• Wed. May 1st, 2024

PLACE YOUR AD HERE AT LOWEST PRICE

ಕೇಂದ್ರ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಕುರಿತು ಸಾರ್ವಜನಿಕರ ಪ್ರತಿಕ್ರಿಯೆ :

ಕೋಲಾರ, ಫೆ.೦೧ : ಕೇಂದ್ರ ಬಿಜೆಪಿ ಸರ್ಕಾರ ತನ್ನ ಎರಡನೇ ಅವಧಿಯ ಕೊನೆಯ ಬಜೆಟ್ ಕುರಿತು ಕೋಲಾರ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರತಿನಿಧಿಸುವ ಮುಖಂಡರುಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಇಂತಿದೆ;

ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳು ದೇಶಕ್ಕೆ ಆರ್ಥಿಕ ಚೈತನ್ಯ ನೀಡುವ ಶಕ್ತಿಯಾಗಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಚಕಾರವೆತ್ತದಿರುವುದು ದೇಶದ ಶ್ರಮಿಕ ವರ್ಗಕ್ಕೆ ನಿರಾಶಾದಾಯಕವಾಗಿದೆ. ಧರ್ಮಕ್ಕೆ ನೀಡಿದಷ್ಟು ಆಧ್ಯತೆ ಕೈಗಾರಿಕೆ, ಉದ್ಯೋಗ ಸೃಷ್ಟಿ, ನಿರುದ್ಯೋಗ ನಿವಾರಣೆಗೆ ನೀಡದೆ, ಜನಾಧೇಶ ನೀಡುವ ಮುಂಚಿತವಾಗಿಯೇ ಹೇಗಾದ್ರು ಮಾಡಿ ನಾವೇ ಗೆಲ್ಲುತ್ತೇವೆಂಬ ಸರ್ವಾಧಿಕಾರಿ ಧೋರಣೆಯೊಂದಿಗೆ ಮದ್ಯಂತರ ಬಜೆಟ್ ಮಂಡಿಸಿ, ಚುನಾವಣೆಯಲ್ಲಿ ಜನಾದೇಶ ನೀಡುವ ಮುಂಚಿತವಾಗಿ ಜನರ ಅಭಿಪ್ರಾಯಕ್ಕೆ ಅಗೌರವ ತೋರಿದ್ದಾರೆ. ಒಟ್ಟಾರೆ ಈ ಬಜೆಟ್ ಶ್ರಮಿಕ ವರ್ಗದ ವಿರೋಧಿ ನಿರಾಶಾದಾಯಕ ಬಜೆಟ್.

– ಲಕ್ಷಿö್ಮನಾರಾಯಣ. ಜಿಲ್ಲಾಧ್ಯಕ್ಷರು, ಪ್ರದೇಶ ಜಿಲ್ಲಾ ಕಾಂಗ್ರೆಸ್ ಸಮಿತಿ.

ಕೇಂದ್ರ ಸರ್ಕಾರದ ಮದ್ಯಂತರ ಬಜೆಟ್ ಜನಪರ, ಮಹಿಳಾಪರ, ಮಕ್ಕಳಪರ, ಕಾರ್ಮಿಕರ ಪರವಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ೫೫ ಲಕ್ಷ ಉದ್ಯೋಗ ಸೃಜಿಸಲಾಗಿದೆ. ಆತ್ಮನಿರ್ಭರ ಯೋಜನೆಯಡಿ ಒಂದು ಕೋಟಿ ಮಹಿಳೆಯರನ್ನು ಲಕ್ಷಧಿಪತಿ ದೀಧಿ ಯೋಜನೆಯನ್ನು ರೂಪಿಸಲಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ದೇಶದಲ್ಲಿ ೩ ಕಡೆ ಕಾರಿಡಾರ್‌ಗಳ ಪ್ರಸ್ತಾಪ ಮಾಡಲಾಗಿದೆ. ಮೂಲ ಸೌಕರ್ಯಕ್ಕಾಗಿ ೧೧ ಲಕ್ಷ ೧೧೧ ಸಾವಿರ ಕೋಟಿ ಅನುದಾನ ನೀಡಲಾಗಿದೆ. ಆಯುಶ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ಅಂಗನವಾಡಿ ಕಾರ್ಯಕರ್ತರಿಗೆ, ಆಶಾಕಾರ್ಯಕರ್ತರಿಗೆ ಹಾಗೂ ಅವರ ಸಹಾಯಕಿಯರಿಗೆ ವಿಸ್ತರಿಸಲಾಗಿದೆ. ೭ ಲಕ್ಷ ವರೆಗಿನ ಆದಾಯದವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕಾರ್ಪೋರೇಟ್ ತೆರಿಗೆಯನ್ನು ಶೇ.೨೨ಕ್ಕೆ ಇಳಿಸಲಾಗಿದೆ. ಸಂಶೋಧನೆ ಹಾಗೂ ಅಭಿವೃದ್ದಿಗೆ ೧೧ ಲಕ್ಷ ಕೋಟಿ ನಿಧಿ ಸ್ಥಾಪಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಗೆ ೭೫ ಸಾವಿರ ಕೋಟಿ ಮೀಸಲಿಡಲಾಗಿದ್ದು, ರಾಜ್ಯಗಳಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗೆ ಬಡ್ಡಿ ರಹಿತ ಸಾಲ ಘೋಷಣೆ ಮಾಡಲಾಗಿದೆ. ಒಟ್ಟಾರೆ ಈ ಬಾರಿಯ ಬಜೆಟ್ ಜನಪರ, ಮಹಿಳಾ ಪರ, ಮಕ್ಕಳ ಪರ, ಕಾರ್ಮಿಕಪರವಾಗಿದೆ.

ಎಸ್. ಮುನಿಸ್ವಾಮಿ, ಸಂಸದರು, ಕೋಲಾರ ಮೀಸಲು ಲೋಕಸಭಾ ಕ್ಷೇತ್ರ,

ಇದೊಂದು ದೂರದೃಷ್ಠಿ ಇಲ್ಲದ ನಿರುದ್ಯೋಗ ಸಮಸ್ಯೆ ಬಗೆ ಹರಿಯದ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡದ, ಕರ್ನಾಟಕ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷö್ಯ ಮಾಡಲಾಗಿದೆ. ಈ ಹಿಂದಿನ ಬಜೆಟ್‌ನಲ್ಲಿ ಕೃಷ್ಣ ಮೇಲ್ದಂಡೆ ನೀರಾವರಿಗಾಗಿ ೩೬೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಇದುವರೆಗೂ ಒಂದೇ ಒಂದು ನಯಾಪೈಸೆ ಸಹ ಬಿಡುಗಡೆ ಮಾಡಲಿಲ್ಲ. ಈ ಹಿಂದೆ ಮಂಡಿಸಿದ ಬಜೆಟ್‌ನಲ್ಲಿ ಕೃಷ್ಣ ಮೇಲ್ ದಂಡೆ ನೀರಾವರಿಗಾಗಿ ೩೬೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು ಆದರೆ ಇದುವರೆಗೂ ಒಂದೇ ಒಂದು ನಯಾ ಪೈಸೆ ಸಹ ಬಿಡುಗಡೆ ಮಾಡದೇ. ಸಂಪೂರ್ಣವಾಗಿ ದಕ್ಷಿಣ ಭಾರತವನ್ನೇ ಕಡೆಗಣಿಸಿರುವ ರೈತ ವಿರೋಧಿ ಬಜೆಟ್ ಇದಾಗಿದೆ.

ರಾಮುಶಿವಣ್ಣ, ಜಿಲ್ಲಾಧ್ಕಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ( ಪ್ರೊ.ನಂಜುoಡಸ್ವಾಮಿ ಸ್ಥಾಪಿತ)


ಗ್ಯಾರಂಟಿಗಳ ಓಲೈಕೆ ಮಾಡವ ಬಜೆಟ್ ಆಗಿರದೆ, ದೇಶದ ಸಮಗ್ರ ಅಭಿವೃದ್ದಿ ಹಾಗೂ ಭವಿಷತ್ತಿನ ಹಿತದೃಷ್ಟಿಯಿಂದ ಕೂಡಿದ ಬಜೆಟ್ ಇದಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿ, ಬಡವರು, ರೈತರು ಹೈನುಗಾರಿಕೆ ಮೇಲೆ ಅವಲಂಬಿಸಿದ ಕುಟುಂಬಗಳ ಅಭಿವೃದ್ದಿ ಬಜೆಟ್ ಕೇಂದ್ರ ಸರ್ಕಾರ ಮಂಡಿಸಿದೆ.

– ಸಿ.ಎಂ.ಆರ್. ಶ್ರೀನಾಥ್. ಜೆಡಿಎಸ್ ಮುಖಂಡರು.

ಕಾರ್ಪೋರೇಟ್ ಶಕ್ತಿಗಳ ಬಲವರ್ಧನೆಗಾಗಿ ಮಂಡಿಸಿದ ಕಾರ್ಪೋರೇಟ್ ಬಜೆಟ್ ಇದಾಗಿತ್ತು. ಎನ್.ಆರ್.ಇ.ಜಿ.ಎ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷö್ಯ ಮಾಡಲಾಗಿದೆ. ಕೃಷಿಕೂಲಿಕಾರ ಬಗ್ಗೆ ಚಕಾರವೆತ್ತಿಲ್ಲ, ಯುವಕರು ಹಾಗೂ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಯಾವುದೇ ಪ್ರಸ್ತಾಪವಿಲ್ಲ, ಕೋಲಾರ ಜಿಲ್ಲೆ ಮತ್ತು ಕರ್ನಾಟಕಕ್ಕೆ ಯಾವುದೇ ಒತ್ತು ನೀಡಿಲ್ಲ, ಮಹಿಳೆಯರ ಪರವಾದ ಯೋಜನೆಗಳ ಬಗ್ಗೆ ಎನೇನೂ ಹೇಳಿಲ್ಲ, ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆ ಅನುಷ್ಠಾನವೂ ಆಗಿಲ್ಲ, ಹಣವೂ ಬಿಡುಗಡೆ ಮಾಡಿಲ್ಲ, ಒಟ್ಟಾರೆ ಕಾರ್ಪೋರೆಟ್‌ಗಳನ್ನು ಸಂತೃಪ್ತಿಪಡಿಸುವ ಬಂಡವಾಳ ಶಾಹಿ ಬಜೆಟ್ ಇದಾಗಿದ್ದು ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೃಷಿ ಕೂಲಿ ಕಾರ್ಮಿಕರನ್ನ ಕಡೆಗಣಿಸಲಾಗಿದೆ.

– ವಿ.ಗೀತಾ, ರಾಜ್ಯ ಮಹಿಳಾ ಮುಖಂಡರು, ಜನವಾದಿ ಮಹಿಳಾ ಸಂಘಟನೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!