• Sun. May 5th, 2024

PLACE YOUR AD HERE AT LOWEST PRICE

ಸೊಸೈಟಿಗಳಿಗೆ ಇಂದು ಆಯಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸಾಲ ನೀಡುವಷ್ಟು ಶಕ್ತಿಯನ್ನು ಡಿಸಿಸಿ ಬ್ಯಾಂಕ್ ಮೂಲಕ ತುಂಬಿದ್ದು, ರೈತರು, ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಅವರು ತಾಲ್ಲೂಕಿನ ಕದರೀಪುರ ವಿಎಸ್‍‌ಎಸ್ಎಸ್‌ಎನ್ ಮೂಲಕ ಸೀತಂಪಲ್ಲಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ,
ರೈತರಿಗೆ ಕೆಸಿಸಿ ಸಾಲವನ್ನು ಎಟಿಎಂಗಳ ಮೂಲಕ ಸುಮಾರು 98.84 ಲಕ್ಷ ರೂ., ಸಾಲ ವಿತರಿಸಿ ಅವರು ಮಾತನಾಡಿದರು.
ಮಹಿಳೆ ಕುಟುಂಭದ ಕಣ್ಣಾಗಿದ್ದು, ತಮ್ಮ ಕುಟುಂಭ ಪೋಷಣೆಗಾಗಿ ಹೈನುಗಾರಿಕೆ, ಇತರೆ ಸ್ವಯಂ ಉದ್ಯೋಗಗಳ ಮೂಲಕ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.
ಕೇವಲ 5 ಗುಂಟೆ ಜಮೀನು ಹೊಂದಿರುವ ರೈತನಿಗೂ ಸಾಲ ನೀಡುವ ಮೂಲಕ ಕೃಷಿಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದರು.
ರೈತರ ದೇಶಕ್ಕೆ ಅನ್ನ ನೀಡುತ್ತಾನೆ ಆದರೆ ಹೆಚ್ಚಾಗಿ ಓದಿರಲ್ಲ ಮತ್ತು ಯಾವುದೇ ಸ್ವಾರ್ಥವಿಲ್ಲದೆ ಕೃಷಿ ಮಾಡಿ ಎಲ್ಲರಿಗೂ ಅನ್ನ ನೀಡುತ್ತಾನೆಂದರು.
ನಮ್ಮ ತಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಹಿಂದೆ ಅವರನ್ನು ಕೆಜಿಎಫ್ ಜೈಲಿನಲ್ಲಿ ಹಾಕಿದ್ದರು. ಇಂತಹ
ಭೂಮಿಯಲ್ಲಿ ನಾನು ಶಾಸಕರಾಗಿ ನಿಮ್ಮ ಸೇವೆ ಮಾಡುತ್ತಿರುವುದು ನನ್ನ ಪುಣ್ಯವೆಂದರು.
ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದೆ ನಷ್ಟದಲ್ಲಿದ್ದಾರೆ. ಆದರೆ ರೈತನಿಗೆ ಬೆನ್ನುಲುಬಾಗಲು ಇದೇ ಗಡಿಯಲ್ಲಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಜಾಗ ಕಾಯ್ದಿರಿಸಿ ಇದಕ್ಕೆ 75 ಲಕ್ಷ ರೂ., ಸಹ ಹಣ ಮೀಸಲಿಟ್ಟಿದ್ದೇವೆ ಎಂದರು.
ಇನ್ನೆರಡು ಮೂರು ವರ್ಷದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಿ ರೈತರ ಬೆಲೆಗಳಿಗೆ ಬಂಗಾರ ಬೆಲೆ ಬರುವಂತೆ ಮಾಡುತ್ತೇವೆಂದು ಭರವಸೆ ಕೊಟ್ಟರು.
ಹಿಂದೆ ರೈತರ ಕೊಳವೆ ಬಾವಿಗಳಲ್ಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದ್ದು, ಸ್ಥಳೀಯರ, ಹಿರಿಯರ ಅನುಭವದಿಂದ
ಅವರ ಸೂಚನೆಯಂತೆ ತಲಾ 1 ಕೋಟಿಯಲ್ಲಿ ಎರಡು ಚೆಕ್ ಡ್ಯಾಂಗಳನ್ನು ಮಲ್ಲಹಳ್ಳಿ ಬಳಿ ನಿರ್ಮಿಸಲಾಗಿದೆ.
 ಪಾಲಾರ್ ಕೆರೆ ನೀರು ಕೋಡಿ ಹರಿದು ನೀರು ತುಂಬಿವೆ ಜತೆಗೆ ಕೆಸಿ ವ್ಯಾಲಿ ಮತ್ತು ಉತ್ತಮ ಮಳೆಯಿಂದ ಎಲ್ಲಾ ಕೆರೆ-
ಕುಂಟೆಗಳು ತುಂಬಿ ಕೋಡಿ ಹರಿದಿದ್ದು, ಬೊರ್ವೇಲ್‍ಗಳು ಮರುಪೂರಣಗೊಂಡು ರೈತರು ಸಂವೃದ್ಧಿ ಜೀವನ ನಡೆಸುತ್ತಿದ್ದಾರೆಂದರು.
ಮಹಿಳಾ ಸಬಲೀಕರಣಕ್ಕಾಗಿ ಸದಾ ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಗ್ರಾಮಗಳಲ್ಲಿ 1 ಸಂಘ ಸಾಲ ಪಡೆದುಕೊಂಡರೆ ಮತ್ತಷ್ಟು ಮಂದಿ ಪಡೆದುಕೊಳ್ಳಲು ಮುಂದೆ ಬರುತ್ತಾರೆ.
ಬ್ಯಾಂಕ್ ತಾಯಿಯಂತೆ ಪವಿತ್ರಳು, ಸಕಾಲಕ್ಕೆ ಸಾಲ ಮರು ಪಾವತಿ ಮಾಡಿ ಬ್ಯಾಂಕ್ ಉಳಿಸಿ ಬೆಳೆಸಬೇಕು ಇದರಿಂದ ಮತ್ತಷ್ಟು ಮಹಿಳೆಯರಿಗೆ ನೆರವಾಗುತ್ತದೆ ಎಂದರು.
ಕೆಜಿಎಫ್‍ಗೆ 1200 ಮನೆಗಳು: ಕೆಜಿಎಫ್ ತಾಲೂಕಿನ 16 ಗ್ರಾಪಂಗಳಿಗೆ 1200 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಈ ಗ್ರಾಪಂಗೆ 70 ಮನೆಗಳು ಮಂಜೂರಾಗಿದ್ದು, ಗಾಳಿ-ಮಳೆಯಿಂದ ಮನೆ ಕಳೆದುಕೊಂಡವರು, ಬಡವರು ಈ ಸೌಲಭ್ಯವನ್ನು ಗ್ರಾಪಂಗಳ ಮೂಲಕ ಪಡೆದುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕದರೀಪುರ ಸೊಸೈಟಿ ಅಧ್ಯಕ್ಷ ಪದ್ಮನಾಭ ರೆಡ್ಡಿ, ಬೇತಂಗಲ ಸೊಸೈಟಿ ಅದ್ಯಕ್ಷ  ಕಾರಿ ಪ್ರಸನ್ನ, ವೆಂಗಸಂದ್ರ ಗ್ರಾಪಂ ಅಧ್ಯಕ್ಷ ಶಂಕರ್, ಸುಂದರಪಾಳ್ಯ ಅಧ್ಯಕ್ಷ ರಾಂಬಾಬು, ಕ್ಯಾಸಂಬಳ್ಳಿ ಸೊಸೈಟಿ ಅಧ್ಯಕ್ಷ ವಿಜಯರಾಘವ ರೆಡ್ಡಿ, ಕೆಡಿಎ ಮಾಜಿ ಅಧ್ಯಕ್ಷ ವೆಂಕಟಕೃಷ್ಣಾ ರೆಡ್ಡಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ತಾಪಂ ಮಾಜಿ ಸದಸ್ಯ ಜಯರಾಮ ರೆಡ್ಡಿ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!