• Sat. Apr 27th, 2024

PLACE YOUR AD HERE AT LOWEST PRICE

ಕೆಜಿಎಫ್: ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂಯ ಐಸಂದ್ರ ಮಿಟ್ಟೂರು ಗ್ರಾಮದ ಖಾ.ಸ ೮ ರಲ್ಲಿ ಸಮುದಾಯ ಭವನಕ್ಕಾಗಿ ಮಿಸಲಿಟ್ಟಿದ್ದ ಸ್ಥಳ ಒತ್ತುವರಿ ಜಾಗವನ್ನು ತೆರವಿನ ವೇಳೆ ಬಾರೀ ಹೈಡ್ರಾಮ ನಡುವೆ ಒತ್ತುವರಿ ತೆರವುಗೊಳಿಸುವಲ್ಲಿ ಗ್ರಾಪಂ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಯಶಸ್ವಿಯಾದರು.

ಕಳೆದ ೧೫ ದಿನಗಳ ಹಿಂದೆ ಡಾ.ಅಂಬೇಡ್ಕರ್ ಯುವ ವೇದಿಕೆ ಸಂಘಟನೆ ವತಿಯಿಂದ ಕಮ್ಯೂನಿಟಿ ಹಾಲ್‌ಗಾಗಿ ಕಾಯ್ದಿರಿಸಲಾಗಿದ್ದ ಈ  ಜಾಗ ಒತ್ತುವರಿ ತೆರವುಗೊಳಿಸಲು ಆಗ್ರಹಿಸಲಾಗಿತ್ತು.

ತಕ್ಷಣ ಗ್ರಾಪಂ ಅಧಿಕಾರಿಗಳು ಒತ್ತುವರಿದಾರರಿಗೆ ನೋಟೀಸ್ ಜಾರಿ ಮಾಡಿ ಇಂದು ಬಿಗಿ ಬಂದೋಬಸ್ತಿನಲ್ಲಿ ಅಳತೆ ಮಾಡಲು ಮುಂದಾಗುತ್ತಿದ್ದಂತೆ ಒತ್ತುವರಿದಾರ ಲಕ್ಷ್ಮಯ್ಯ ಹಾಗೂ ಅವರ ಪತ್ನಿ, ಪುತ್ರ ಪೆಟ್ರೋಲ್ ಸುರಿದುಕೊಂಡು ದೊಡ್ಡ ಹೈಡ್ರಾಮ ಸೃಷ್ಠಿಸಿದರು. ತಕ್ಷಣ ಪಿಎಸೈ ಗುರುರಾಜ್ ಚಿಂತಕಾಲ ಅವರು ಕಾರ‍್ಯಪ್ರವೃತ್ತರಾಗಿ ಅವಘಡ ತಪ್ಪಿಸಿ ಮೂವರನ್ನು ವಶಕ್ಕೆ ಪಡೆದು ಸಂಜೆ ಬಿಡುಗಡೆಗೊಳಿಸಿದರು.

ಗ್ರಾಪಂ ಅಧಿಕಾರಿಗಳು ಒತ್ತುವರಿ ಜಾಗದಲ್ಲಿದ್ದ ಶ್ಯಾಮಿಯಾನ, ಹಸು ಶೇಡ್, ಹುಲ್ಲು ರಾಶಿಯನ್ನು ವಾಟರ್ ಮ್ಯಾನ್‌ಗಳ ಮೂಲಕ ತೆರವುಗೊಳಿಸಿದರು. ನಂತರ ಜೆಸಿಬಿ ಮೂಲಕ ಸಮತಟ್ಟು ಮಾಡಿ ಈ ಸ್ವತ್ತು ಟಿ.ಗೊಲ್ಲಹಳ್ಳಿ ಗ್ರಾಪಂಯ ಸರ್ಕಾರಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ಮಾಡದಂತೆ ಬೋರ್ಡ್ ಹಾಕಿ ಯಶಸ್ವಿಯಾಗಿ ತೆರವು ಕಾರ್ಯ  ಪೂರ್ಣಗೊಳಿಸಿದರು.

ನಂತರ ಡಾ.ಅಂಬೇಡ್ಕರ್ ಯುವ ವೇದಿಕೆಯ ಅಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ಮಾತನಾಡಿ, ನಮ್ಮ ಸಂಘಟನೆಯಿಂದ ಗ್ರಾಮಸ್ಥರ ಮನವಿಯಂತೆ ೧೯೭೧-೭೨ನೇ ಸಾಲಿನಲ್ಲಿ ಕಮ್ಯೂಟಿನಿ ಹಾಲ್‌ಗಾಗಿ ಕಾಯ್ದಿರಿಸಲಾಗಿದ್ದ ಖಾ.ಸ.೮ರಲ್ಲಿ ಒತ್ತುವರಿ ತೆರವುಗೊಳಿಸಲು ಅನೇಕ ವರ್ಷಗಳಿಂದ ಗ್ರಾಮಸ್ಥರು ಹೋರಾಟ ಮಾಡಿದ್ದರು.

 ಒತ್ತುವರಿದಾರ ಗ್ರಾಮಸ್ಥರ ಮೇಲೆ ನ್ಯಾಯಲಯದಲ್ಲಿ ಮೊಕದ್ದೊಮೆ ದಾಖಲಿಸಿ ಖಾ.ಸ ೮/೧ ಎಂದು ಸೃಷ್ಟಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದರು. ನಾವೂ ಮತ್ತು ಅಧಿಕಾರಿಗಳು ಹಳೆ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿದ್ದೇವು. ಇಂದು ಯಶಸ್ವಿಯಾಗಿ ಒತ್ತುವರಿ ತೆರವುಗೊಳಿಸಿದ್ದು, ಶೀಘ್ರದಲ್ಲೇ ಡಾ.ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

 ರಾಜ್ಯ ಕಾರ್ಯದರ್ಶಿ ಶ್ರೀನಾಥ್ ನಾಸ್ತಿಕ್ ಮಾತನಾಡಿ, ಸುಮಾರು ೪೨ ವರ್ಷಗಳಿಂಧ ಹಿರಿಯ ಮುಖಂಡ ತಿಮ್ಮಯ್ಯ ನ್ಯಾಯಲಯ, ಮತ್ತು ಹಲವಾರು ಸಂಘ ಸಂಸ್ಥೆಗಳ ಮೊರೆ ಹೋಗಿದ್ದು, ಯಾವುದೇ ಪ್ರತಿಫಲ ಸಿಗದೆ , ಅಂಬೇಡ್ಕರ್ ಯುವ ವೇದಿಕೆ ಸಂಘಟನೆ ಗಮನಕ್ಕೆ ತಂದರು.

ತಕ್ಷಣವೇ ಗ್ರಾಪಂ ಅಧಿಕಾರಿಗಳ ಜತೆ ಸಂವಾದ ಮಾಡಿ ಕಾನೂನಾತ್ಮಕವಾಗಿ ಕೇವಲ ೧೫ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದು, ಇದು ೪೨ ವರ್ಷಗಳ ಹಳೆಯ ಪ್ರಕರಣಕ್ಕೆ ಸಿಕ್ಕ ಜಯವಾಗಿದ್ದು, ಈ ವೇಳೆ ಯಾವುದೇ ಒತ್ತಡಗಳಿಗೆ ಒಳಗಾಘದೆ ಗ್ರಾಪಂ ಪಿಡಿಒ, ಅಧ್ಯಕ್ಷರು ಪ್ರಾಮಾಣಿಕವಾಗಿ ಒತ್ತುವರಿ ತೆರವುಗೊಳಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗೋವಿಂದ್, ತಿಮ್ಮಯ್ಯ, ಚಲಪತಿ, ರಾಜಪ್ಪ, ಮುನಿಕೃಷ್ಣ, ಬ್ಯಾಟಪ್ಪ, ಮುನಿಯಪ್ಪ, ಕಾರಿ ರಾಧಕೃಷ್ಣ, ಸುಭ್ರಮಣಿ, ವೆಂಕಟೇಶ್, ಮಹಿಳಾ ಮುಖಂಡರಾದ ಸೌಮ್ಯ ಗೋವಿಂದಪ್ಪ, ಅರುಣಾ, ನಾಗರತ್ನ, ವೆಂಕಟರತ್ನ, ವೆಂಕಟಮ್ಮ ವೆಂಕಟೇಶಪ್ಪ ಸೇರಿದಂತೆ ಅನೇಕ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!