• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಜಾತಿ ನಿಂದನೆ ಮತ್ತು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ದೊಡ್ಡವಲಗಮಾದಿ ದಲಿತ ಅಮರೆಶ್ ರನ್ನು ಭೇಟಿ ಮಾಡಿ ಸಾಂತ್ವನ ಹೇಳದೆ ನಿರ್ಲಕ್ಷ್ಯತೆ ತೋರಿರುವ ಜಿಲ್ಲಾಧಿಕಾರಿಗಳನ್ನು ಈ ಕೂಡಲೆ ಕೋಲಾರ ಜಿಲ್ಲೆಯಿಂದ ವರ್ಗಾಯಿಸಬೇಕು. ಇಲ್ಲವಾದರೆ ಯರಗೋಳ ಡ್ಯಾಂ ಉದ್ಘಾಟನೆಗೆ ಬರುವ ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕಲಾಗುವುದು ಎಂದು ಕದಸಂಸ ರಾಜ್ಯ ಮುಖಂಡ ಸೂಲಿಕುಂಟೆ ರಮೇಶ್ ಎಚ್ಚರಿಸಿದರು.

ಸಾರ್ವಜನಿಕರ ಆಸ್ಪತ್ರೆ ಬಳಿ ಹೇಳಿಕೆ ನೀಡಿದ ಅವರು ತಾಲ್ಲೂಕಿನ ದೊಡ್ಡವಲಗಮಾದಿಯಲ್ಲಿ ಕೂಲಿ ಕಾಸು ಕೇಳಿದನೆಂಬ ಕಾರಣಕ್ಕೆ ದಲಿತನನ್ನು ಮರಕ್ಕೆ ಕಟ್ಟಿಹಾಕಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಮಂಗಳವಾರವೆ ದೂರು ದಾಖಲಾಗಿದ್ದರೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಸಂತ್ರಸ್ತನಿಗೆ ಧೈರ್ಯ ಹೇಳಲು ಬಂದಿಲ್ಲ. ಈ ನಿರ್ಲಕ್ಷ್ಯದ ಕಾರಣ ಜಿಲ್ಲಾಧಿಕಾರಿ ಅಕ್ರಂ ಪಾಷಾರನ್ನು ಜಿಲ್ಲೆಯಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಇಂದು ಯರಗೋಳ ಡ್ಯಾಂ ವೀಕ್ಷಣೆಗೆ ಬಂದಿದ್ದ ಜಿಲ್ಲಾಧಿಕಾರಿಗಳು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲೇ ಹಾದು ಹೋಗಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ನಾವು ನೆನ್ನೆಯೇ  ಆರೋಪ ಮಾಡಿದ್ದು ಅದು ದಿನಪತ್ರಿಕೆಗಳಲ್ಲಿಯೂ ಸುದ್ದಿಯಾಗಿದೆ.

ಮಾರನಣಾಂತಿಕ ಹಲ್ಲೆಗೊಳಗಾಗಿರು ಅಮರೆಶ್ ಮಾನಸಿಕವಾಗಿ ನೊಂದಿದ್ದು, ಹೆಚ್ಚಿನ  ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದಿದ್ದರೂ ಜಿಲ್ಲಾಧಿಕಾರಿಗಳು ಎರಡು ನಿಮಿಷ ಬಿಡುವು ಮಾಡಿಕೊಂಡು ಆಸ್ಪತ್ರೆಗೆ ಬಂದು ಸಂತ್ರಸ್ತನಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡದೆ ನಿರ್ಲಕ್ಷಿಸಿರುವ ಕಾರಣ ದಲಿತರ ಬಗ್ಗೆ ಕಾಳಜಿ ಇಲ್ಲದ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸಬೇಕು.

ಇಲ್ಲವಾದರೆ ನವೆಂಬರ್ 10ರಂದು ಯರಗೋಳ ಕುಡಿಯುವ ನೀರು ಯೋಜನೆ ಉದ್ಘಾಟನೆಗೆ ಬರಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದಲಿತ ಸಂಘಟನೆಗಳ ನೇತೃತ್ವದಲ್ಲಿ ಘೆರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಜನಾಧಿಕಾರ ಸಂಘಟನೆಯ ಮುಖಂಡ ಹೂವರಸನಹಳ್ಳಿ ರಾಜಪ್ಪ ಮಾತನಾಡಿ, ದೊಡ್ಡವಲಗಮಾದಿಯಲ್ಲಿ ನಡೆದಿರುವ ಜಾತಿನಿಂದನೆ ಮತ್ತು ಹಲ್ಲೆ ಘಟನೆ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಈ ಘಟನೆಯನ್ನು ಮುಚ್ಚಿಹಾಕುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದ ಸರಿಯಲ್ಲ.

ಜಾತಿನಿಂದ ಕೇಸನ್ನು ಮುಚ್ಚಿಹಾಬೇಕು ಎಂಬ ನಿಟ್ಟಿನಲ್ಲಿ ಪೊಲೀಸರು ಕೌಂಟರ್ ಕೇಸನ್ನು ದಾಖಲಿಸಿಕೊಂಡಿದ್ದಾರೆ. ಕೌಂಟರ್ ದೂರು ನೀಡಿರುವ ಮಹಿಳೆ ಊರಿನಲ್ಲೆ ಇಲ್ಲದಿದ್ದರೂ ಆಕೆ ನೀಡಿದ ಸುಳ್ಳು ದೂರನ್ನು ದಾಖಲಿಸುವ ಮೂಲಕ ಅಟ್ರಾಸಿಟಿ ಕೇಸನ್ನು ಮುಚ್ಚಿಹಾಕುವ ಹುನ್ನಾರವನ್ನು ಪೊಲೀಸರು ಮಾಡಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಅಸಮದಾನ ವ್ಯಕ್ತಿಪಡಿಸಿದ ಅವರು ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ನಾವು ಅಸಮದಾನ ವ್ಯಕ್ತಪಡಿಸುತ್ತಿದ್ದರೂ, ಜಿಲ್ಲಾಧಿಕಾರಿಗಳು ಆಸ್ಪತ್ರ ಪಕ್ಕದಲ್ಲೇ ಹಾದು ಹೋಗಿದ್ದು, ಸಂತ್ರಸ್ತನನ್ನು ಸೌಜ್ಯನ್ನಕ್ಕಾದರೂ ಭೇಟಿ ಮಾಡದಿರುವುದನ್ನು ಸಂಘಟನೆಗಳ ಪರವಾಗಿ ಖಂಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ವರದೇನಹಳ್ಳಿ ವೆಂಕಟೇಶ್, ಬೆಳಮಾರನಹಳ್ಳಿ ಆನಂದ್, ಮುಖಂಡರಾದ ಸಿ.ವಿ.ನಾಗರಾಜ್, ಹುಣಸನಹಳ್ಳಿ ವೆಂಕಟೇಶ್, ಕಲಾವಿದ ಯಲ್ಲಪ್ಪ, ಮಾರುತಿ ಪ್ರಸಾದ್, ರಘುಪತಿ ಕಾರಹಳ್ಳಿ ವೆಂಕಟಶ್, ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರಾಜು, ಆಲೀಂ ಖಾನ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!