• Fri. May 10th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಉತ್ತರಾಖಂಡದ ಉತ್ತರಕಾಶಿ ಬಳಿ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ಹೊರತೆಗೆಯಲು ರಾಜ್ಯದಿಂದ ೯ ಜನರ ಮೈನಿಂಗ್ ಎಂಜಿನಿಯರ್ ತಂಡ ಶ್ರಮಿಸಿದ್ದು, ತಂಡದಲ್ಲಿ ಜಿಲ್ಲೆಯ ಹೆಮ್ಮೆಯ ಪುತ್ರ ಹೆಚ್.ಎಸ್.ವೆಂಕಟೇಶ್ ಪ್ರಸಾದ್ ಒಬ್ಬರಾಗಿದ್ದುಕೊಂಡು ಕಾರ್ಮಿಕರನ್ನು ಹೊರ ತರಲು ಪ್ರಧಾನವಾಗಿ ಶ್ರಮಿಸಿರುವುದು ವಿಶೇಷವಾಗಿದೆ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಮೇಲಾದಿಕಾರಿಗಳ ಸೂಚನೆ ಮೇರೆಗೆ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಸಿಇಒ ಸೈರಿಕ್ ಜೋಸೆಪ್ ನೇತೃತ್ವದಲ್ಲಿ ಮೈನಿಂಗ್ ಎಂಜಿನಿಯರ್‌ಗಳಾದ ಬಂಗಾರಪೇಟೆಯ ಹೆಚ್.ಎಸ್.ವೆಂಕಟೇಶ್ ಪ್ರಸಾದ್, ಶ್ರೀಕಾಂತ್, ಅಮೋಘ್, ಅಸೀಪ್‌ಮುಲ್ಲಾ, ಏರೋನ್ಯಾಟಿಕ್ ಎಂಜಿನಿಯರ್‌ಗಳಾದ ಗಜಾನ, ಎನ್‌ವಿಡಿ ಸಾಯಿ, ರೇಗು, ಸತ್ಯ ಎಂಬುವವರ ತಂಡವು ನ. ೨೨ ರಂದು ಬೆಂಗಳೂರಿನಿಂದ ಡೆಹ್ರಾಡೂನ್‌ಗೆ ಹೊರಟು ಉತ್ತರಕಾಶಿ ಸೇರಿದ್ದಾರೆ.

ಸುರಂಗದಲ್ಲಿ ಸಿಲುಕಿಕೊಂಡಿರುವ ೪೧ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಹಲವು ಮಾರ್ಗಗಳ ಚಿಂತನೆ ನಡೆಸಿದ್ದರು. ಎಲ್ಲಿ ಮಣ್ಣು ಕುಸಿದಿದೆಯೋ ಅದೇ ಮಣ್ಣು ತೆಗೆದು ಹೊರತೆಗೆಯುವುದು. ಬೆಟ್ಟದ ಮೇಲಿಂದ ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳಕ್ಕೆ ನೇರವಾಗಿ ಸುರಂಗ ಮಾರ್ಗ ಮಾಡುವುದು. ಕುಸಿದಿರುವ ಮಣ್ಣಿನ ಪಕ್ಕದಲ್ಲಿಯೇ ಮತ್ತೊಂದು ಸುರಂಗ ಮಾಡಿ ಹೊರತೆಗೆಯುವುದು. ಟರ್ನಲ್ ಒಳಗಡೆಯಿಂದ ಮಣ್ಣನ್ನು ತೆಗೆದು ಹಾಕಿದ್ದು, ೬೦ ಮೀಟರ್ ಟರ್ನಲ್ ಒಳಗಿದ್ದ ಮಣ್ಣನ್ನು ಹೊರತೆಗೆಯಲಾಯಿತು. ಈ ವೇಳೆಗೆ ಕೆಲಸ ಮಾಡುತ್ತಿದ್ದ ಆಗರ್ ಯಂತ್ರ ಕೆಟ್ಟು ಹೋಯಿತು.

ಅನಂತರ ಪ್ಲಾನ್ ಬಿ ಯಂತೆ ಬೆಟ್ಟದ ಮೇಲಿಂದ ಕೆಳಗಡೆಗೆ ೨೯ ಮೀಟರ್ ಆಳವಾಗಿ ಸುರಂಗ ಕೊರೆಯಲಾಯಿತು. ಇದರಿಂದ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಹೊರತೆಗೆಯಲು ಸಹಾಯವಾಯಿತು. ಮೊದಲಿಗೆ ಸಿಲುಕಿಕೊಂಡಿದ್ದ ಕಾರ್ಮಿಕರ ಸುರಂಗದಲ್ಲಿ ಸುಮಾರು ೪೫ ಮೀಟರ್ ಉದ್ದದ ಸುರಂಗವು ವಿಶಾಲವಾಗಿತ್ತು. ಇದರಲ್ಲಿ ಸಿಲುಕಿದ್ದ ೪೧ಜನರಿಗೂ ಅಗತ್ಯವಾಗಿ ಬೇಕಾಗಿದ್ದ ಆಹಾರ, ಬಟ್ಟೆ ಸೇರಿದಂತೆ ಅಗತ್ಯವಸ್ತುಗಳನ್ನು ೬ ಇಂಚು ಪೈಪ್ ಮೂಲಕ ರವಾನೆ ಮಾಡಲಾಗುತ್ತಿತ್ತು.

ಈ ಕಾರ್ಮಿಕರು ಟೈಂಪಾಸ್‌ಗಾಗಿ ಕ್ರಿಕೆಟ್ ಬ್ಯಾಟ್, ಬಾಲ್ ಸಹ ಕಳುಹಿಸಲಾಗಿತ್ತು. ಕಾರ್ಮಿಕರ ಯೋಗಕ್ಷೇಮ ಹಾಗೂ ಹೊರತೆಗೆಯಲು ಮಾಡುತ್ತಿದ್ದ ಸುರಂಗ ಕೆಲಸ ಬಗ್ಗೆ ಭಾರತೀಯ ಸೇನೆಯ ಮುಖ್ಯಸ್ಥರಿಗೆ ಪ್ರತಿ ೬ ಗಂಟೆಗೊಮ್ಮೆ ಸಮಗ್ರ ವರದಿ ರವಾನೆ ಮಾಡಲಾಗುತ್ತಿತ್ತು. ಉತ್ತರಭಾರತದ ಕಡೆಯಿಂದ ೧೬ ಜನರ ತಂಡವನ್ನು ಕರೆಯಿಸಿ ರ‍್ಯಾಕ್‌ವೀಲ್ ಮಾಡಿಸಿ ಎಲ್ಲಾ ತಂಡಗಳ ಸಹಕಾರದಿಂದ ೪೫ ಮೀಟರ್‌ಗೂ ಹೆಚ್ಚು ವೆಲ್ಡಿಂಗ್ ಮಾಡಿ ಪೈಪ್ ಜೋಡಿಸುವ ೯೦೦ ಎಂಎಂ ಸುರಂಗವನ್ನು ಕೊರೆಯುವಲ್ಲಿ ಸಪಲರಾದರು.

ಇವರ ಜೊತೆಗೆ ಎನ್‌ಡಿಆರ್‌ಎಪ್, ಎಸ್‌ಡಿಆರ್‌ಎಫ್, ಭಾರತೀಯ ಮಿಲಟರಿ ಸೇನೆ, ಆರ್ಮಿ ಸೇನೆ,ಯ ಜೊತೆಗೆ ಮೈನಿಂಗ್ ತಂಡವು ಸೇರಿಕೊಂಡು ಶರವೇಗದಲ್ಲಿ ನೂರಾರು ಕಾರ್ಮಿಕರು ಹಾಗೂ ಎಂಜಿನಿಯರ್‌ಗಳು ಸೇರಿಕೊಂಡು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ೪೧ ಜನ ಕಾರ್ಮಿಕರನ್ನು ನ. ೨೮ ರಂದು ರಾತ್ರಿ ೮.೩೦ರ ವೇಳೆಗೆ ಒಬ್ಬೊಬ್ಬರನ್ನೇ ಸುರಕ್ಷಿತವಾಗಿ ಹೊರ ತೆಗೆಯಲು ಸಾಧ್ಯವಾಯಿತು.

ಹೆಚ್.ಎಸ್.ವೆಂಕಟೇಶ್ ಪ್ರಸಾದ್ ವಾಸ್ತವ ಕರ್ನಾಟಕ ಹಾಗೂ ಡಮರುಗ ಪತ್ರಿಕೆಗಳ ಸಂಪಾದಕರಾದ ಕಲಾವತಿ ಹಾಗೂ ಹೆಚ್.ಎಲ್.ಸುರೇಶ್ ಅವರ ದ್ವಿತೀಯ ಪುತ್ರನರಾಗಿದ್ದಾರೆ. ಹೆಚ್.ಎಸ್.ವೆಂಕಟೇಶ್ ಪ್ರಸಾದ್ ೨೦೧೫ರಲ್ಲಿ ಮೈನಿಂಗ್ ಎಂಜಿನಿಯರ್ ಆಗಿ ಉತ್ತೀರ್ಣಗೊಂಡ ನಂತರ ಗುಜರಾತಿನ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್‌ನಲ್ಲಿ ೫ ವರ್ಷಗಳು ಕೆಲಸ ಮಾಡಿದ್ದಾರೆ. ನವಭಾರತ್ ಬಿಲ್ಟಿಂಗ್ ಸ್ಟೋನ್ ಕ್ವಾರಿಯಲ್ಲಿ ಮೈನಿಂಗ್ ಎಂಜಿನಿಯರ್ ಆಗಿ ಎರಡು ವರ್ಷ ಹಾಗೂ ನಾಲ್ಕು ತಿಂಗಳಿನಿಂದ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ೪೧ ಕಾರ್ಮಿಕರನ್ನು ಹೊರತೆಗೆದ ಬಳಿಕ ಉತ್ತರಖಾಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ  ಹೆದ್ದಾರಿ ಸಚಿವ ವಿ.ಕೆ.ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಂಗಾರಪೇಟೆಯ ಹೆಚ್.ಎಸ್.ವೆಂಕಟೇಶ್ ಪ್ರಸಾದ್ ಸೇರಿದಂತೆ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ತಂಡದವರನ್ನು ಅಭಿನಂದಿಸಿದರು.

ಮೈನಿಂಗ್ ಎಂಜಿನಿಯರ್ ಹೆಚ್.ಎಸ್.ವೆಂಕಟೇಶ್ ಪ್ರಸಾದ್ ಮಾತನಾಡಿ, ಉತ್ತರಖಾಂಡದ ಉತ್ತರಕಾಶಿಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ೪೧ ಕಾರ್ಮಿಕರನ್ನು ಹೊರತೆಗೆಯಲು ನಮ್ಮ ಸಂಸ್ಥೆಗೆ ಭಾರತೀಯ ಮಿಲಟರಿ ಸೇನೆ ಕರ್ನಲ್ ದೀಪಕ್ ಪಾಟೀಲ್ ಕರೆ ಮಾಡಿ ಕರೆದಿದ್ದರಿಂದ ೯ ಜನರ ತಂಡವು ಹೋಗಿದ್ದೆವು. ಮಾನವೀಯತೆಯ ದೃಷ್ಠಿಯಿಂದ ಇಂತಹ ಕೆಲಸ ಮಾಡಲು ಖುಷಿಯಾಯಿತು. ಈ ಕೆಲಸದ ನಿರ್ವಹಣೆಯಲ್ಲಿ ಮೂಂಚೂಣಿಯಲ್ಲಿರಬೇಕೆಂದು ಆಸೆಯಿಂದ ದಿನದ ೨೪ ಗಂಟೆಯೂ ಕೆಲಸ ಮಾಡಿದ್ದೆನೆ. ಇಲ್ಲಿ ಕೆಲಸ ಮಾಡಲು ಊಟ, ನಿದ್ದೆ ಬಗ್ಗೆ ಗಮನವಿರಲಿಲ್ಲ.

ಮುಖ್ಯವಾಗಿ ಸುರಂಗದಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವ ಕೆಲಸ ನಮ್ಮಿಂದಲೇ ಆಗಬೇಕೆಂದು ಉತ್ಸಾಹದಿಂದ ಕೆಲಸ ಮಾಡಿದ್ದೇವೆ. ಈ ಕೆಲಸ ಯಶಸ್ವಿಯಾಗಿದ್ದರಿಂದ ಭಾರೀ ಸಂತೋಷವಾಗಿದೆ. ಇದಕ್ಕೆ ಉತ್ತರಖಾಂಡ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ದೇಶವೇ ಅಭಿನಂದಿಸಿರುವುದು ಸಂತಸ ತಂದಿದೆ ಎಂದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!