• Fri. May 3rd, 2024

PLACE YOUR AD HERE AT LOWEST PRICE

೧೦೦ ಕೋಟಿ ವೆಚ್ಚದಲ್ಲಿ ಕೋಲಾರ ನಗರದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ, ೪೫ ದಿನಗಳಲ್ಲಿ ಡಿಪಿಆರ್ ಮುಗಿಸಲು ಸಿದ್ದತೆ : ಜಿಲ್ಲಾಧಿಕಾರಿ ಅಕ್ರಂಪಾಷ.

ಕೋಲಾರ, ಫೆ.೦೭ : ಕೋಲಾರ ನಗರದಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲು ಸರ್ಕಾರ ೧೦೦ ಕೋಟಿ ನೀಡಲು ಮುಂದಾಗಿದ್ದು, ೪೫ ದಿನಗಳಲ್ಲಿ ನಗರಾಭಿವೃದ್ದಿ ಪ್ರಾಧಿಕಾರ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಜಂಟಿ ನೇತೃತ್ವದಲ್ಲಿ ಸರ್ವೆ ಕಾರ್ಯ ಮುಗಿಸಿ ಡಿಪಿಆರ್ ವರದಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋಲಾರ ಜಿಲ್ಲಾ ಕೇಂದ್ರ ಬೆಂಗಳೂರಿಗೆ ಅತಿ ಸಮೀಪವಿದ್ದು, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರದ ಒತ್ತಡದಿಂದ ಜನರಿಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪಲು ತೊಂದರೆ ಆಗುತ್ತಿದೆ. ಹೆಚ್ಚಿದ ವಾಹನ ಸಂಚಾರದ ಒತ್ತಡದ ಪರಿಣಾಮ ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಇತ್ತೀಚಿಗೆ ಅಪಘಾತಗಳ ಸಂಖ್ಯೆಯೂ ಏರುತ್ತಿದೆ. ಈ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಮಾನ್ಯ ಉಸ್ತುವಾರಿ ಸಚಿವರು ಸರ್ಕಾರದೊಂದಿಗೆ ಮಾತನಾಡಿ, ಇದೀಗ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ೧೦೦ ಕೋಟಿ ರೂಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ.

imaginary picture

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇಲೆ ಶೀಘ್ರದಲ್ಲೇ ಡಿಪಿಆರ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ವರ್ತುಲ ರಸ್ತೆ ನಿರ್ಮಾಣದಿಂದ ನಗರದಲ್ಲಿ ವಾಹನ ಸಂಚಾರ ಸುಗಮಗೊಳ್ಳುತ್ತದೆ ಅಲ್ಲದೆ, ಹಲವು ಕುಟುಂಬಗಳು ನಗರದ ಹೊರಭಾಗದಲ್ಲಿ ವಾಸದ ಮನೆಗಳನ್ನು ನಿರ್ಮಿಸಿಕೊಳ್ಳುವುದರಿಂದ ಕೋಲಾರ ನಗರ ಅಭಿವೃದ್ದಿಯೆಡೆಗೆ ಸಾಗಲಿದೆ. ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ಸರ್ಕಾರದಿಂದ ಪೂರೈಸಲಾಗುತ್ತದೆ ಎಂದು ಹೇಳಿದರು.

ಮತ್ತೊಂದು ಯೋಜನೆಯಾದ ಚಿಕ್ಕಬಳ್ಳಾಪುರ ರಸ್ತೆಯ ಸಂಗೊoಡಹಳ್ಳಿಯಿ0ದ ಹಳೇ ಬಸ್ ನಿಲ್ದಾಣ ಮೂಲಕ ಬಂಗಾರಪೇಟೆ ಮೇಲ್ಸೇತುವೆ ಜಿಗ್ ಜಾಗ್ ವರೆಗೂ ಟೆಂಡರ್ ಶೋರ್ ಮಾದರಿಯ ರಸ್ತೆಯನ್ನು ನಿರ್ಮಿಸಲು ಈಗಾಗಲೇ ಡಿಪಿಆರ್ ಸಲ್ಲಿಸಲಾಗಿದೆ. ಈ ರಸ್ತೆಯಲ್ಲಿ ಎರಡು ಬದಿ ಪಾದಚಾರಿ ಪುಟ್‌ಪಾತ್, ರಸ್ತೆಯ ವಿಭಜಕದಲ್ಲಿ ಸಸ್ಯಗಳು, ರಸ್ತೆಯಲ್ಲಿ ಸಿಗುವ ವೃತ್ತಗಳ ಸುತ್ತಲೂ ಹಸಿರು ಉದ್ಯಾನಗಳು, ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಹಳೇ ಬಸ್ ನಿಲ್ದಾಣದಲ್ಲಿರುವ ಗಡಿಯಾರ ಗೋಪುರವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡು ಅದನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಗೊಳಿಸಿ, ಅಂಗಡಿ ಮುಂಗಟ್ಟುಗಳ ಸಮೇತ ಖಾಸಗಿ ಬಸ್‌ಗಳ ನಿಲುಗಡೆಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲು ಡಿಪಿಆರ್ ಸರ್ಕಾರಕ್ಕೆ ಕಳುಹಿಸಲಾಗಿದೆ.

ಇನ್ನೂ ಮುಂಬರುವ ಬಜೆಟ್ ಅಧಿವೇಶನಕ್ಕೆ ಜಿಲ್ಲೆಯ ಯುವಕರಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸರ್ಕಾರಿ ವೈದ್ಯಕೀಯ ಕಾಲೇಜು, ಮಾವು ಸಂಸ್ಕರಣ ಘಟಕ, ನಗರಸಭೆ ಅಭಿವೃದ್ದಿಗೆ ನಿಧಿ, ಕುಡಿಯುವ ನೀರು ಮೊದಲಾದವುಗಳ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶೇ.೫೦ರಷ್ಟು ಸಿಬ್ಬಂದಿ ಕೊರತೆಯಿದೆ:
ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳನ್ನೂ ಒಳಗೊಂಡoತೆ ಶೇ.೫೦ರಷ್ಟು ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಮತ್ತೊಂದೆಡೆ ಕಾಲೇಜು ಶಿಕ್ಷಣ ಇಲಾಖೆಯಲ್ಲೂ ಉಪನ್ಯಾಸಕರ ಕೊರತೆ ಇದ್ದು, ಸಂಬoಧಪಟ್ಟ ಆಯುಕ್ತರ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರವೇ ಖಾಯಂ ಉಪನ್ಯಾಸಕರನ್ನು ನೇಮಿಸಲಾಗುವುದು ಎಂದು ಆಯುಕರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಕಾಲ ಸೇವೆಯಲ್ಲಿ ಕೋಲಾರ ೪ನೇ ಸ್ಥಾನಕ್ಕೇರಿದೆ:
ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಸಿಬ್ಬಂದಿಯ ಕೊರತೆಯ ನಡುವೆಯೂ ಸಕಾಲ ಸೇವೆಯಲ್ಲಿ ೨೬ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಕಳೆದ ಆರು ತಿಂಗಳಲ್ಲಿ ಸಾವಿರರು ಅರ್ಜಿಗಳು ಬಂದಿದ್ದವು ಎಲ್ಲಾ ಅರ್ಜಿಗಳ ಕೆಲಸಗಳನ್ನು ಪೂರ್ಣ ಮಾಡುವ ಮೂಲಕ ರಾಜ್ಯದಲ್ಲೇ ೪ನೇ ಸ್ಥಾನಕ್ಕೇರಿದೆ. ಇದು ದಾಖಲೆಯಾಗಿದೆ. ಇದೇ ರೀತಿ ವಕ್ಕಲೇರಿ ನಾಡ ಕಚೇರಿ ಸಹ ಭೂಮಿಗೆ ಸಂಬAಧಪಟ್ಟ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಮೂಲಕ ರಾಜ್ಯದಲ್ಲಿ ೩ನೇ ಸ್ಥಾನ ಪಡೆದಿದೆ ಎಂದರು.

ಪವತಿ ಖಾತಾ ಆಂದೋಲನ ಯಶಸ್ವಿ:
ಪವತಿ ಖಾತೆ ಆಂದೋಲನ ಈವರೆಗೆ ಎರಡು ಮಾಡಲಾಗಿದೆ. ೨೧೨೪ ಅರ್ಜಿಗಳು ಬಂದಿದ್ದವು, ೧೭೭೧ ಅರ್ಜಿಗಳು ಖಾತೆ ಮಾಡಿಕೊಟ್ಟಿದ್ದೇವೆ. ೨೫೦೦ ಅರ್ಜಿಗಳು ೨೧ ದಿನಗಳಲ್ಲಿ ಅವುಗಳನ್ನೂ ಇತ್ಯರ್ಥ ಮಾಡಲಾಗುವುದು. ಸಮಯ ವ್ಯರ್ಥ ಮಾಡದೇ ಕೆಲಸ ಮಾಡಿಕೊಡಲಾಗುವುದು. ಮದ್ಯವರ್ತಿಗಳಿಗೆ ಅವಕಾಸ ಇರುವುದಿಲ್ಲ. ಸಮಯಕ್ಕೆ ಅವರ ದಾಖಲೆಗಳು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಇ-ಆಸ್ತಿ ಅಭಿಯಾನಕ್ಕೆ ಚಾಲನೆ :
ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಲವು ದೂರುಗಳು ಬಂದಿದ್ದ ಹಿನ್ನಲೆಯಲ್ಲಿ, ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿಯೊAದಿಗೆ ಚರ್ಚಿಸಿ, ಒಂದು ತಿಂಗಳ ಕಾಲ ಇ-ಖಾತಾ ಆಂದೋಲನ ನಡೆಸಲಾಗುತ್ತಿದೆ. ( ಈ ಆಸ್ತಿ) ಫೆ.೧೨ನೇ ತಾರೀಖಿನಿಂದ ಮಾ.೧೨ನೇ ತಾರೀಖಿನವರೆಗೆ ನಡೆಲಿದೆ. ಇದೇ ವೇಳೆ ತೆರಿಗೆ ಪಾವತಿ ಬಗ್ಗೆ ಅರಿವನ್ನು ಸಹ ಮೂಡಿಸಲಾಗುವುದು. ಶೀಘ್ರಗತಿಯಲ್ಲಿ ಅರ್ಜಿಗಳನ್ನು ವಿಲೇ ಮಾಡಲಾಗುವುದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ ಆಗಿದೆ :
ಚುನಾವಣೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ೧೬ ನೋಡಲ್ ಆಫೀರ‍್ಸ್ , ಸೆಕ್ಟರ್ ಆಫೀಸರ್, ಎಫ್.ಎಸ್.ಟಿ. ಎಸ್.ಎಸ್.ಟಿ, ವಿಂಗ್, ಸೆಕ್ಟರ್ ಮ್ಯಾಜಿಸ್ಟೆçÃಟ್‌ಗಳನ್ನು ಮಾಡಲಾಗಿದೆ. ಆರೋಗ್ಯಕರ ಮತದಾರರ ಪಟ್ಟಿಯನ್ನು ತಯಾರಿ ಮಾಡಲಾಗಿದೆ. ಮತದಾನದಿಂದ ವಂಚಿತರಾಗಿದ್ದ ಮತದಾರರನ್ನು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಆರ್ಜಿ ಸಲ್ಲಿಸಿದ ಯುವ ಮತದಾರರ ಪಟ್ಟಿಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ ೧೦೨೨ ಮಹಿಳಾ ಮತದಾರರು ಇದ್ದು, ಇದು ಲಿಂಗಾನುಪಾತ ಸಮತೋಲಿತ ಪಟ್ಟಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು ೪೦ ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!