• Sun. May 12th, 2024

ಶೋಷಿತರ ಧ್ವನಿಗೆ ರಾಜಕೀಯಕ್ಕೆ ಬರಬೇಕೇ ಹೊರತು ಸ್ವಾರ್ಥಕ್ಕೆ ಬರಬಾರದು: ಸಿಎಂಆರ್ ಶ್ರೀನಾಥ್

PLACE YOUR AD HERE AT LOWEST PRICE

ಕೋಲಾರ: ಸಮಾಜದಲ್ಲಿನ ಶೋಷಿತರ ಧ್ವನಿಯಾಗಿ ಕೆಲಸ ಮಾಡಲಿಕ್ಕೆ ರಾಜಕೀಯಕ್ಕೆ ಬರಬೇಕೇ ಹೊರತು ವೈಯಕ್ತಿಕ ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬರಬಾರದು ಬಡವರ ದಲಿತರ ಪರವಾದ ಬದ್ಧತೆ ಇರುವವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು.

ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ಕರ್ನಾಟಕ ದಲಿತ‌ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಅಂಬೇಡ್ಕರ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ದಲಿತರ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಪ್ರತಿನಿಧಿಗಳು ಆದವರು  ಕುಟುಂಬದ ಸದಸ್ಯರ ರೀತಿಯಲ್ಲಿ ಪ್ರತಿಯೊಬ್ಬರ ಕೆಲಸ ಮಾಡಬೇಕು ಯಾರನ್ನೋ ಆಗಲಿ ಬೇಡುವಂಥ ಸ್ಥಿತಿಗೆ ಜನರನ್ನು ತರಬಾರದು ಜನರ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಕನಿಷ್ಠ ನಗರದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಗಾರ್ಮೆಂಟ್ಸ್  ಸ್ಥಾಪಿಸಲು ಸರಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದರು.

ದೇಶದಲ್ಲಿ ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ನೀಡಿದ ಮೀಸಲಾತಿಯಿಂದ ಮಹಿಳೆಯರ ಕೈಗೂ ಅಧಿಕಾರ ಸಿಕ್ಕಿದೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಅಧಿಕಾರವನ್ನು ತಮ್ಮ ಪತಿ ಕೈಗೆ ಕೊಡಲು ಹೋಗಬೇಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿಮ್ಮಗಳ ಆಲೋಚನೆ ಇರಲಿ ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳು ಬೇಕಾಗಿಲ್ಲ ಸರಕಾರಗಳ ನಿರ್ಲಕ್ಷ್ಯದಿಂದ ಶಿಕ್ಷಣ ಮತ್ತು ಆರೋಗ್ಯದಿಂದ ವಂಚಿತರಾಗಿದ್ದಾರೆ ಇವತ್ತು ದೇಶದ ಅಭಿವೃದ್ಧಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಮುಖ್ಯ ಎಂಬುದನ್ನು ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅನಿಟ್ಟಿನಲ್ಲಿ ಸರಕಾರಗಳು ಗಮನ ಹರಿಸಲಿ ಎಂದರು‌

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಹಿರಿಯ ಉಪಾಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ ಸಮಾಜದಲ್ಲಿ ಶೋಷಿತರ ಧ್ವನಿಯಾಗಿ ಭೀಮಾ ಕೋರೆಗಾಂವ್ ವಿಜಯೋತ್ಸವನ್ನು ಆಚರಣೆ ಮಾಡಲಾಗುತ್ತಾ ಇದೆ ದಲಿತ ಸಮುದಾಯವು ಶೋಷಣೆ ಮುಕ್ತವಾಗಿ ಗುಲಾಮಗಿರಿಯನ್ನು ದೂರ ಮಾಡಿ ಸ್ವಾಭಿಮಾನದ ವ್ಯಕ್ತಿತ್ವವನ್ನು ರೂಪುಸಿಕೊಳ್ಳಲು ದಲಿತ ಸಮುದಾಯವು ಒಗ್ಗಟ್ಟಿನಿಂದ ಸಾಗಬೇಕಾಗಿದೆ ಎಂದರು. ಕುಮಾರಿ ಅನುಶ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮಕ್ಕೂ  ಮೊದಲು ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ಮೆರವಣಿಗೆ ಮೂಲಕ ಹಳೆ ಬಸ್ ನಿಲ್ದಾಣಕ್ಕೆ ಬಂದರು ಈ ಸಂದರ್ಭದಲ್ಲಿ ಉಪನ್ಯಾಸಕಿ ಸಿ.ಎಂ ನಾಗಮಣಿ, ಸಹ ಪ್ರಾಧ್ಯಾಪಕಿ ಕೆ.ಪ್ರಸನ್ನ ಕುಮಾರಿ, ಸುಶ್ರೂತ ಅಧೀಕ್ಷಕೆ ವಿಜಯಮ್ಮ ವಿಶೇಷ ಉಪನ್ಯಾಸ ನೀಡಿದರು, ವೇದಿಕೆಯಲ್ಲಿ ಹೂಹಳ್ಳಿ ಪ್ರಕಾಶ್, ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್, ಕೆ.ಜಯದೇವ್, ಅಂಬೇಡ್ಕರ್ ನಗರ ಸೋಮಶೇಖರ್, ಮಾರ್ಜೇನಹಳ್ಳಿ ಬಾಬು, ವೆಂಕಟಾಚಲಪತಿ, ಡಿಪಿಎಸ್ ಮುನಿರಾಜು, ಹುಣಸನಹಳ್ಳಿ ವೆಂಕಟೇಶ್, ಸಾಹುಕಾರ್ ಶಂಕರಪ್ಪ, ರಾಜಕುಮಾರ್, ಬಲಿಜ ಸಂಘದ ತೋಟಗಳ ಅಶೋಕ್ ಇದ್ದರು ವಿಧ್ಯಾರ್ಥಿ ಅನುಷಾ ಪ್ರಾಸ್ತಾವಿಕವಾಗಿ ಮಾಡಿದರು ಎಂ.ಆರ್ ಚೇತನ್ ಬಾಬು ಕಾರ್ಯಕ್ರಮವನ್ನು ನಿರೂಪಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!