• Sat. Apr 27th, 2024

PLACE YOUR AD HERE AT LOWEST PRICE

-ವಕ್ಕಲೇರಿ ರಾಜಪ್ಪ.

ಛೇ ಬೆಳಿಗ್ಗೆ ಮಗಳನ್ನು ಕಾಲೇಜ್ ಬಸ್ಸು ಹತ್ತಿಸಿ ಡೂಂ ಲೈಟ್ ಸರ್ಕಲ್ ನಲ್ಲಿ ಕಾಫಿ ಕುಡಿಯುತ್ತಾ ಪತ್ರಿಕೆ ಓದುತ್ತಿದ್ದರೆ ಆಕ್ಷರಗಳು ಓದುತ್ತಿದ್ದೇನೆ. ತಲೆಯಲ್ಲಿನ ವಿಷಯ ಮಾತ್ರ ರಾತ್ರಿನಡೆದ ಘಟನೆಯೇ ತುಂಬಿಕೊಂಡಿದೆ. ಮಣಿಪಾಲ್ ಆಸ್ವತ್ತೆಯಿಂದ ಕೋಲಾರ ಕಡೆಗೆ ಸ್ವಲ್ಪ ದೂರ ಬರುತ್ತಿರಬೇಕಾದರೆ ನಜೀರ್ ಅಹಮದ್ ಸಾಹೇಬರ ಕರೆ ಬಂತು. ಹೇಗಿದೆ ಮುನಿಸ್ವಾಮಿಗೆಂದರು.

ಪರವಾಗಿಲ್ಲ ಸರ್. ನೀವು ಮನೆಯೇ ಸರ್. ಅಲ್ಲಿಗೆ ಬರುತ್ತೇವೆಂದು ಕಾರು ತಿರಗಿಸಿದೆವು. ಸಮಾನ್ಯವಾಗಿ ಅಂಬರೀಶ್ ಕಾರಲ್ಲಿ ಬೆಂಗಳೂರಿಗೆ ಹೊಗುತ್ತಿದ್ದ ನಾವು ನೆನ್ನೆ ದಿನ ನನ್ನ ಕಾರಲ್ಲಿ ಹೋಗಿದ್ದೆವು.ನಾವು ಗಾಬರಿಯಲ್ಲಿರುತ್ತೇವೆ ಎಂದು ರವಿಯನ್ನು ಕಾರು ಡ್ರವೈ ಮಾಡಲು ಕರೆದುಕೊಂಡು ಹೊಗಿದ್ದೆವು.

ಏನು ಎಚ್ಚರಿಕೆ ಇದ್ದರೇನು ಕಣ್ಣು ಮಿಟಕಿಸುವಲ್ಲಿ ಇಬ್ಬರು ಯುವಕರು ಬೈಕ್ ನಲ್ಲಿ ಹಿಂದೆಯಿಂದ ಗುದ್ದಿಯೇ ಬಿಟ್ಟರು.ಒಬ್ಬ ಮೇಲಕ್ಕೆ ಹೋಗಿ ಕೆಳಗೆ ಬಿದ್ದ. ಇನ್ನೋಬ್ಬ ಕಾರಪಕ್ಕದಲ್ಲಿಯೇ ಬಿದ್ದು ಅಯ್ಯೋ ಅಮ್ಮ ಅಮ್ಮ ಎನ್ನುತ್ತಾ ಕೈಯಿಂದ ಅವನ ಕಾಲಿನ ಪಾದದ ಹತ್ತಿರ ಇಡಿದು ನಮ್ಮನ್ನು ನೋಡುತ್ತ ಏನ್ ಸರ್ ಎಂದ. ಕಾರಿನಿಂದ ಇಳಿದು ಹಿಂದು ಮುಂದು ನೋಡಿ ನೋಡಿಗಾಬರಿಯಾದೆವು.

ಬೈಕಲ್ಲಿ ಹಿಂದೆಯೇ ಬರುತ್ತಿದ್ದವರು ನಿಮ್ಮದೇನು ತಪ್ಪಿಲ್ಲ ಹೊಗಿ ಎನ್ನುವ ಶಬ್ದಕೇಳಿಸುತ್ತಿತ್ತು. ಏನನ್ನು ಯೋಚಿಸದೇ ವೆಂಕಟೇಶ್ ಎತ್ತಿಕೋ ಎಂದು ಹೇಳುತ್ತಾ  ನಾವೇ ನಮ್ಮ ಕಾರಲ್ಲಿ ಹಾಕಿಕೊಂಡು ನೀವು ಬನ್ನಿರೆಂದು ಕಾರಲ್ಲಿದ್ದವರನ್ನು ಅಲ್ಲಿಯೇ ಬಿಟ್ಟು ಇನ್ನೋಬ್ಬ ಹುಡುಗನನ್ನು ಕುರಿಸಿಕೊಂಡು  ಮಣಿಪಾಲ್ ಆಸ್ವತ್ರೆಯ ಕಡೆ ಹೊರಟೆವು.

ಕಾರಲ್ಲಿ ನೋವು ತಡೆಯಲಾಗದೇ ಅಮ್ಮ ಅಮ್ಮ ಕಾಲು ನೋವು ನೋವೆಂದು ಅಳುತ್ತಿದ್ದಾನೆ. ಅವನ ಆ ಆಕ್ರಂದನ ನನ್ನ ಕಿವಿಯಲ್ಲಿಯೇ ಜಿನಗುಟ್ಟುತ್ತಿದೆ. ಅವನನ್ನು ಸಂತೈಸುತ್ತಾ ಏನೂ ಆಗಿಲ್ಲ ನಾವು ಇದ್ದೇವೆ ಇಲ್ಲೇಯಿದೆ ಮಣಿಪಾಲ್ ಹೋಗೋಣ. ಭಯಪಡಬೇಡವೆಂದೆ. ನನಗೂ ತಡೆಯಲಾಗದ ದಃಖವಾಗುತ್ತಿದೆ. ಎರಡು ಸಿಗ್ನಲ್ಲುಗಳು ದಾಟುವಾಗಂತೂ ದಾರಿಬಿಡಿ ಎನ್ನುವಂತಿಲ್ಲ ಸುಮ್ಮನಿರಲು ಆಗುತ್ತಿಲ್ಲ ಅವನ ಗೋಳು ನೋಡಲಾಗುತ್ತಿಲ್ಲ.

ನಮ್ಮ ಹಳ್ಳಿಯ ಕಡೆಯಾಗಿದ್ದರೆ ಜನರೇ ದಾರಿ ಬಿಡಿಸುತ್ತಿದ್ದರು. ಇಲ್ಲಿ ಏನೂ ಸಂಬಂಧವಿಲ್ಲದಂತೆ ಇದ್ದಾರೆ. ಛೇ ಏನು ಬೆಂಗಳೂರು ಏನಾದರೇನು ಗೊಣಗುತ್ತಾ ಆಸ್ವತ್ರೆ ತಲಪಿದೆವು. ಅಪಘಾತ. ದೊಡ್ಡ ಆಸ್ವತ್ರೆ ಬೇರೆ. ತಕ್ಷಣ ಸ್ವಂದಿಸುತ್ತಾರೋ ಇಲ್ಲವೋ.  ಕೂಗಿಕೊಂಡೆ ಬನ್ನಿ ಸರ್ ಬೇಗ ಬನ್ನಿ. ಟ್ರಾಲಿ ತನ್ನಿ ಅದು ತನ್ನಿ ಇದು ತನ್ನಿ ಎಲ್ಲಿ ಡ್ರಾಕ್ಟರ್ ಎಂದು ಪೇಚಾಡುತ್ತಿದ್ದೆ. ಕಾರಿನಿಂದ ಇಬ್ಬರು ಇಳಿಸಲು ಪ್ರಯತ್ನಿಸಿದರು.

ಅವನು ಕಾಲು ಬಿಡುತ್ತಿಲ್ಲ ಇವರು ಎತ್ತಲಾಗುತ್ತಿಲ್ಲ. ನಾನೇ ದೂರಿ ಸೊಂಟಕ್ಕೆ ಒಂದು ಕೈ ತೋಡೆಗಳ ಹತ್ತಿರ ಒಂದು ಕೈಹಾಕಿ ಎತ್ತಿ ಕಾಲಲ್ಲಿ ಟ್ರಾಲಿತಳ್ಳಿ ಅದರ ಮೇಲೆ ಕುಳ್ಳರಿಸಿದೆ. ತಳ್ಳಿ ತಳ್ಳಿಯೆಂದು ಒಳಗೊದೆವು. ದುಡ್ಡಿಗಾಗಿ ದೊಡ್ಡ ಖಾಸಗೀ ಆಸ್ವತ್ರೆ ಕಟ್ಟಿರುತ್ತಾರೆ. ಇಲ್ಲಿ ಕೆಲಸ ಮಾಡುವವರು ದುಡ್ಡುಕೊಟ್ಟು ಎಂಬಿಬಿಎಸ್ ಮಾಡಿರುತ್ತಾರೆ. ಮಾನವೀಯತೆಯೇ ಇಲ್ಲದ ಜನ.

ಈ ಯುವಕನ ಗೋಳು ಅವರಿಗೆ ಅರ್ಥವಾಗುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆ. ಅಲ್ಲಿನ ಸಿಬ್ಬಂದಿ ಏನು ಯಾರು ಏನಾಯ್ತು ಕೇಳುತ್ತಲೇ ಸುತ್ತುವರೆದರು. ಅವನ ಕಾಲಿನಿಂದ ಪಾದಬೇರೆಕಡೆ ತಿರಗಿದೆ ಕೈಯಲಿಡದು ಕೊಂಡಿದ್ದಾನೆ. ಕಾಲು ಮುರುದಿರುವುದು ಸ್ವಷ್ಟವಾಗಿ ಕಾಣುತ್ತಿದೆ. ಮಾನಾಡಿಸುತ್ತಲೇ ಕೈಬಿಡಿಸಿ ಸುತ್ತುವರೆದವರಲ್ಲಿ ಮಹಿಳಾ ವೈದ್ಯರು ಕಾಲನ್ನು  ಕಣ್ಣು ಮಿಟಕಿಸುವುದರಲ್ಲಿ ನೇರಕ್ಕೆ ತಿರಗಿಸಿಯೇ ಬಿಟ್ಟರು.

ಅಬ್ಬ ಆ ಕಂಮ್ಮನಿಗೆ ಅದೇಷ್ಟು ನೋವಾಯಿತೋ ಗೋತ್ತಾಗಲಿಲ್ಲ ಅಯ್ಯೋ ಅಮ್ಮ ಎಂದ. ಅಮ್ಮ ಎನ್ನುವ ಆ ಧ್ವನಿ ಕೊಣೆಯಲ್ಲಿ ಆಕಾಶವಾಣಿಯಂತೆ ಮುಳಗುತ್ತಿತ್ತು. ಸರ್ ಇಂಜೇಕ್ಷನ್ ಕೊಡಿ ಎಂದರು ಕೇಳಿಸಿಕಳ್ಳದೆ ಅವರ ಪಾಡಿಗೆ ಅವರು ಚಿಕಿತ್ಸೆನೀಡುತ್ತಿದ್ದಾರೆ. ಬಿಲ್ಲು ಕೇಳಿಲಿಲ್ಲ ಕಾಲಿಗೆ ಕಟ್ಟು ಕಟ್ಟಿದರು. ಎಕ್ಸರೇ ಮಾಡಿಸಲು ಕರೆದುಕೊಂಡು ಹೊದರು. ನಂತರ ಬನ್ನಿ ಅವನ ಹೆಸರು ಹೇಳಿ. ಏನಾಗಿದ್ದೆಂದರು ಸರ್ ನಮ್ಮ ಕಾರಿಗೆ ಹಿಂದೆ ಗುದ್ದಿದ.ಸರಿ ದಾಖಲಿಸಿ ಎಕ್ಸರೇ ಬರಲೆಂದರು. ಇದೇಲ್ಲವನ್ನು ನೋಡಿದ ನನಗೆ. ನನ್ನ ಮೇಲೆಯೇ ಬೇಸರವಾಯ್ತು.

ವೈದ್ಯರು ದೇವರ ಸಮಾನ ಎನ್ನುವ ಹಿರಿಯರ ಮಾತು ಸತ್ಯವೆಂದು. ನಾನು ಆಸ್ವತ್ರೆಗಳ ಮತ್ತು ವೈದ್ಯರ ವಿರುದ್ದ ಮಾಡಿದ ಸುಮಾರು ಹೋರಾಟಗಳನ್ನು ನೆನೆದು ಬೆಸರಪಟ್ಟುಕೊಂಡೆ. ಮಾನವರಲ್ಲಿ ಮಾನವೀಯತೆಯು ಎಲ್ಲಾ ಜಾಗದಲ್ಲಿಯೂ. ಎಲ್ಲರಲ್ಲಿಯೂ ಇರುತ್ತದೆ. ಅವರು ಒಳಗೆ ನಾವು ಹೊರಗೆ. ಆ ಹುಡುಗನ ಜೋತೆ ಕೆಲಸ ಮಾಡುವವರು ಒಬ್ಬೊಬ್ಬರಾಗಿ ಬಂದರು. ನಮ್ಮ ಕಂಪನಿ ಒನರ್ ಬರುತ್ತಾರೆ ಸರ್ ಮಾತಾಡಿಯೆಂದರು.

ಸರಿಯೆಂದು ಕಾಯುತ್ತಿರಬೇಕಾದರೆ ನಮ್ಮ ಎಸ್ ಪಿ ಸಾಹೇಬರು ದೇವರಾಜ್ ಸರ್ ನೆನಪಿಗೆ ಬಂದರು. ಕರೆಮಾಡಿ ವಿವರಣೆ ನೀಡಿದೆ. ಸರಿ ಆ ಲಿಮಿಟ್ ಇನ್ಸಪೆಕ್ಟರ್ ವೆಂಕಟಚಲಪತಿರವರು ಕೋಲಾರ ಕಡೆಯವರೆ. ಬರುತ್ತಾರೆ ಕಳಿಸಿ ಕೊಡುತ್ತೇನೆಂದರು. ಸ್ವಲ್ಪಸಮಯದ ನಂತರ ಕರೆ ಬಂತು ರಾಜಪ್ಪನವರ ನಾನು ಇನ್ಸಪೆಕ್ಟರ್ ದೇವರಾಜ್ ಸರ್ ಹೇಳಿದರು. ನೀವು ವಕ್ಕಲೇರಿ ರಾಜಪ್ಪನವರೇ ಕೇಳಿದರು.

ಹೌದು ಸರ್ ಎನ್ನುವಾಗಲೇ ನಾನು ನಿಮ್ಮ ಪೇಸ್ ಬುಕ್ ಸ್ನೇಹಿತರು. ಮುಳಬಾಗಿಲು ತಾಲ್ಲೂಕಿನ ಉತ್ತನೂರು ಶ್ರೀನಿವಾಸ್ ಮನೆಯಲ್ಲಿ ಮದುವೆಯಾಗಿರುವುದು ಎಂದು ಪರಿಚಯ ಮಾಡಿಕೊಂಡರು. ಗೊತ್ತು ಸರ್ ಅವರ ಮಗ ಅರವಿಂದ್ ನನಗೆ ಬಹಳ ಬೇಕಾದವರು. ನಮ್ಮವರು ಬರುತ್ತಾರೆ ನಾನು ಸ್ವಲ್ಪದರಲ್ಲೇ ಸೇರಿಕೊಳ್ಳುತ್ತೇನೆಂದರು. ಸರಿ ಸರ್ ಎಂದು ಒಳಗೆ ಹೊಗಿ ಆ ಹುಡುಗನ ನೋಡಿದರೆ ಪ್ರಜ್ಞೆಯಿಲ್ಲ ಮಲಗಿದ್ದಾನೆ ಎಲ್ಲಪ್ಪ ನಿಮ್ಮ ಒನರ್ ಇನ್ನೂಬರಲಿಲ್ಲವೇ. ಸರ್ ಬರುತ್ತಿದ್ದಾರೆ ಟ್ರಾಪಿಕ್ ನಲ್ಲಿದ್ದಾರೆ.

ಹೊರಗೆ ಒಬ್ಬ ಪೇದೆ ಸಬ್ ಇನ್ಸಪೆಕ್ಟರ್ ಕರೆಮಾಡಿದರು. ಹೌದು ಸರ್ ನಾನೇ ರಾಜಪ್ಪನೆಂದು ಗಾಬರಿಯಲ್ಲಿ ಹೊರ ಬರುತ್ತಿರುವುದು ನೋಡಿದ ಆ ಹುಡುಗರು ಹಿಂದೆಯೇ ಬಂದರು. ಅವರಿಗೆ ಎಲ್ಲವು ವಿವರಿಸಿದೆ. ಸರಿ ಜಾಗಯಾವುದೆಂದು ಕೇಳಿ ಆ ಜಾಗ ನಮಗೆ ಸೇರುವುದಿಲ್ಲ. ಅವರನ್ನೇ ಕರೆಸುತ್ತೇವೆಂದು ಕರೆ ಮಾಡಿ ಮಾಹಿತಿ ನೀಡಿ ನಮ್ಮನ್ನು ಕಾಫಿ ಕುಡಿಯಲು ಕ್ಯಾನಟೀನ್ ಗೆ ಕರೆದುಕೊಂಡು ಹೊದರು.

ಕತ್ತಲು ರಾತ್ರಿ ಕೊರೆಯುಚಳಿ ಮೊಡಗಳು ವೇಗವಾಗಿ ಚಲಿಸುತ್ತಿವೆ. ಬಣ್ಣ ಬಣ್ಣದ ಲೈಟ್ ಬೆಳಕುಗಳ ಮಧ್ಯೆ ಗಾಡಿಗಳ ಸದ್ದು. ಹೆಜ್ಜೆಗಳು ಎತ್ತಿಡಲಾಗುತ್ತಿಲ್ಲ. ಮನಸ್ಸು ಏನೇನೋ ಅಲೋಚನೆಗಳಲ್ಲಿ ಮುಳಗಿದೆ. ಹುಡುಗನ ಮನೆಗೆ ಸುದ್ದಿ ಮುಟ್ಟಿಸಿರುತ್ತಾರೆ. 15000 ಸಂಬಳ ಪಡೆಯುವ ಹುಡುಗನ ಮನೆಯವರು ಬಡವರೇ ಅಗಿರುತ್ತಾರೆ.ಗೊತ್ತಾಗಿ  ಛೇ ಎಷ್ಟು ನೋವುಪಡುತ್ತಾರೋ. ಭಯಪಡುತ್ತಾರೋ. ಚಿಂತಯಲ್ಲಿ ಮುಳಗಿದ್ದೆ.

ಯಾಕೆ ಈಗಾಯಿತೋ ನನ್ನದು ತಪ್ಪೇ. ನಮ್ಮ ಡ್ರವೈರ್ ರದು ತಪ್ಪೇ. ಅವನದು ತಪ್ಪೇ. ಸರಿತಪ್ಪು ಕಟ್ಟಿಕೊಂಡು ಏನಾಗಬೇಕು ಕಾಲು ಮುರಿದಿದೆ. ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹೊಗಲು ಎಷ್ಟು ಟೈಂ ಬೇಕಾಗುತ್ತದೋ. ಅಲ್ಲಿಯವರಗೆ ಹಾರೈಕೆ ಮಾಡುವವರು ಯಾರು. ಬಡವರಿಗೆ ಈ ರೀತಿಯ ಕಷ್ಟಗಳು ಯಾಕಾದರೂ ಬರುತ್ತವೆ. ಬದುಕಲು ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ಅವರಿಗೆ ದಿಕ್ಕು ಯಾರು.?

ಯೋಚನೆಗಳ ಮೇಲೆ ಯೋಚನೆಗಳು ಮಾಡುತ್ತಾ ಅವನ ಸ್ನೇಹಿತರನ್ನು ನೋಡಿ. ನಾನು ಈ ದಿನ ಈ ಮಟ್ಟಕ್ಕೆ ಬೆಳೆಯಲು ಇಂತಹ ಸ್ನೇಹಿತರೇ ಕಾರಣವೆಂದು ಜ್ಞಾಪಿಸಿಕೊಂಡೆ.  ಕಾಲೇಜ್ ರಜಾ ದಿನಗಳ್ಳಿ ಬಾರ್ ನಲ್ಲಿ ಕೆಲಸ ಮಾಡಿದಾಗಿನಿಂದ ಇದ್ದ ಸ್ನೇಹಿತರ ಗುಂಪಿನಿಂದ ಇಂದಿನವರೆಗಿನ ಸ್ನೇಹಿತರನ್ನು ನೆನೆದುಕೊಂಡು ಕಣ್ಣಂಚಿಗೆ ನೀರು ಜಿನಗುಟ್ಟಿತು. ಕಾಫಿ ಕುಡಿಯಲು ಕ್ಯಾಟೀನಲ್ಲಿ ಇರುವುದನ್ನೇ ಮರೆತಿದ್ದೆ. ಸರ್ ಕಾಫಿ ತೆಗೆದುಕೊಳ್ಳಿ ಎಂದಾಗ ಹೆಚ್ಚರವಾದೆ.

ಅವರು ಇಂತಹ ಅದೆಷ್ಟೋ ಘಟನೆಗಳು ನಿತ್ಯ ನಡೆಯುತ್ತವೆ ಸರ್. ಈ ಬೆಂಗಳೂರಲ್ಲಿ ನಮ್ಮ ಕಿವಿಗಳಿಗೆ ಗಾಡಿಗಳ ಒಡಾಟದ್ದೆ ಸದ್ದು ಕೇಳಿ ಕೇಳಿ ನಾವು ಶಬ್ದಗಳಲ್ಲಿ ಬೆರೆತೋಗಿದ್ದೇವೆ. ದೇವರಾಜ್ ಸರ್ ನಿಮಗೆ ಎಂದರು. ನಮ್ಮವರು ಸರ್. ಒಳ್ಳೆಯವರು ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅಷ್ಟೋತ್ತಿಗೆ ಇನ್ನೊಂದು ಠಾಣೆಯ ಇನ್ಸಪೆಕ್ಟರ್ ಬಂದಿರುವುದಾಗಿ ಕರೆಮಾಡಿದರು. ಆಸ್ವತ್ರೆಯ ಕಡೆ ಹೊರಟೆವು.

ಅಲ್ಲಿ ಹುಡುಗನ ಸುತ್ತುವರೆದು ಮಾತನಾಡುತ್ತಿದ್ದಾರೆ. ನಮಸ್ಕಾರ ಸರ್ ರಾಜಪ್ಪವೆಂದು ಪರಿಚಯ ಮಾಡಿಕೊಂಡೆ. ಹುಡುಗನ ಸ್ನೇಹಿತರು ಕಂಪನಿಯ ಮಾಲೀಕರು ಅಲ್ಲೇ ಇದ್ದರು. ಮಾತನಾಡುತ್ತಾ ಹೊರಗೆ ಬಂದೆವು. ಆ ಹುಡುಗನ ಕಡೆತಿರಗಿ ನೋಡಿದೆ ಇನ್ನೂ ಎಚ್ಚರವಾಗಿಲ್ಲ ಮಾತನಾಡಿಸಲು ಸಾಧ್ಯವಾಗಲಿಲ್ಲ. ಹೊರಗೆ ವಿವರಣೆ ನೀಡಿದೆ ನನ್ನ ವಿಳಾಸ ಮೊಬೈಲ್ ನಂಬರ್ ಪಡೆದುಕೊಂಡರು.ಅಲ್ಲಿ ಒಬ್ಬರು ಕಾರಿಗೆ ಜಾಸ್ತಿ ಡ್ಯಾಮೇಜ್ ಆಗಿದೆಯ ಸರ್ ಎಂದರು.

ಇಲ್ಲ  ಅದರ ಚಿಂತೆಬಿಡಿ ಆ ಹುಡುಗನಿಗೆ ಇನ್ಸುರೇನ್ಸು ಬರಬೇಕಲ್ಲ. ನನ್ನ ಗಾಡಿಗೆ ಇನ್ಸುರೇನ್ಸು ಇದೆ. ಅನುಕೂಲವಾಗಲಿ ಎಂದೆ. ಸರ್ ಸ್ವಲ್ಪ ಎಂದು ಪಕ್ಕಕ್ಕೆ ಕರೆದು ಕೇಸು ಏನೂ ಬೇಡ ಸರ್ ಎಂದರು. ನೀವು ಎನ್ನುವಷ್ಟರಲ್ಲಿ ಕಂಪನಿಯವರು ಸರ್. ಎಲ್ಲಾ ನಮ್ಮ ಹುಡುಗರು ಹೇಳಿದರು. ಅಲ್ಲಪ್ಪ ಆ ಹುಡುಗನಿಗೆ ಅನುಕೂಲವಾಗಬೇಕು ಆಫರೇಷನ್ ಅಂತ ಬೇರೆ ಹೇಳಿದ್ದಾರೆ. ಸರ್ ಕಾರ್ಮಿಕರ ಇ ಎಸ್ ಐ ಆಸ್ವತ್ರೆಯಲ್ಲಿ ನಾವು ಮಾಡಿಸುತ್ತೇವೆ.ನೀವು ಅವರನ್ನು ಆಸ್ವತ್ರೆಗೆ ತಂದು ಸೇರಿಸಿದ್ದೇ ದೊಡ್ಡದು ಎನ್ನುವುದೆ.

ಇದೇನು ನಾವು ಅಂದುಕೊಂಡಿದ್ದೇ ಬೇರೆ.ಮಾಲಿಕರಿಗೆ ಕಾರ್ಮಿಕರ ಕಷ್ಟ ಏನು ಗೊತ್ತು. ಇಷ್ಟು ಹೊತ್ತಾದರು ಬರಲಿಲ್ಲ.ಅವರ ಮಕ್ಕಳಾಗಿದ್ದರೆ ಇರುತ್ತಿದ್ದರೆ ಎಂದು ಕೋಪದಲ್ಲಿದ್ದೆ. ಅವರ ಮಾತುಗಳು ಕೇಳಿ. ಛೇ ಯಾಕೆ ಎಲ್ಲರ ಮೇಲೂ ನನಗೆ ಅನುಮಾನವೋ ಎಂದು ಬೆಸರದಿಂದ ಅವರ ಕಾರ್ಮಿಕರ ಪರ ಕಾಳಜಿ ನೋಡಿ ಕಣ್ಣಲ್ಲಿ ನೀರುತರಿಸಿತು. ನೀವು ಹೊಗಿ ಸರ್ ಏನೂ ಬೇಡ ನಮ್ಮಗಾಡಿ ಪೊಲೀಸರಿಗೆ ಹೇಳಿಕೊಡಿಸಿ ಎಂದರು. ಇನ್ಸಪೆಕ್ಟರ್ ಇರಲಿ ಬಿಡಿ ಸರ್ ನಾವು ಗಾಡಿಕೊಡುತ್ತೇವೆ.

ನಿಮಗೆ ಏನೂ ತೋಂದರೆಯಾಗಿಲ್ಲ ಅಷ್ಟು ಸಾಕೆಂದರು. ನಿಂತಜಾಗದಲ್ಲಿ ಏನು ನಡೆಯುತ್ತಿದೆ.ಇವರೆಲ್ಲಾ ಯಾರು. ಯಾರೆಲ್ಲಾ ಕ್ಷಣಗಳಲ್ಲಿ ಸೇರಿಕೊಂಡೆವು. ಯಾರಲ್ಲೂ ದುರಾಲೋಚನೆಯಿಲ್ಲ. ಎಲ್ಲರೂ ಒಳ್ಳೆಯ ಮನಸ್ಸುಗಳಿಂದ ಮಾತನಾಡುತ್ತಿದ್ದಾರೆ.ಅಷ್ಟರಲ್ಲಿ ನಮ್ಮ ಕಾರು ಅಲ್ಲಿಗೆ ಬಂತು. ನೋಡಿದವರು ಏನಾಗಿಲ್ಲವೇ.ಹುಡುಗನಿಗೆ ಕಾಲು ಹೇಗೆ ಮುರಿಯಿತೆಂದರು. ಕಾರು ಹಿಂದೆ ಗುದ್ದಿದ ರಬಸಕ್ಕೆ ಒಬ್ಬ ಮೇಲೆ ಹೋಗಿ ಕಾರು ಮುಂದೆ ಬಿದ್ದ.

ಈ ಹುಡುಗನ ಶೂ ಬ್ರೇಕ್ ನಲ್ಲಿ ಸಿಕ್ಕಿದರಿಂದ ಕಾಲು ಎಳೆದ ಆಗ ಕಾಲಿನ ಪಾದದ ಮೇಲಿನ ಮೂಳೆ ಮುರಿಯಿತೆಂದೆ. ಎಲ್ಲರು ಹೌದೇ ಛೇ ಎನ್ನುತ್ತ ಮೌನವಾದೆವು. ನೆರೆದಿದ್ದವರೆಲ್ಲಾ ಮುರುಕಪಟ್ಟುಕೊಂಡರು. ಸರಿ ಏನೂ ಆಗಿಲ್ಲಿವಲ್ಲ ಅಷ್ಟು ಸಾಕು.ಕಂಪನಿಯವರು ನೀವು ಏನೂ ಚಿಂತೆಮಾಡಬೇಡಿ ಸರ್ ನಾವು ಆ ಹುಡುಗನಿಗೆ ಆಪ್ರೇಷನ್ ಮಾಡಿಸುವ ಕೆಲಸ ನಮ್ಮದೆಂದರು.

ನಾವು ಕಾರ್ ಹತ್ತಿದೆ ಮನಸ್ಸು ಒಪ್ಪಲಿಲ್ಲ ಇಳಿದು ಇನ್ಸಪೆಕ್ಟರ್ ರವರಿಗೆ ಧನ್ಯವಾದ ತಿಳಿಸಿ ಒನರ್ ರವರಿಗೆ ಹುಡುಗ ಹುಷಾರ್ ಸರ್ ಎಂದು ಇನ್ನೊಬ್ಬ ಹುಡುಗನ ಕೈಗೆ ಒಂದು ಹತ್ತು ಸಾವಿರ ನೀಡಲು ಹೊದೆ ಬಿಡಲಿಲ್ಲ ಬೇಡವೆಂದರೆ ಬೇಡ ನಿಮ್ಮ ಮಾತುಸಾಕು ಎಂದು ಮಾಲಿಕರು ನಿರಾಕರಿಸಿ ಗೌರವಯುತವಾಗಿ ಕಳಿಸಿದರು. ಕಾರಲ್ಲಿ ಕುಳಿತು ಬರಬೇಕಾದರೆ ಯಾವ ಕ್ಷಣದಲ್ಲಿ ಎನಾಗುತ್ತದೆಂದು ಯಾರಿಗೆ ಗೊತ್ತು. ಅದರೆ ಜನ ಇವರು ಯಾರು. ಯಾವ ಜಾತಿ ಧರ್ಮದವರು. ಯಾವ ಊರು ರಾಜ್ಯ ದೇಶದವರು ಏನೂ ನೋಡಲ್ಲ.

ನಮ್ಮಿಂದ ಎನು ಸಹಾಯವಾಗುತ್ತದೋ ಅದನ್ನು ಮಾಡುತ್ತಾರೆ.ಇಂತಹ ಹೃದಯವಂತ ಮನಸ್ಸುಗಳನ್ನು ಗುರ್ತಿಸಬೇಕೆಂದುಕೊಂಡು ಈ ಕಾಲದಲ್ಲಿ ಈ ಬೆಂಗಳೂರಲ್ಲಿ ಇಂತವರು ಇದ್ದಾರಲ್ಲವೆಂಬ ಸಮಾದನದಿಂದ ಬಂದೆವು. ಆ ಹುಡುಗನ ಆಕ್ರಂದನ ಅಮ್ಮ ಎನ್ನುವ ಶಬ್ದ ನನ್ನಕರುಳು ಹಿಂಡುತ್ತಿದೆ. ಬೇಗ ಗುಣಮುಖನಾದರೆ ಸಾಕೆಂದು ಬರೆಯಲೇ ಬೇಕು ಮರೆಯಬಾರದೆಂದು ಬರೆದೆ. ಮಂಗಳೂರಿನ ಹುಡುಗರು. ಕಾಲು ಮುರಿದವನು ಚೇತನ್.ಇನ್ನೋಬ್ಬ ಹುಡುಗ ಧನುಷ್.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!