• Sun. May 5th, 2024

PLACE YOUR AD HERE AT LOWEST PRICE

ಕೆಜಿಎಫ್:ಕೇಂದ್ರ-ರಾಜ್ಯ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.

ಬೇತಮಂಗಲದ ಶ್ರೀ ವಿನಾಯಕ ಕಲ್ಯಾಣ ಮಂಟಪದಲ್ಲಿ ಪಂಚಾಯತ್ ರಾಜ್ ಇಲಾಖೆವತಿಯಿಂದ ಬೇತಮಂಗಲ ಹೋಬಳಿ ಮಟ್ಟದ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಂದೇ ಸೂರಿನಡಿ ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ದೃಷ್ಠಿಯಿಂದ ಕುಂದು ಕೊರತೆ ಸಭೆಯನ್ನು ಪ್ರತಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಸಲು ಸರ್ಕಾರ ಸೂಚನೆ ನೀಡಲಾಗಿದೆ, ಸಾರ್ವಜನಿಕರು ತಮ್ಮ ಸಮೀಪದಲ್ಲಿ ಹಮ್ಮಿಕೊಳ್ಳುವ ಕುಂದು ಕೊರತೆ ಸಭೆಗಳನ್ನು ಬಳಸಿಕೊಳ್ಳಬೇಕೆಂದರು.

ಬಾಲ್ಯ ವಿವಾಹಗಳು ತಡೆ, ಗ್ರಾಂಥಲಯಗಳಿಗೆ ಮಹಿಳೆಯರು ಭೇಟಿ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದರು.

ಬೇತಮಂಗಲ ಗ್ರಾಪಂಗೆ ಸಂಬಂಧಿಸಿದ ಗುರುತಿಸಿರುವ ಸ್ಮಶಾನಗಳಿಗೆ ದಾಖಲೆಗಳನ್ನು ಸರಿಪಡಿಸಲು, ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ಥಿ ಪಡಿಸಲು, ಒಂದೇ ಜಾಗದಲ್ಲಿ ಗ್ರಾಪಂ ಕಟ್ಟಡ, ನಾಡ ಕಛೇರಿ ನಿರ್ಮಿಸಲು ಜಾಗವನ್ನು ಗುರುತಿಸಬೇಕು ಎಂದು ಸಾರ್ವಜನಿಕರು ಕೋರಿದರು.

ಶೀಘ್ರವಾಗಿ ಗ್ರಾಮದಲ್ಲಿ ಕಸ ಮುಕ್ತ ಗ್ರಾಮ ಮಾಡಲು ತ್ಯಾಜ್ಯ ವಿಲೇವರಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲು ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಸೇರಿದಂತೆ ಸದಸ್ಯರು ಮನವಿ ಮಾಡಿದರು.

ಶೀಘ್ರವಾಗಿ ಗ್ರಾಪಂಯ ಕಾರ್ಯದರ್ಶಿ ನೇಮಕ ಮಾಡಬೇಕು ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಸೌಲಭ್ಯಗಳ ಪಟ್ಟಿಯನ್ನು ಗ್ರಾಪಂಗೆ ನೀಡಬೇಕು ಗ್ರಾಪಂಯಲ್ಲಿ ನೋಟಿಸ್ ಹಾಕುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಟಿ.ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್  ಮನವಿ ಮಾಡಿದರು.

ಗ್ರಾಪಂಯ ಜಲ ಜೀವನ ಯೋಜನೆಯಲ್ಲಿ ಆರಂಭವಾಗಿಲ್ಲ ಎಂದು ಕಮ್ಮಸಂದ್ರ ಗ್ರಾಪಂ ಉಪಾಧ್ಯಕ್ಷ ದಾಮೋಧರ್ ರೆಡ್ಡಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್ ಆರೋಪಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ಗೈರು:

ಕಂದಾಯ ಇಲಾಖೆಯ ಯಾವ ಅಧಿಕಾರಿಗಳು ಸಭೆಗೆ ಬಾರದೆ ಗೈರು ಹಾಜರಾಗಿದ್ದರು. ಸಭೆಯಲ್ಲಿ  ಅನೇಕರು ಕಂದಾಯ ಇಲಾಖೆಗೆ ಒಳಪಡುವ ನಕಾಶೆ ರಸ್ತೆಗಳು, ರಾಜಕಾಲುವೆ, ಸ್ಮಶಾನ ಸೇರಿದಂತೆ ಇತರೆ ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತಂದರಾದರೂ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಕಂದಾಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಯಾವುದೇ ಪರಿಹಾರ ಕಂಡುಬಂದಿಲ್ಲ.

ಈ ಸಂದರ್ಭದಲ್ಲಿ ತಾಪಂ ಇಒ ಮಂಜುನಾಥ್ ಹರ್ತಿ, ಕಮ್ಮಸಂದ್ರ ಗ್ರಾಪಂ ಅಧ್ಯಕ್ಷೆ ಸುಮಾ ಸಮೀಯಲ್, ಮಾಜಿ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್, ಬೇತಮಂಗಲ ರಾಧಮ್ಮ ಉದಯ್ ಕುಮಾರ್, ಮಮತ ಗಣೇಶ್ ಸೇರಿದಂತೆ ಗ್ರಾಪಂ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!