• Mon. May 6th, 2024

ಶ್ರೀಕ್ಷೇತ್ರ ಕೈವಾರದಲ್ಲಿ ಪುರಂದರದಾಸರ ಆರಾಧನೋತ್ಸವ, ದಾಸಪಂಥದ ಹರಿಕಾರರು ಶ್ರೀಪುರಂದರದಾಸರು-ಎಂ. ಆರ್.ಜಯರಾಮ್

PLACE YOUR AD HERE AT LOWEST PRICE

 

ಪರಮಾತ್ಮನ ನಾಮಸ್ಮರಣೆಯನ್ನು ನಿರಂತರವಾಗಿ ಮಾನಸಿಕವಾಗಿ ಸ್ಮರಿಸುವವರು ಭಗವಂತನ ದಾಸರು, ಇಂತಹ ದಾಸಪಂಥವನ್ನು ಬೆಳೆಸಿದ ಶ್ರೀಪುರಂದರದಾಸರು ದಾಸಪಂಥದ ಹರಿಕಾರರು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀಪುರಂದರದಾಸರ ಆರಾಧನೆಯ ಪ್ರಯುಕ್ತ ಆಯೋಜಿಸಲಾಗಿದ್ದ ಪುರಂದರದಾಸೋತ್ಸವ ಉದ್ಘಾಟಿಸಿ ಮಾತನಾಡಿದರು.
ಕೈವಾರ ತಾತಯ್ಯನವರು ದಾಸಪಂಥವನ್ನು ತಮ್ಮ ಕೀರ್ತನೆಗಳಲ್ಲಿ ಕೊಂಡಾಡಿದ್ದಾರೆ. ಕನಕದಾಸರ ಮನೆಯ ಕಸಗುಡಿಸೋ ಬಡದಾಸ, ಪುರಂದರದಾಸರಿಗೆ ಮಡಿಮಾಡೋದಾಸ ಎಂದು ವಿನಮ್ರವಾಗಿ ತಾತಯ್ಯನವರು ಕನಕದಾಸರು ಹಾಗೂ ಪುರಂದರದಾಸರನ್ನು ಸ್ಮರಿಸಿದ್ದಾರೆ.

ಮಾನವ ಜನ್ಮದಲ್ಲಿ ಭಕ್ತನಾಗುವುದೇ ಶ್ರೇಷ್ಠವಾದುದು. ಭಕ್ತಿ ಮತ್ತು ಜ್ಞಾನ ಎರಡು ಒಂದೇ ಇದರಲ್ಲಿ ಯಾವುದೇ ಬೇಧವಿಲ್ಲ ಎಂದರು. ಕೈವಾರ ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ
ಕೈವಾರ ಕ್ಷೇತ್ರ ಸದ್ಗುರು ತಾತಯ್ಯನವರ ಪುಣ್ಯಕ್ಷೇತ್ರ. ಇಲ್ಲಿ ಪ್ರತಿವರ್ಷ ಗುರುಪೂರ್ಣಿಮೆಯಂದು ಶ್ರದ್ಧಾಭಕ್ತಿಗಳಿಂದ ಗುರುಪೂಜಾ ಸಂಗೀತೋತ್ಸವವು ನಡೆಯುತ್ತದೆ. ಈ ವರ್ಷದಿಂದ ಕರ್ನಾಟಕ ಸಂಗೀತದ ಪಿತಾಮಹರಾದ ಶ್ರೀ ಪುರಂದರದಾಸರ ಆರಾಧನೆಯನ್ನು ನೆರವೇರಿಸಲು ಸದ್ಗುರು ತಾತಯ್ಯನವರ ಕೃಪೆ ಹಾಗೂ ಧರ್ಮಾಧಿಕಾರಿಗಳ ಆದೇಶವಾಗಿದೆ. ಈ ನಿಟ್ಟಿನಲ್ಲಿ ನಾದಸುಧಾರಸ ವೇದಿಕೆಯಲ್ಲಿ ಪ್ರಪ್ರಥಮವಾಗಿ ಪುರಂದರದಾಸರ ಆರಾಧನೆಯ ಪ್ರಯುಕ್ತ ವಿದ್ವಾಂಸರುಗಳಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಾನರಾಶಿ ಬಾಲಕೃಷ್ಣ ಭಾಗವತರ್, ಹರಿಕಥಾ ವಿದ್ವಾನ್ ಜ್ಞಾನಮೂರ್ತಿ, ಭೈರತಿ ಆಂಜಿನಪ್ಪ, ಚಿಂತಲಪಲ್ಲಿ ಸೋಮಶೇಖರ್, ಅಶ್ವಿನಿ ಮೋಹನ್, ವಿದ್ಯಾ ಮತ್ತು ಲತಾ, ಕೈವಾರ ಡಾ.ಶ್ರೀನಿವಾಸ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೈವಾರ ರಾಮಣ್ಣ, ಜಾನಪದ ಪರಿಷತ್‌ನ ತಾಲ್ಲೂಕು ಅಧ್ಯಕ್ಷೆ ಲೀಲಾ ಲಕ್ಷ್ಮಿನಾರಾಯಣ್, ಸಾಯಿಲತಾ ತಂಡ, ಅಮೃತವರ್ಷಿಣಿ ತಂಡ, ಲಾವಣ್ಯ ಮುಂತಾದವರು ಪುರಂದರದಾಸರ ಕೀರ್ತನೆಗಳ ಗಾಯನವನ್ನು ಸಮರ್ಪಿಸಿದರು. ಎ.ವಿ.ವಿಶ್ವನಾಥ್ ತಂಡದವರು ಹಾರ್ಮೋನಿಯಂ ಸೋಲೋ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಕ್ಕವಾದ್ಯಗಳಲ್ಲಿ ಕೈವಾರ ಕೆ.ರಾಮಕುಮಾರ್,ಪಾಕಾಲ ಹೇಮಕುಮಾರ್, ಕೊಡಿಚೆರವು ನಾರಾಯಣಪ್ಪ, ಬ್ಯಾಲಹಳ್ಳಿ ಲಕ್ಷ್ಮಿನಾರಾಯಣಪ್ಪ, ಪೆದ್ದೂರು ನಾರಾಯಣಸ್ವಾಮಿ, ಕೋಲಾರ ರವಿಚಂದ್ರ, ಎ.ವಿ.ಶ್ರೀಹರಿ, ಶಶಿಕುಮಾರ್ ‌ಭಾಗವಹಿಸಿದ್ದರು.

 

ಇದನ್ನೂ ಓದಿ : ಕೋಲಾರದಲ್ಲಿ ಸಿದ್ದರಾಮಯ್ಯ ಹರಕೆಯ ಕುರಿ – ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!