರ ಬಡಾವಣೆ, ಪಲವತಿಮ್ಮನಹಳ್ಳಿ, ರೈಲ್ವೆ ಕ್ವಾರ್ಟ್ರಸ್, ಕುಪ್ಪಸ್ವಾಮಿ ಮೂದಲಿಯಾರ್ ಬಡಾವಣೆ ಮತ್ತು ಕೆರೆಕೋಡಿ ಬಡಾವಣೆ ತನಕ ಸೋಮವಾರದಿಂದ ಪ್ರಾಯೋಗಿಕವಾಗಿ ಯರಗೋಳ್ ನೀರು ಸರಬರಾಜು ಮಾಡಲಿಕ್ಕೆ ಚಾಲನೆ ನೀಡುತ್ತಿದ್ದೇವೆ.

ಯೋಜನೆ ಪೂರ್ಣಗೊಳ್ಳಲು ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ,, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ನಗರಾಭಿವೃದ್ಧಿ ಸಚಿವರಾದ ಸುರೇಶ್ ರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ಮೊದಲ 15 ದಿನಗಳ ಕಾಲ ಈ ನೀರನ್ನು ಕುಡಿಯಲು ಬಳಸಬೇಡಿ ಎಂದ ಅವರು ಯರಗೋಳ ಡ್ಯಾಂ ನೀರು ಪಟ್ಟಣದ ಜನತೆಗೆ ಸಿಗಲು ಪುರಸಭೆಯ ಮುಖ್ಯಾಧಿಕಾರಿ ಮೀನಾಕ್ಷಿ  ಮತ್ತು ಅಧಿಕಾರಿ ವರ್ಗ ಶ್ರಮಿಸಿದೆ ಎಂದರು.

ಎರಡನೇ ಹಂತವಾಗಿ ದೊಡ್ಡಪಾರ್ಕ್ ನಲ್ಲಿರುವಂತ ಎರಡು ಟ್ಯಾಂಕ್, ಭೂವಿನಗರದಲ್ಲಿರುವ ಟ್ಯಾಂಕ್ ಸೇರಿ ಈ ಮೂರು ಟ್ಯಾಂಕ್‌ಗಳನ್ನ ಭರ್ತಿ ಮಾಡಿಕೊಂಡು ನಗರದವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಸಂಪ್‌ಗಳನ್ನು ತುಂಬಿಸಿಕೊಂಡು ಸಂಪ್‌ಗಳ ಮೂಲಕ ನೀರನ್ನ ಸರಬರಾಜು ಮಾಡುತ್ತೇವೆ ಎಂದರು.

ಮನೆಗಳಿಗೆ ಪುರಸಭೆಯಿಂದ ಪ್ರಾಯೋಗಿಕವಾಗಿ ಸರಬರಾಜು ಮಾಡುವಂತ ನೀರು ಆಗಿರುವುದರಿಂದ ದಯಮಾಡಿ ಯಾರು ಕೂಡ ಹದಿನೈದು ದಿನಗಳಕಾಲ ಕುಡಿಯಲಿಕ್ಕೆ ಮತ್ತು ಅಡಿಗೆಗೆ ಬಳಸಬಾರದು ಎಂದು ತಿಳಿಸಿದರು.

ಡ್ಯಾಂ ನೀರು ಆಗಿರೋದರಿಂದ ನಾವು ಶುದ್ಧಿಕರಣ ಮಾಡಿದ್ದರು ಕೂಡ, ನೀರು ಪ್ರಾಯೋಗಿಕ  ಹಂತವಾಗಿ ಸರಬರಾಜು ಮಾಡುತ್ತಿರುವುದರಿಂದ, ನಾವು ಹೇಳುವ ತನಕ ಯಾರು ಸಹ ಕುಡಿಯುವುದಕ್ಕೆ ಮತ್ತು ಅಡಿಗೆಗೆ ಬಳಸಬೇಡಿ ಎಂದರು.

ಈ ಬಗ್ಗೆ ಕರಪತ್ರ ಮತ್ತು ಆಟೋ ಆನೌನ್ಸ್ ಮಾಡಿಸುತ್ತೇವೆ. ಯಾವತ್ತಿನಿಂದ ಕುಡಿಯಲು ಮತ್ತು ಅಡಿಗೆಗೆ ಯೋಗ್ಯ ಎಂಬುದನ್ನ ನಾವೇ ಸಮಸ್ತ ನಾಗರೀಕರಿಗೆ ತಿಳಿಸುತ್ತೇವೆ. ಹದಿನೈದು ದಿವಸಗಳ ಕಾಲ ಕುಡಿಯಲು ಬಳಸಬೇಡಿ ಎಂದು ಮನವಿಯನ್ನ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಸದಸ್ಯರಾದ ಆರೋಕ್ಯರಾಜನ್, ಕುಂಬಾರಪಾಳ್ಯ ಮಂಜುನಾಥ್, ರಾಕೇಶ್ ಗೌಡ, ಸಾಧಿಕ್, ಶಫಿ ಗಂಗಮ್ಮ, ಪೊನ್ನಿ ರಮೇಶ್, ಬಾಬುಲಾಲ್, ಪ್ರಶಾಂತ್ ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!