• Fri. May 3rd, 2024

PLACE YOUR AD HERE AT LOWEST PRICE

ಕೋಲಾರ,ಫೆ.೦೯ : ಮುಸ್ಲಿಂ ಬಾಂಧವರ ಎರಡು ದಿನಗಳ ಇಜ್ತೆಮಾ ಧರ್ಮ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ನಗರದ ಹೊರವಲಯದ ಬೆತ್ತನಿ ಗ್ರಾಮದ ಸಮೀಪ ಆಯೋಜಿಸಲಾಗಿದ್ದ ಇಜ್ತೆಮಾ ಧರ್ಮ ಸಮ್ಮೇಳನಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ಧಾರ್ಮಿಕ ಗುರುಗಳಿಂದ ಖುರಾನ್ ಪ್ರವಚನ ಮತ್ತು ದಿನಕ್ಕೆ ಐದು ಹೊತ್ತಿನ ನಮಾಜ್ ಸೇರಿದಂತೆ ಹಲವು ಆಚರಣೆಗಳು ನಡೆದವು.

ಇಜ್ತೆಮಾ ದಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿರುವ ಯುವಕರು ,ವೃದ್ದರು ,ಮಕ್ಕಳಾಧಿಯಾಗಿ ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಧಾರ್ಮಿಕ ಸಮ್ಮೆಳನ ಇಜ್ತೆಮಾ ಇಲ್ಲಿನ ಬೆತ್ತನಿ ಗ್ರಾಮದಲ್ಲಿ ಬೃಹತ್ ಪೆಂಡಾಲ್ ಅಡಿ ಸಮಾವೇಶಗೊಂಡ ಜನರು ಶುಕ್ರವಾರದ ಮದ್ಯಾಹ್ನದ ಪ್ರಾರ್ಥನೆ ಸಲ್ಲಿಸಲು ಸಕಲ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ೭೫ರ ಪಕ್ಕದಲ್ಲಿರುವ ಇಜ್ತೆಮಾ ಸಮ್ಮೇಳನ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಸಂಚಾರ ದಟ್ಟಣೆ ನಿವಾರಿಸಿ ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸರು ಮತ್ತು ಸ್ವಯಂ ಸೇವಕರು ಹರಸಾಹಸ ಪಡಬೇಕಾಯಿತು. ಸಂಜೆ ಐದು ಗಂಟೆಯ ನಮಾಜ್ ನಂತರ ಸಮ್ಮೇಳನ ಮುಕ್ತಾಯಗೊಂಡಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!