• Sun. Apr 28th, 2024

ನ.10ಕ್ಕೆ ಯರಗೋಳ ಡ್ಯಾಂ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ:ಜಿಲ್ಲಾಧಿಕಾರಿ ಅಕ್ರಂ ಪಾಷಾ.

PLACE YOUR AD HERE AT LOWEST PRICE

ಬಂಗಾರಪೇಟೆ:ಕೋಲಾರ ಜಿಲ್ಲೆ ಜನತೆಗೆ ಬಹುದಿನಗಳ ಬೇಡಿಕೆಯಾದ ಯರಗೋಳ ಯೋಜನೆ ಅಣೆಕಟ್ಟು ಉದ್ಘಾಟನೆಗೆ ನವಂಬರ್ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಲೋಕಾರ್ಪಣೆಯಾಗಲಿದ್ದು, ಇಂದು ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ಅವರು ತಾಲೂಕಿನ ಯರಗೋಳ ಜಲಾಶಯವನ್ನು ವೀಕ್ಷಣೆ ಮಾಡಿ ಮಾತನಾಡುತ್ತಾ, ಈ ಯರಗೋಳ ಜಲಾಶಯ ಹಲವು ವಿಘ್ನಗಳ ಮಧ್ಯ ಶಾಸಕರುಗಳು ಹಾಗೂ ಜಿಲ್ಲಾ ಮಂತ್ರಿಗಳ ಪ್ರಯತ್ನದಿಂದ ಲೋಕಾರ್ಪಣೆಗೆ ಸಿದ್ಧವಾಗಿದೆ. ಈಗಾಗಲೇ ಯರಗೋಳ ಡ್ಯಾಂನಲ್ಲಿ ನೀರಿನ ಸಂಗ್ರಹ ಪೂರ್ಣವಾಗಿದೆ. ಇದನ್ನು ನಾವು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದಕ್ಕೆ ಬಂಗಾರಪೇಟೆ,ಕೋಲಾರ ಮತ್ತು ಮಾಲೂರು ಮೂರು ತಾಲೂಕಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಪ್ರಾಯೋಗಿಕವಾಗಿ ಈಗಾಗಲೇ ನೀರನ್ನು ಸರಬರಾಜು ಮಾಡಲಾಗಿದೆ ಎಂದರು.

ಈಗ ಬಿಟ್ಟಿರುವಂತಹ ನೀರು ಕೇವಲ ಪ್ರಾಯೋಗಿಕವಾಗಿ ಮಾತ್ರ ಕುಡಿಯುವುದಕ್ಕೆ ಯೋಗ್ಯವಲ್ಲ ಆದರಿಂದ ನಾವು ಅದನ್ನು ಪರಿಶೀಲನೆ ಮಾಡುತಿದ್ದೇವೆ, ಸತತವಾಗಿ 10 ದಿನಗಳ ಕಾಲ ಪರಿಶೀಲನೆ ಮಾಡಿ, ನಂತರ ಗುಣಮಟ್ಟವನ್ನು ಪರಿಶೀಲಿಸಿ ಕುಡಿಯುವುದಕ್ಕೆ ಯೋಗ್ಯವಾಗಿದೆಯೋ ಇಲ್ಲವೋ ಎಂದು ತಿಳಿಸುತ್ತೇವೆ ಎಂದು ಹೇಳಿದರು.

ಈಗ ಮುಖ್ಯಮಂತ್ರಿಗಳು ಲೋಕಾರ್ಪಣೆಗೆ ಬರುವುದರಿಂದ ಇಂದು ಮಾನ್ಯ ಶಾಸಕರು, ಸಿಓ, ಪೋಲಿಸ್ ಇಲಾಖೆಯ ಎಸ್ ಪಿ,ತಹಶೀಲ್ದಾರ್, ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಥಳವನ್ನು ತನಿಖೆ ಮಾಡಿದ್ದೇವೆ, ಈ ಸ್ಥಳ ಪರಿಶೀಲನೆ ನಂತರ ನಾವು ಕಾರ್ಯಕ್ರಮ ಮಾಡುವಂತಹ ಸ್ಥಳವನ್ನು, ಹೆಲಿಪ್ಯಾಡ್, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ಥಳ, ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಕಾರ್ಯಗತಕ್ಕೆ ತರಲಾಗುವುದು.

ಈಗ ಸಮಯ ಬಹಳ ಕಡಿಮೆ ಇದೆ ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎನ್ನುವ ಸಲವಾಗಿ ಸ್ಥಳ ಪರಿಶೀಲನೆಯನ್ನು ಮಾಡುತಿದ್ದೇವೆ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲು ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸಿ ಇ ಓ ಪದ್ಮ ಬಸವಂತಪ್ಪ, ಎಸಿ ವೆಂಕಟಲಕ್ಷ್ಮಿ, ಕೆಜಿಎಫ್ ಎಸ್.ಪಿ ಶಾಂತಕುಮಾರ್, ತಹಶೀಲ್ದಾರ್ ರಶ್ಮಿ, ಇಓ ರವಿಕುಮಾರ್, ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಮುಖಂಡರಾದ ಮಹದೇವಪ್ಪ, ಧೋನಿ ಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಜಯಣ್ಣ, ಕಂದಾಯ ಇಲಾಖೆಯ ಪವನ್ ಕುಮಾರ್ ಹಾಗೂ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!