• Tue. Apr 30th, 2024

PLACE YOUR AD HERE AT LOWEST PRICE

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2023ರ ಟೂರ್ನಿಯು ಹಲವು ವೈಶಿಷ್ಟ್ಯಗಳಿಗೆ ಹೆಸರಾಗುತ್ತಿದೆ. ಇಂದು (ನ.6) ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧದ 38ನೇ ಪಂದ್ಯದಲ್ಲಿ ಲಂಕಾದ ಆಟಗಾರ ಎಂಜೆಲೋ ಮ್ಯಾಥ್ಯೂಸ್ ವಿಶಿಷ್ಟ ರೀತಿಯ ‘ಟೈಮ್ಡ್‌ ಔಟ್’ಗೆ ಔಟಾಗಿದ್ದಾರೆ.

‘ಟೈಮ್ಡ್‌ ಔಟ್’ ಕೂಡ ಬ್ಯಾಟ್ಸ್‌ಮನ್‌ಗಳು ಔಟಾಗುವ ಬೌಲ್ಡ್‌, ಕ್ಯಾಚ್, ರನ್ಔಟ್, ಎಲ್‌ಬಿ ರೀತಿಯ ಮತ್ತೊಂದು ಔಟಾಗಿದೆ. 100 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ‘ಟೈಮ್ಡ್‌ ಔಟ್’ಗೆ ಯಾವ ದೇಶದ ಆಟಗಾರರು ಔಟಾಗಿರಲಿಲ್ಲ. ಆದರೆ ಇಂದು ಶ್ರೀಲಂಕಾದ ಆಟಗಾರ ಎಂಜೆಲೋ ಮ್ಯಾಥ್ಯೂಸ್ ‘ಟೈಮ್ಡ್‌ ಔಟ್’ಗೆ ಮೊದಲ ಬಾರಿಗೆ ಔಟಾಗಿದ್ದಾರೆ.

ವಿಶ್ವಕಪ್‌ ಟೂರ್ನಿಯ ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್‌ ಗೆದ್ದು ಶ್ರೀಲಂಕಾವನ್ನು ಬ್ಯಾಟಿಂಗ್‌ ಆಹ್ವಾನಿಸಿತ್ತು. 24.2ನೇ ಓವರ್‌ನಲ್ಲಿ ಸದೀರ ಸಮರವಿಕ್ರಮ ಶಕೀಬ್‌ ಅಲ್‌ ಹಸನ್‌ ಬೌಲಿಂಗ್‌ನಲ್ಲಿ 41 ರನ್‌ ಗಳಿಸಿ ಔಟಾಗಿದ್ದರು.

ಟೈಮ್ಡ್‌ ಔಟ್

ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮದ (ಎಂಸಿಸಿ) ಪ್ರಕಾರ ಒಬ್ಬ ಬ್ಯಾಟ್ಸ್‌ಮನ್‌ ಔಟಾದ ಮೂರು ನಿಮಿಷಗಳೊಳಗೆ ಮತ್ತೊಬ್ಬ ಬ್ಯಾಟ್ಸ್‌ಮನ್ ಆಟವಾಡಲು ಕ್ರೀಸಿಗೆ ಬರಬೇಕು. ಒಂದು ವೇಳೆ ಮೂರು ನಿಮಿಷಗಳಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಬರದಿದ್ದರೆ ಔಟ್‌ ಎಂದು ಘೋಷಿಸಲಾಗುತ್ತದೆ.

ಹೆಲ್ಮೆಟ್‌ನೊಂದಿಗೆ ಸ್ವಲ್ಪ ಸಮಸ್ಯೆ ಇದ್ದ ಕಾರಣ ಎಂಜೆಲೋ ಮ್ಯಾಥ್ಯೂಸ್ ಕ್ರೀಸಿಗೆ ಬರಲು ಮೂರು ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರು. ಇದೇ ಸಮಯದಲ್ಲಿ ಶಕೀಬ್‌ ಅಲ್‌ ಹಸನ್‌ ಅಂಪೈರ್‌ಗೆ ಟೈಮ್ಡ್‌ ಔಟ್ ಮಾದರಿಯ ಮನವಿಯನ್ನು ಸಲ್ಲಿಸಿದರು. ಮೂರು ನಿಮಿಷ ಸಮಯ ಮೀರದ ಕಾರಣ ಎಂಜೆಲೋ ಮ್ಯಾಥ್ಯೂಸ್ ಅವರನ್ನು ಔಟ್‌ ಎಂದು ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಔಟ್ ಮೊದಲ ಬಾರಿಯಾಗಿದೆ. ಅಲ್ಲದೆ ಒಂದೇ ಎಸೆತಕ್ಕೆ ಎರಡು ವಿಕೆಟ್‌ ಪತನವಾದಂತಾಯಿತು.

1919 ರಲ್ಲಿ ಇಂಗ್ಲೆಂಡ್‌ನ ಟೌಂಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸಸೆಕ್ಸ್ ಕ್ರಿಕೆಟಿಗ ಹೆರಾಲ್ಡ್ ಹೆಗೇಟ್ ಅವರನ್ನು ಅಂಪೈರ್ ಆಲ್ಫ್ರೆಡ್ ಸ್ಟ್ರೀಟ್ ಅವರನ್ನು “ಟೈಮ್ ಔಟ್” ಎಂದು ನೀಡಿದ್ದರು. ಸೋಮರ್‌ಸೆಟ್‌ನೊಂದಿಗೆ ಸಸೆಕ್ಸ್ ಆ ಪಂದ್ಯ ಆಡುತ್ತಿತ್ತು. ಈ ಪಂದ್ಯ ಬಿಟ್ಟರೆ ಇನ್ನೆಲ್ಲೂ ಈ ರೀತಿಯ ನಿರ್ಣಯವಾಗಿರಲಿಲ್ಲ. ಅಲ್ಲದೆ ಇದು ಪ್ರಮ ದರ್ಜೆ ಪಂದ್ಯವಾಗಿತ್ತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!