• Mon. Sep 16th, 2024

ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಬಗ್ಗೆ ಪೋಲಿಸ್ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ನಿರ್ಲಕ್ಷ್ಯ

PLACE YOUR AD HERE AT LOWEST PRICE

ಬಂಗಾರಪೇಟೆ:ನಾಳೆ ಬೆಳಿಗ್ಗೆ ತಾಲ್ಲೂಕಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ತಾಲ್ಲೂಕು ಆಡಳಿತ, ಸಮುದಾಯದವರು ಮತ್ತು ಸಾರ್ವಜನಿಕರು ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಆದರೆ ತಾಲ್ಲೂಕು ಆಡಳಿತದ ಆದೇಶವನ್ನು ಧಿಕ್ಕಸಿರುವ ಪೊಲೀಸ್ ಇಲಾಖೆ  ಸೇರಿದಂತೆ ಕೆಲ ಇಲಾಖೆಗಳ ನಿರ್ಲಕ್ಷತೆಯು ಸಮುದಾಯ ಮತ್ತು ಸಾರ್ವಜನಿಕರಲ್ಲಿ ಅಸಮದಾನ ಮೂಡಿಸಿದೆ.

ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡುವ ಬಗ್ಗೆ ದಿನಾಂಕ:30-07-2024ರಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂರವರ ಅದ್ಯಕ್ಷತೆಯಲ್ಲಿ ಮತ್ತು ತಹಶೀಲ್ದಾರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಸರ್ಕಾರಿ ಆದೇಶದಂತೆ ಜಯಂತಿಯನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು.

 

ಜಯಂತಿ ನಡೆಯುವ ಸಲುವಾಗಿ ಬಂಗಾರಪೇಟೆ ಪಟ್ಟಣದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಕಛೇರಿಗಳ ಮೇಲೆ 2 ದಿನ ದೀಪಾಲಂಕಾರ ಮಾಡಿ ಜಯಂತಿ ಆಚರಿಸಬೇಕು ಎಂದು ಸಭೆ ತೀರ್ಮಾನಿಸಲಾಯಿತು. ಜಯಂತಿ ಸಲುವಾಗಿ ದಿನಾಂಕ:25-08-2024 ಮತ್ತು 26-08-2024ರಂದು ತಾಲ್ಲೂಕು ಮಟ್ಟದ ಕಛೇರಿಗಳ ಮೇಲೆ ದೀಪಾಲಂಕಾರ ಕಡ್ಡಾಯವಾಗಿ ಮಾಡಬೇಕು ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಸ್ಥಬ್ಧಚಿತ್ರಗಳು ಕಡ್ಡಾಯವಾಗಿ ಭಾಗವಹಿಸಬೇಕು, ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು,  ಸಭೆಯ ಆದೇಶವನ್ನು ಕೆಲ ಇಲಾಖೆಗಳು ಉಲ್ಲಂಘಿಸಿವೆ.

ಪ್ರಮುಖವಾಗಿ ಬಂಗಾರಪೇಟೆಯಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಕೆಲವು ಇಲಾಖೆಗಳು ತೀರ್ಮಾನವನ್ನು ಉಲ್ಲಂಘಿಸಿದ್ದು ಈ ಬಗ್ಗೆ ಸಾರ್ವಜನಿಕರು, ಸಮುದಾಯದವರು ಖಂಡನೆ ವ್ಯಕ್ತಪಡಿಸಿದ್ದು ಈ ಬಗ್ಗೆ ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!