• Mon. Apr 29th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬೀಜೋತ್ಪಾದನೆ ಮಾಡಲು ರೈತರು ಮುಂದೆ ಬಂದರೆ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಹೆಚ್.ಎಸ್.ದೇವರಾಜ ತಿಳಿಸಿದರು.

ಅವರು ತಾಲ್ಲೂಕಿನ ಮಾಗೊಂದಿ ಗ್ರಾಮದ ಪ್ರಗತಿಪರ ರೈತ ಶ್ರೀರಾಮರೆಡ್ಡಿಯವರು ಬೀಜ ನಿಗಮದ ಪ್ರೋತ್ಸಾಹದಿಂದ ಬೆಳೆಯುತ್ತಿರುವ ಎಂ.ಎಲ್-365 ತಳಿಯ ರಾಗಿಯನ್ನು ಬಿತ್ತನೆ ಬೀಜ ಉತ್ಪಾದನೆ ಸಲುವಾಗಿ ಬೆಳೆಯುತ್ತಿರುವ ಹೊಲಕ್ಕೆ ಭೇಟಿ ನೀಡಿ ಮಾತನಾಡಿದರು.

ಎಂ.ಎಲ್-365 ರಾಗಿ ತಳಿಯು ಉತ್ತಮವಾದ ತಳಿಯಾಗಿದ್ದು ಆ ತಳಿಯನ್ನು ಹೆಚ್ಚಿನ ರೈತರಿಗೆ  ಪರಿಚಯ ಮಾಡಿಸುವ ಕಾರ್ಯ ನಡೆಯುತ್ತಿದ್ದು, ಅದರ ಅಂಗವಾಗಿ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿಯಲ್ಲಿ ಶ್ರೀರಾಮರೆಡ್ಡಿ ಹೊಲದಲ್ಲಿ ಬೆಳೆಯ ಬೀಜೋತ್ಪಾದನೆ ನಡೆಯುತ್ತಿದೆ.

ರೈತ ಶ್ರೀರಾಮರೆಡ್ಡಿಯವರು ನಮ್ಮ ನಿಗಮದ ಮಾರ್ಗದರ್ಶನದಂತೆ ರಾಗಿ ಬೆಳೆಯನ್ನು ಉತ್ತಮವಾಗಿ ಬೆಳೆಯುತ್ತಿದ್ದು ಹೆಚ್ಚಿನ ಇಳುವರಿ ಬರುವ ಸಾಧ್ಯತೆ ಇದೆ.  ಇವರ ಬೆಳೆಯಿಂದ ಉತ್ತಮ ಬೀಜ ಲಭಿಸಲಿದ್ದು ಹೆಚ್ಚಿನ ರೈತರಿಗೆ ಈ ಬಿತ್ತನೆ ಬೀಜ ವಿತರಿಸಲು ಅನುಕೂಲವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಎಂ.ಎಲ್-365 ತಳಿಯ ರಾಗಿಯನ್ನು ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ರೈತರಿಗೆ ವಿತರಿಸಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದ ಅವರು ಜಿಲ್ಲೆಯ ರೈತರು ನಮ್ಮ ಬಿತ್ತನೆ ಬೀಜ ಪಡೆದುಕೊಂಡು ಈ ತಳಿಯ ರಾಗಿಯನ್ನು ಬೆಳೆದು ಹೆಚ್ಚಿನ ಲಾಭಗಳಿಸಬೇಕು ಎಂದು ಮನವಿ ಮಾಡಿದರು.

ಎಂ.ಎಲ್-365 ತಳಿಯ ರಾಗಿ ಬೀಜೋತ್ಪಾದನೆ ಮಾಡಲು ರೈತರು ಮುಂದೆ ಬಂದರೆ ಅವರಿಗೆ ಬಿತ್ತನೆ ಬೀಜ ಒದಗಿಸಿ ಮಾರ್ಗದರ್ಶನ ನೀಡುತ್ತೇವೆ. ಇದರ ಜೊತೆಗೆ ತೊಗರಿ ಬೆಳೆಯ ಬೀಜೋತ್ಪಾದನೆ ಮಾಡಲು ಆಸಕ್ತಿವಹಿಸುವ ರೈತರಿಗೆ ತೊಗರಿ ಬಿತ್ತನೆ ಬೀಜ ನೀಡುತ್ತೇವೆ ಎಂದರು.

ನಮ್ಮಲ್ಲಿ ಎಂ.ಎಲ್-365 ತಳಿಯ ರಾಗಿ ಬಿತ್ತನೆ ಬೀಜ ಪಡೆದು ಬೀಜೋತ್ಪಾದನೆ ಮಾಡುವ ರೈತರಿಂದ ಕ್ವಿಂಟಾಲ್ ಗೆ 4600ರೂಗೆ ನಾವೆ ರಾಗಿಯನ್ನು  ಖರೀದಿ ಮಾಡಿಕೊಳ್ಳುತ್ತೇವೆ. ಇದರಿಂದ ರೈತನಿಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.

ನಮ್ಮ ನಿಗಮದಿಂದ ಬೀಜರಾಜ ಎಂಬ ಬ್ರಾಂಡ್ ನಲ್ಲಿ ಕಳೆದ 50 ವರ್ಷಗಳಿಂದ ಉತ್ತಮವಾದ ಬಿತ್ತನೆ ಬೀಜ ನೀಡುತ್ತಿದ್ದೇವೆ. ನಮ್ಮಲ್ಲಿ ಬೀಜ ಪಡೆದುಕೊಂಡು ಬೆಳೆ ಮಾಡಿದರೆ ರೈತನಿಗೂ ಉತ್ತಮ ಲಾಭವಾಗುತ್ತದೆ ಮತ್ತು ನಿಗಮಕ್ಕೂ ಲಾಭವಾಗುತ್ತದೆ ಎಂದರು.

ನಮ್ಮ ನಿಗಮದಿಂದ ಬಿತ್ತನೆ ಬೀಜ ಪಡೆದು ಬೀಜೋತ್ಪಾದನೆ ಮಾಡುವ ರೈತರ ಜಮೀನಿಗೆ ನಮ್ಮ ನಿಗಮದ ತಾಂತ್ರಿಕ ತಂಡ ಕಾಲ ಕಾಲಕ್ಕೆ ಭೇಟಿ ನೀಡಿ ಬೆಳೆಯನ್ನು ಪರೀಕ್ಷಿಸಿ ಬೆಳೆಯು ಉತ್ತಮಗೊಳ್ಳಲು ಸಲಹೆಗಳನ್ನು ನೀಡುತ್ತೇವೆ. ಇವರಿಂದ ಖರೀದಿಸಿದ ರಾಗಿಯನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದವತಿಯಿಂದ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಹೆಚ್.ಎಸ್.ದೇವರಾಜರನ್ನು ಮತ್ತು ನಿಗಮದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ಉತ್ಫಾದನಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಗಿರೀಶ್, ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ರಾಮಕೃಷ್ಣ, ಬೀಜ ನಿಗಮದ ರಾಜ್ಯ ನಿರ್ಧೇಶಕರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ  ವಡಗೂರು ಡಿ.ಎಲ್.ನಾಗರಾಜು, ಜಿಲ್ಲಾ ಉಪಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರಾದ ಜಿ.ರಾಜಾರೆಡ್ಡಿ, ಕೃಷಿ ಅಧಿಕಾರಿಗಳಾದ  ಶ್ರೀಮತಿ ಜ್ಯೋತಿ, ಪ್ರಗತಿಪರ ರೈತ ಮತ್ತು ಬೀಜೋತ್ಫಾದಕರಾದ ಶ್ರೀರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ  ಸಂಪಂಗಿರೆಡ್ಡಿ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!