• Thu. May 9th, 2024

PLACE YOUR AD HERE AT LOWEST PRICE

-ಕೆ.ರಾಮಮೂರ್ತಿ.

ಬಂಗಾರಪೇಟೆ:ಗ್ರಾಮ ಲೆಕ್ಕಾಧಿಕಾರಿಯಾಗಿ ನೇಮಕಗೊಂಡವರು ಕಡ್ಡಾಯವಾಗಿ  ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಕೇಂದ್ರ ಸ್ಥಾನದಲ್ಲಿ ಕಛೇರಿ ತೆರೆದು ಜನರಿಗೆ ಸುಲಭವಾಗಿ ಸಿಗುವಂತಿರಬೇಕು ಎಂಬ ಕಾನೂನನ್ನು ಗಾಳಿಗೆ ತೂರಿ ಬಹುತೇಕರು ಕೇಂದ್ರ ಸ್ಥಾನದಲ್ಲಿ ಲಭ್ಯವಿಲ್ಲದಂತಾಗಿದ್ದು ಇದರಿಂದಾಗಿ ಜನರು  ಮಾಮೂಲಿನಂತೆ ದೂರದ ಹೋಬಳಿ ಮತ್ತು ತಾಲ್ಲೂಕು ಕೇಂದ್ರಕ್ಕೆ ಅಲೆಯುವ ಸ್ಥತಿ ಮುಂದುವರೆದಿದೆ.

ಸಾಮಾನ್ಯ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ದೂರದ ಹೋಬಳಿ ಮತ್ತು ತಾಲ್ಲೂಕು ಕೇಂದ್ರದ ಕಛೇರಿಗಳಿಗೆ ಅಲೆಯುವುದುನ್ನು ತಪ್ಪಿಸುವ ಸಲುವಾಗಿ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು ಮತ್ತು ಕೇಂದ್ರ ಸ್ಥಾದಲ್ಲೇ ಕಛೇರಿ ತೆರೆದು ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರಗಳು ಅನೇಕ ಬಾರಿ  ಆದೇಶಗಳನ್ನು ಮಾಡುತ್ತಿದ್ದರೂ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ.

ತಾಲ್ಲೂಕಿನ ಗಡಿಭಾಗದ ದೋಣಿಮಡಗು, ಬತ್ತಲಹಳ್ಳಿ, ಬೋಡಗುರ್ಕಿ, ಗುಲ್ಲಹಳ್ಳಿ, ಬಲಮಂದೆ, ತೊಪ್ಪನಹಳ್ಳಿ, ತಮಟಮಾಕನಹಳ್ಳಿ ಮೊದಲಾದ ಕಂದಾಯ ವೃತ್ತದ ಜನಕ್ಕೆ ಕೇಂದ್ರ ಸ್ತಾನದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಛೇರಿ ಇಲ್ಲದ ಕಾರಣ ಹತ್ತಾರು ಕಿ.ಮೀ ಅಲೆದಾಡುವುದು ತಪ್ಪಿಲ್ಲ. ಇನ್ನು ತಾಲ್ಲೂಕು ಕೇಂದ್ರ ಬಂಗಾರಪೇಟೆ ಕಸಬಾ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳು ಬಂಗಾರಪೇಟೆ ಪಟ್ಟಣದಲ್ಲಿ ಕೆಲ ರೂಮುಗಳನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲೇ ಅನಧಿಕೃತ ಕಛೇರಿಗಳನ್ನಾಗಿ ಮಾಡಿಕೊಂಡಿದ್ದು ಕಸಬಾ ಹೋಬಳಿಯ ಜನರೂ  ಹತ್ತಾರು ಮೈಲುಗಳಿಂದ ನಗರಕ್ಕೆ  ಅಲೆಯುವ ಸ್ಥತಿ ಇದೆ.

ಬಹುತೇಕ ಸಂದರ್ಭಗಳಲ್ಲಿ ತಾಲ್ಲೂಕಿನ ಕಾಮಸಮುದ್ರ ಹೋಬಳಿಯಲ್ಲಿನ 7 ಕಂದಾಯ ವೃತ್ತಗಳ ಗ್ರಾಮ ಲೆಕ್ಕಾಧಿಕಾರಿಗಳು ಕಾಮಸಮುದ್ರ ನಾಡ ಕಛೇರಿಯಲ್ಲಿ, ಬೂದಿಕೋಟೆ ಹೋಬಳಿಯ 8 ಕಂದಾಯ ವೃತ್ತಗಳ ಗ್ರಾಮ ಲೆಕ್ಕಾಧಿಕಾರಿಗಳು ಬೂದಿಕೋಟೆ ನಾಡ ಕಛೇರಿಯಲ್ಲಿ, ಬಂಗಾರಪೇಟೆ ಕಸಬಾ ಹೋಬಳಿಯ 18 ಕಂದಾಯ ವೃತ್ತಗಳ ಗ್ರಾಮ ಲೆಕ್ಕಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಛೇರಿ ಸುತ್ತಮುತ್ತ ಸಿಗುತ್ತಾರೆಯೇ ಹೊರತು  ಕೇಂದ್ರ ಸ್ಥಾನಗಳಲ್ಲಿ ಸಿಗುವುದೇ ಅಪರೂಪ ಎಂಬ ಆರೋಪಗಳು ಸರ್ವೇ ಸಾಮಾನ್ಯವಾಗಿದೆ.

ಕೆಲವು ಕಡೆ ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿ ಕಛೇರಿ ತೆತೆಯಲು ಅನುಕೂಲವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಕಛೇರಿಯಲ್ಲೇ ಗ್ರಾಮ ಲೆಕ್ಕಾಧಿಕಾರಿಗಳು ಕಛೇರಿ ತೆರೆಯಲು ಸರ್ಕಾರ ಹೊಸ ಆದೇಶವನ್ನು ಮಾಡಿದೆಯಾದರೂ ಇನ್ನೂ ತನಕ ಯಾವುದೇ ಗ್ರಾಮ ಲೆಕ್ಕಾಧಿಕಾರಿ ಅಧಿಕೃತವಾಗಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಕಛೇರಿ ನಾಮಫಲಕ ಅಳವಡಿಸಿ ಕಛೇರಿ ತೆರೆದಿಲ್ಲ ಎನ್ನಲಾಗಿದ್ದು, ಸ್ಥಳೀಯ ಮಟ್ಟದ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಪಾಲಿಸದ ಕಾರಣ ಗ್ರಾಮೀಣ ಭಾಗದ ಜನತೆಗೆ ತುಂಬಾ ತೊಂದರೆ ಮತ್ತು ಮೋಸವಾಗುತ್ತಿದೆ.

ಆ  ಮೂಲಕ ಸರ್ಕಾರಿ ಆದೇಶಗಳು ಮೂಲೆಗುಂಪಾಗುತ್ತಿದ್ದು ಜನರು ದಿನನಿತ್ಯ ದೂರದ ಕಛೇರಿಗಳಿಗೇ ಹೋಗಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥತಿ ಮುಂದುವರೆದಿದ್ದು, ಜನರ ಸಮಯ ದುಡ್ಡು ವ್ಯರ್ಥವಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಿ ಸರ್ಕಾರಿ ಆಧೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿನದಲ್ಲಿ ಕಡ್ಡಾಯವಾಗಿ ವಾಸವಿದ್ದು ಕಛೇರಿ ತೆತೆಯುವಂತೆ ಮಾಡಲು ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

…………………………………

ಕರ್ನಾಟಕ ಭೂ ಖಾಯಿದೆ 1964 ಮತ್ತು 1966 (Revenue act 1964 and 1966 rule 28,40,and 61,62 ,64(6) 65 109(1)122 ,(3) 142,145 and regards)ರಂತೆ ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಮಟ್ಟದ ಕಂದಾಯ ಆಡಳಿತದ ಪ್ರಮುಖ ಅಧಿಕಾರಿಯಾಗಿದ್ದು ಗ್ರಾಮಸ್ಥರಿಗೆ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸುಲಭವಾಗಿ ಸಿಗುವಂತಾಗಬೇಕೆಂದು ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಅಲ್ಲೇ ಕಚೇರಿ ತೆರೆಯಲು ಸರ್ಕಾರ ಆದೇಶ ಮಾಡಿದೆ. ನಿಯಮದಂತೆ ಗ್ರಾಮ ಲೆಕ್ಕಾಧಿಕಾರಿಗಳು  ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದೆ ಕಛೇರಿಯನ್ನೂ ತೆರೆಯದೆ ರೈತರಿಗೆ ಮತ್ತು ದಲಿತರಿಗೆ ಹಾಗೂ ಮಹಿಳೆ ಸೇರಿದಂತೆ ಸಾರ್ವಜನಿಕರಿಗೆ ಸಿಗದೆ ಇರುವುದು ದುರಾದೃಷ್ಟಕರ ವಿಷಯವಾಗಿದೆ. ಕಂದಾಯ ಇಲಾಖೆ ನಿಯಮದಂತೆ ಕೆಲಸ ನಿರ್ವಹಿಸಬೇಕಾದವರು ತಪ್ಪು ಮಾಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಿ ಗ್ರಾಮ ಲೆಕ್ಕಾಧಿಕಾರಿ ಕೇಂದ್ರ ಸ್ಥಾನದಲ್ಲಿ ವಾಸವಿರುವಂತೆ ಮತ್ತು ಅಲ್ಲೇ ಕಛೇರಿ ತೆರೆದು ಜನರ ಕೆಲಸ ಮಾಡುವಂತೆ ಮಾಡಬೇಕೆಂದು ಒತ್ತಾಯಿಸುತ್ತೇನೆ.

ಸೂಲಿಕುಂಟೆ ರಮೇಶ್.

ರಾಜ್ಯ ಸಂಘಟನಾ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ.

………………………..

ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸವಿರಬೇಕೆಂದು ಸರ್ಕಾರಿ ಆದೇಶ ಇದ್ದರೂ ಯಾವುದೇ ಗ್ರಾಮ ಲೆಕ್ಕಾಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರು ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಜಾತಿ, ಆದಾಯ ಪ್ರಮಾಣ ಪತ್ರ, ಪಿಂಚಣಿ, ಖಾತೆ ಬದಲಾವಣೆ ಮೊದಲಾದ ಕೆಲಸಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡಿಕಿಕೊಂಡು ದೂರದ ಹೋಬಳಿ ಕೇಂದ್ರಕ್ಕೆ ಮತ್ತು (ತಾಲ್ಲೂಕು ಕೇಂದ್ರ) ನಗರಗಳಿಗೆ ಹೋಗುವ ಪರಿಸ್ಥಿತಿ ಇದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷರುಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವಂತೆ ಮತ್ತು ಕೇಂದ್ರ ಸ್ಥಾನದಲ್ಲಿ ಕಛೇರಿ ತೆರೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತುರ್ತಾಗಿ ಕ್ರಮ ವಹಿಸಬೇಕು.

ನಳಿನಿಗೌಡ. ಮಹಿಳಾ ಘಟಕದ ಜಿಲ್ಲಾಧ್ಯಕ್ಷರು, ರೈತ ಸಂಘ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!